ಸಿಲಿಕಾನ್ ಸಿಡಿಯ ಅರಮನೆ ಮೈದಾನದಲ್ಲಿ ನಡೆಯುವ ಬೆಂಗಳೂರು ಕಂಬಳ
ಕಂಬಳಕ್ಕೆ ಪುನೀತ್ ಹೆಸರ ಜತೆ ಇನ್ನೊಬ್ಬ ಹಿರಿಯ ನಟನ ಹೆಸರು ಯಾವುದು?
ಮೊಟ್ಟ ಮೊದಲ ಬಾರಿಗೆ ಬೆಂಗಳೂರಲ್ಲಿ ನಡೆಯುತ್ತಿರುವ ತುಳುನಾಡಿನ ಕಂಬಳ
ಇತಿಹಾಸದಲ್ಲೇ ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಕರಾವಳಿಯ ಜಾನಪದ ಆಟ ಕಂಬಳ ನಡೆಯಲಿದೆ. ಲಕ್ಷಾಂತರ ಜನ ಸೇರಲು ಸಕಲ ತಯಾರಿಯು ನಡೆದಿದೆ. ಈ ಮಧ್ಯೆ ಕಂಬಳ ಸಮಿತಿಯು ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನ ನೀಡಿದೆ.
ಕರಾವಳಿಯ ಜಾನಪದ ಆಟ.. ಹಳ್ಳಿ ಸೊಗಡಿನ ಹಬ್ಬ.. ತುಳುನಾಡಿನ ಸಾಂಸ್ಕೃತಿಕ ಕ್ರೀಡೆ.. ಕಂಬಳ ಮೊಟ್ಟ ಮೊದಲ ಬಾರಿಗೆ ರಾಜಧಾನಿ ಪ್ರವೇಶ ಮಾಡಿದೆ. ವಿಶೇಷ ಅಂದ್ರೆ ಬೆಂಗಳೂರು ಕಂಬಳಕ್ಕೆ ಅಪ್ಪು ಹೆಸರಿಡಲು ಕಂಬಳ ಸಮಿತಿ ನಿರ್ಧರಿಸಿದೆ.
ಸೂರ್ಯ-ಚಂದ್ರ, ಕೋಟಿ-ಚೆನ್ನಯ, ರಾಮ-ಲಕ್ಷ್ಮಣ
ಕರಾವಳಿಯ ಜಾನಪದ ಆಟ ಕಂಬಳ ನೋಡೋದೆ ಕಣ್ಣಿಗೊಂದು ಹಬ್ಬ. ಅಂತಹದ್ದರಲ್ಲಿ ಈ ಆಟ ಇದೀಗ ರಾಜಧಾನಿಯಲ್ಲಿ ಸದ್ದು ಮಾಡಲು ತುದಿಗಾಲಲ್ಲಿ ನಿಂತಿದೆ. ಇದೇ ತಿಂಗಳ 25 ಮತ್ತು 26ರಂದು ನಗರದ ಪ್ಯಾಲೇಸ್ ಮೈದಾನದಲ್ಲಿ ಅದ್ಧೂರಿಯಾಗಿ ಅಬ್ಬರಿಸಲಿದೆ. ಇದಕ್ಕಾಗಿ ಈಗಾಗಲೇ ಭರದ ಸಿದ್ಧತೆ ನಡೆಯುತ್ತಿದ್ದು, ಕರೆ ನಿರ್ಮಾಣ ಕಾರ್ಯವೂ ಪೂರ್ತಿಗೊಂಡಿದೆ.
ಬೆಂಗಳೂರು ಕಂಬಳ ನಮ್ಮ ಕಂಬಳ ಎಂಬ ಟ್ಯಾಗ್ ಲೈನ್ನೊಂದಿಗೆ ಈ ಜಾನಪದ ಕ್ರೀಡೆ ಸೆಟ್ಟೇರಲಿದೆ. ಇನ್ನು ಈ ಜೋಡುಕರೆ ಕಂಬಳಕ್ಕೆ ಹೆಸರು ಫಿಕ್ಸ್ ಆಗಿರಲಿಲ್ಲ. ಈಗಾಗಲೇ ಇರುವ ಕಂಬಳಗಳ ಕರೆಗಳಿಗೆ ಸೂರ್ಯ-ಚಂದ್ರ, ಕೋಟಿ-ಚೆನ್ನಯ, ರಾಮ-ಲಕ್ಷ್ಮಣ, ಕಾಂತಬಾರೆ-ಬೂದಬಾರೆ ಎಂಬಿತ್ಯಾದಿ ಹೆಸರುಗಳಿವೆ. ಹಾಗಾಗಿ ಬೆಂಗಳೂರಿಗೆ ಯಾವ ಹೆಸರಿಡಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಅದಕ್ಕೆ ತೆರೆಬಿದ್ದಿದೆ. ಕರುನಾಡ ರಾಜಕುಮಾರ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ಬಾರಿ ಬೆಂಗಳೂರು ಕಂಬಳಕ್ಕೆ ಕನ್ನಡದ ಲೆಜೆಂಡ್ ನಟರಾದ ರಾಜ್ ಕುಮಾರ್ ಮತ್ತು ಪುನೀತ್ ಅವರ ಹೆಸರುಗಳು ಜೊತೆ ಸೇರಿಸುವಂತೆ ಪುನೀತ್-ರಾಜ್ ಕಂಬಳ ಎಂದು ನಾಮಕರಣ ಮಾಡಲಾಗಿದೆ.
ಪುನೀತ್ ರಾಜ್ ಎಂದು ಹೆಸರಿಡುವುದು ನಮ್ಮ ಸಮಿತಿಯಿಂದ ಚರ್ಚೆ ನಡೆಯುತ್ತಿದ್ದು ಆಲ್ಮೋಸ್ಟ್ ಅದು ಕೊನೆ ನಿರ್ಧಾರಕ್ಕೆ ಬಂದಿದೆ. ಇನ್ನು ಅದರ ಉದ್ಘಾಟನೆಯನ್ನು ಅಶ್ವಿನ್ ಪುನೀತ್ ರಾಜ್ಕುಮಾರ್ರಿಗೆ ಆಹ್ವಾನ ಮಾಡಿದ್ದೇವೆ. ಇದಕ್ಕೆ ಅವ್ರು ಕೂಡ ಒಪ್ಪಿಕೊಂಡಿದ್ದಾರೆ.
ಉಮೇಶ್ ಶೆಟ್ಟಿ, ಸಂಘಟನಾ ಸಮಿತಿ ಅಧ್ಯಕ್ಷ
ಉಳಿದಂತೆ ಬೆಂಗಳೂರು ಕಂಬಳದ ಸಿದ್ಧತೆಗಳು ಪೂರ್ಣಗೊಂಡಿದ್ದು ಕಂಬಳ ಕರೆಗಾಗಿ ಮತ್ತು ಇತರ ಬಳಕೆಗಾಗಿ ಪ್ಯಾಲೇಸ್ ಗ್ರೌಂಡ್ನಲ್ಲಿ 2 ಬೋರ್ ವೆಲ್ ಕೊರೆಸಲಾಗಿದೆ.. ಈ ಎರಡೂ ಬೋರ್ ವೆಲ್ ನಲ್ಲೂ ಯಥೇಚ್ಛವಾಗಿ ನೀರು ದೊರಕಿದ್ದು ಕಂಬಳಕ್ಕೆ ಪೂರಕ ವಾತಾವರಣ ಕಲ್ಪಿಸಿದೆ. ಜೊತೆಗೆ ಇಲ್ಲಿರುವ ಹುತ್ತಗಳಿಗೂ ಕಟ್ಟೆಯನ್ನು ಕಟ್ಟಿ ಸಂರಕ್ಷಿಸಿಕೊಂಡು ಬರಲಾಗಿದೆ. ಒಂದು ಕಾಲದಲ್ಲಿ ಸರ್ಕಸ್ ನಡೆಯುತ್ತಿದ್ದ ಈ ಗ್ರೌಂಡ್ ಕ್ರಮೇಣ ಕಸದ ರಾಶಿಗಳಿಂದ, ಮುಳ್ಳುಗಂಟೆಗಳಿಂದ ತುಂಬಿತ್ತು. ಸದ್ಯ ಕಂಬಳದ ನೆಪದಲ್ಲಿ ಗ್ರೌಂಡ್ ಕೂಡ ಸ್ವಚ್ಛಗೊಂಡಿದೆ.
ಇದೇ ನವೆಂಬರ್ ಶನಿವಾರ ಮತ್ತು ಭಾನುವಾರ ಕಂಬಳ ವಿಜೃಂಭಣೆಯಿಂದ ನಡೆಯಲಿದ್ದು, ತುಳುನಾಡಿನ ಗ್ರಾಮೀಣ ಕ್ರೀಡೆಯನ್ನು ಕಣ್ತುಂಬಿಕೊಳ್ಳಲು ರಾಜಧಾನಿ ಕಾತರಿಸುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ