newsfirstkannada.com

×

ಮರ್ಯಾದೆಗೆ ಭಯಬಿದ್ದ ತಂದೆಯಿಂದ ಘನಘೋರ ಕೃತ್ಯ.. ಬೆಂಗಳೂರಲ್ಲಿ ಮಚ್ಚಿನಿಂದ ಕೊಚ್ಚಿ ಮಗಳ ಕೊಲೆ ಮಾಡಿದ ಅಪ್ಪ

Share :

Published October 23, 2023 at 7:27am

    ಎಷ್ಟು ಹೇಳಿದ್ರೂ ಕೇಳ್ತಿಲ್ಲ, ಮರ್ಯಾದೆ ಹೋಗ್ತಿದೆ ಎಂದು ಗಲಾಟೆ

    ಪ್ರೀತಿ ಗುಂಗಲ್ಲಿ ತೇಲುತ್ತಿದ್ದ ಹುಡುಗಿಯ ಬಾಳು ದುರಂತವಾಗಿ ಅಂತ್ಯ

    ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋದ ತಂದೆ-ಮಗಳ ಜಗಳ

ಅಕೆ ಇನ್ನೂ ಬಾಳಿ ಬದುಕ ಬೇಕಾದ ಹುಡುಗಿ.. ಅದ್ರೆ ಕಾಲೇಜು ಓದುವಾಗಲೇ ಪ್ರೀತಿ ಪ್ರೇಮದ ಹುಚ್ಚಿಗೆ ಬಿದ್ದು ತಂದೆ ತಾಯಿಯ ಬುದ್ಧಿ ಮಾತನ್ನ ಹೇಳಿದ್ರೂ ಕೂಡ ಕೇಳಿರಲಿಲ್ಲ. ಈಕೆಯ ವರ್ತನೆಗೆ ತಂದೆ ಬೇಸತ್ತು ಹೋಗಿದ್ದ. ಮರ್ಯಾದೆಗೆ ಅಂಜಿದ್ದವನು ಮಾಡಿದ್ದು ಎಂಥಾ ಘನಘೋರ ಕೃತ್ಯ?.

ಇಲ್ಲಿ ಮೊಗ್ಗು ಅರಳುವ ಮುನ್ನವೇ ಬಾಡಿ ಹೋಗಿದೆ. ಪ್ರೀತಿ ಪ್ರೇಮ, ಪ್ರಣಯದ ಗುಂಗಲ್ಲಿ ತೇಲುತ್ತಿದ್ದ ಹುಡುಗಿಯ ಬಾಳು ದುರಂತ ಅಂತ್ಯ ಕಂಡಿದೆ. ತಂದೆ ತಾಯಿ ಮಕ್ಕಳಿಂದ ಒಳ್ಳೆಯ ಹೆಸರನ್ನ ನಿರೀಕ್ಷಿಸುವುದು ತಪ್ಪಲ್ಲ. ಅ ನಿರೀಕ್ಷೆ ಹುಸಿಯಾದ್ರೆ ಮಕ್ಕಳನ್ನ ಕೊಂದು ಬಿಡುವ ನಿರ್ಧಾರಕ್ಕೆ ಬರೋದು ತಪ್ಪು‌. ದುರಂತ ಅಂದ್ರೆ ಬೆಂಗಳೂರಲ್ಲಿ ಒಂದು ಮಾರ್ಯಾದಾ ಹತ್ಯೆ ನಡೆದಿದೆ.

ಸಿಲಿಕಾನ್ ಸಿಟಿಯಲ್ಲಿ ನಡೀತು ಮರ್ಯಾದಾ ಹತ್ಯೆ!

ಹೆಸರು ಪಲ್ಲವಿ ಜೀವನದಲ್ಲಿ ಸವಿಸಬೇಕಾದ ದಿನಗಳಿಗೆ ಬರವಿರಲಿಲ್ಲ. ಆಕೆಗೆ ಕೇವಲ 17 ವರ್ಷ‌‌ ಅಷ್ಟೇ, ಮೂಲತ ಹೆಚ್​​ಡಿ ಕೋಟೆಯ ಈ ಪಲ್ಲವಿ, ಕಾಲೇಜಲ್ಲಿ ಓದುತ್ತಿದ್ದಾಗ್ಲೇ ಪ್ರೀತಿ, ಪ್ರೇಮ ಅಂತ ಜಾರಿಬಿದ್ದಿದ್ಲು. ಈ ವಿಚಾರ ಗೊತ್ತಾಗ್ತಿದ್ದಂತೆ ತಂದೆ ಗಣೇಶ್ ಮತ್ತು ತಾಯಿ ಶಾರದಾ ಶಾಕ್​​ ಆಗಿದ್ರು. ಮಗಳಿಗೆ ಎಚ್ಚರಿಕೆ ಕೊಟ್ಟು ಸುಮ್ಮನಿದ್ರು. ಆದ್ರೆ, ಪ್ರೀತಿಯಲ್ಲಿ ಬಿದ್ದ ಮಗಳು ಮತ್ತಷ್ಟು ಜಿದ್ದಿಗೆ ಬಿದ್ದಿದ್ಲು. ಊರಲ್ಲೇ ಇದ್ರೆ ಇದು ಇನ್ನೂ ಹೆಚ್ಚಾಗುತ್ತೆ ಅಂತ ಬೆಂಗಳೂರಿಗೆ ಕಳುಹಿಸಿದ್ರು.

ಮರ್ಯಾದೆಗೆ ಬಿತ್ತು ಹೆಣ!

  • ಊರಿಂದ ದೂರಾದ್ರೆ ಇವೆಲ್ಲ ಬಿಡಬಹುದು ಅನ್ನೋ ಅಲೋಚನೆ
  • ಪಲ್ಲವಿಯನ್ನ ನಾಗನಾಥಪುರದಲ್ಲಿದ್ದ ಮಾವ​ನ ಮನೆಗೆ ಕಳುಹಿಸಿದ್ರು
  • ಅಕ್ಟೋಬರ್ 14 ರಂದು ಮಾವನ ಮನೆಯಿಂದ ಪಲ್ಲವಿ ನಾಪತ್ತೆ
  • 20ನೇ ತಾರೀಖಿನಂದು ಯುವತಿಯನ್ನ ಪತ್ತೆ ಹಚ್ಚಿದ್ದ ಪೊಲೀಸರು
  • ಪಲ್ಲವಿಯನ್ನ ಮತ್ತೆ ಮಾವ ಶಾಂತಕುಮಾರ್ ಮನೆಗೆ ಕಳುಹಿಸಿದ್ರು
  • ನಿನ್ನೆ ಬೆಳಿಗ್ಗೆ 10.30ರ ಸುಮಾರಿಗೆ ಮನೆಗೆ ಬಂದ ಪಲ್ಲವಿಯ ತಂದೆ
  • ಪತ್ನಿ ಶಾರದಾ, ಪಲ್ಲವಿ ಜೊತೆ ತಂದೆ ಗಣೇಶನಿಂದ ಗಲಾಟೆ ಆಗಿದೆ
  • ಎಷ್ಟು ಹೇಳಿದ್ರೂ ಕೇಳ್ತಿಲ್ಲ, ಮರ್ಯಾದೆ ಹೋಗ್ತಿದೆ ಎಂದು ಗಲಾಟೆ
  • ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋದ ತಂದೆ-ಮಗಳ ಜಗಳ

ಹುಡುಗಿ ಬಂದು ಒಂದು ಒಂದೂವರೆ ತಿಂಗಳು ಅಷ್ಟೇ ಆಗಿತ್ತು. 15 ದಿನ ಕೆಲಸಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದ್ದಳು. ಮನೆ ಮಾಲೀಕನಿಗೆ ನಮ್ಮತ್ತೆ ಮಗಳು ಇಲ್ಲೆ ಕೆಲಸಕ್ಕೆ ಸೇರಿಕೊಂಡವಳೆ ಎಂದು ಹೇಳಿದ್ವಿ.

ಕೋಟೆಗೌಡ, ಸ್ಥಳೀಯ

ಜಗಳ ವಿಕೋಪಕ್ಕೆ ತಿರುಗ್ತಿದ್ದಂತೆ ಮನೆಯಲ್ಲಿದ್ದ ಮಚ್ಚನ್ನ ಗಣೇಶ್​​​ ತೆಗೆದಿದ್ದ. ಮಚ್ಚಿನಿಂದ ಮಗಳು ಪಲ್ಲವಿಯನ್ನ ಕೊಚ್ಚಿ ಹತ್ಯೆ ಮಾಡಿದ್ದ. ಬಿಡಿಸಲು ಬಂದ ಪತ್ನಿ ಶಾರದಾ ಹಾಗೂ ಬಾಮೈದ ಶಾಂತಕುಮಾರ್ ಮೇಲೆ ಕೂಡ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ‌. ಗಾಯಾಳುಗಳನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗ್ತಿದೆ.

ಪ್ರಾಬ್ಲಮ್ ಅಂದರೆ ಅವರ ಮಿಸಸ್​ ಮತ್ತು ತಮ್ಮ ಮಗಳನ್ನು ಮಚ್ಚನಿಂದ ಕೊಚ್ಚಿ ಹಾಕಿದ್ದಾರೆ ಎಂದು ಸುದ್ದಿ ಬಂತು. ಅದೇನೋ ಗೊತ್ತಿಲ್ಲ, ಅದೇನೋ ಲವ್ ಮ್ಯಾಟರ್ ಅದು ಇದು ಎಂದು ಹೇಳುತ್ತಿದ್ದಾರೆ.

ಸ್ಥಳೀಯ 

ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ರು. ಮರ್ಯಾದೆಗೆ ಅಂಜಿ ಹೆತ್ತಮಗಳನ್ನ ಹತ್ಯೆಗೈದಿದ್ದು ಮಾತ್ರ ನಿಜಕ್ಕೂ ದುರಂತವೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮರ್ಯಾದೆಗೆ ಭಯಬಿದ್ದ ತಂದೆಯಿಂದ ಘನಘೋರ ಕೃತ್ಯ.. ಬೆಂಗಳೂರಲ್ಲಿ ಮಚ್ಚಿನಿಂದ ಕೊಚ್ಚಿ ಮಗಳ ಕೊಲೆ ಮಾಡಿದ ಅಪ್ಪ

https://newsfirstlive.com/wp-content/uploads/2023/10/BNG_GIRL_MURDER_1.jpg

Load More