ನಂದಿ ಲಿಂಕ್ ಗ್ರೌಂಡ್ಸ್ನಲ್ಲಿ ಅದ್ಧೂರಿ ಬರ್ತ್ ಡೇ ಸೆಲೆಬ್ರೇಷನ್
ಕಿಚ್ಚ ಸುದೀಪ್ರನ್ನ ನೋಡಿ ಅಭಿಮಾನಿಗಳು ಫುಲ್ ಖುಷ್
ಹೇಗಿತ್ತು ಬರ್ತ್ ಡೇ ಸಲೆಬ್ರಷನ್? ಕಿಚ್ಚನಿಗೆ ಸರ್ಪ್ರೈಸ್ ಗಿಫ್ಟ್
ಅಭಿನಯ ಚಕ್ರವರ್ತಿ, ಬಾದ್ ಷಾ, ಕಿಚ್ಚ ಸುದೀಪ್ ಇಂದು 50ನೇ ಹುಟ್ಟು ಹಬ್ಬದ ಸಂಭ್ರಮ. ನಟ ಸುದೀಪ್ ಬರ್ತ್ಡೇಯಲ್ಲಿ ಹೇಗೆಲ್ಲ ಸಂಭ್ರಮ ನಡೆಯಿತು. ಮಿಡ್ನೈಟ್ ಸಲೆಬ್ರೇಷನ್ ಹೇಗಿತ್ತು ಗೊತ್ತಾ?
ದಿ ವಿಲನ್, ಪೈಲ್ವಾನ್ ಹೀಗೆ ಅಭಿಮಾನಿಗಳು ಒಂದೊಂದು ಹೆಸರಿನ ಮೂಲಕ ಆರಾಧಿಸೋ ಕಿಚ್ಚ ಸುದೀಪ್ಗೆ, ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ಹವಾ ಇದೆ. ತೆಲುಗು, ಹಿಂದಿ, ತಮಿಳು ಮಂದಿಗೂ ಸುದೀಪ್ ಚಿರಪರಿಚಿತರು. 50ನೇ ವಯಸ್ಸಿಗೆ ಕಾಲಿಟ್ಟ ನಟ ಸುದೀಪ್ ನಂದಿ ಲಿಂಕ್ ಗ್ರೌಂಡ್ಸ್ನಲ್ಲಿ ಅಭಿಮಾನಿಗಳ ಜೊತೆ ಭರ್ಜರಿ ಬರ್ತ್ ಡೇ ಸೆಲೆಬ್ರೇಷನ್ ಮಾಡಿಕೊಂಡಿದ್ದಾರೆ.
ನಂದಿಲಿಂಕ್ ಗ್ರೌಂಡ್ನಲ್ಲಿ ಅದ್ಧೂರಿ ಸಲೆಬ್ರೆಷನ್
ಅಭಿಮಾನಿಗಳ ಜೊತೆ ಬರ್ತಡೇ ಸೆಲೆಬ್ರೇಷನ್ ಮಾಡಿಕೊಳ್ಳಲು ನಂದಿಲಿಂಕ್ ಗ್ರೌಂಡ್ಸ್ಗೆ ಆಗಮಿಸಿದ ನಟ ಸುದೀಪ್, ಮೊದಲಿಗೆ ಅಭಿಮಾನಿಗಳನ್ನ ಮಾತಾಡಿಸಿ, ಫೋಟೋ ಕ್ಲಿಕ್ಕಿಸಿಕೊಳ್ಳಲು ನಿಂತ್ರು. ಕಿಚ್ಚ ಆಗಮಿಸುತ್ತಿದ್ದಂತೆ, ಅಭಿಮಾನಿಗಳು ಮುಗಿಬಿದ್ರು.
ಅಭಿನಯ ಚಕ್ರವರ್ತಿ ಜೊತೆ ಅಭಿಮಾನಿಗಳು ತಮ್ಮ ತಮ್ಮ ಮೊಬೈಲ್ಗಳ ಮೂಲಕ ಸೆಲ್ಫಿ ಕ್ಲಿಕ್ಕಿಸಿಕೊಂಡ್ರು. ಇನ್ನು ಕೆಲವರು ಕಿಚ್ಚನ ಕೈಗೆ ಮುತ್ತಿಟ್ಟು. ಬಾಚಿ ತಬ್ಬಿಕೊಂಡ್ರು. ಮತಷ್ಟು ಜನ ದೃಷ್ಟಿ ತೆಗೆಯುವ ಮೂಲಕ ತಮ್ಮ ತಮ್ಮ ಅಭಿಮಾನವನ್ನ ವ್ಯಕ್ತಪಡಿಸಿದ್ರು.
ವಿಶೇಷ ಅಂದ್ರೆ ತಡರಾತ್ರಿ ಬ್ಲ್ಯಾಕ್ ಗಾಗಲ್ಸ್, ಕಿಚ್ಚನ ಟೀ ಶರ್ಟ್ ಧರಿಸಿ ಬಂದ ಅಭಿಮಾನಿ ಒಬ್ಬ ತನ್ನ ಹೇರ್ ಕಟಿಂಗ್ ಮೂಲಕ ಸುದೀಪ್ರನ್ನೇ ಬೆಚ್ಚಿಬೀಳಿಸಿದ್ದ. ಎರಡ್ಮೂರು ಸಲ ಸುದೀಪ್ ಆತನ ತಲೆ ತಿರುಗಿಸಿ, ಮುರುಗಿಸಿ ನೋಡಿದ್ರು. ಈ ವೇಳೆ ಗ್ಯಾಪಲ್ಲಿ ಕಿಚ್ಚನಿಗೆ ಕಿಸ್ಸನ್ನೂ ಕೊಟ್ಬಿಟ್ಟ ಆ ಆಭಿಮಾನಿ.
ಕಾರ್ಯಕ್ರಮ ನಡೆಯುತ್ತಿರುವಾಗ ಬ್ಯಾಗ್ರೌಂಡ್ನಲ್ಲಿ ಸುದೀಪ್ ಸಿನಿಮಾದ ಹಾಡುಗಳದ್ದೇ ಅಬ್ಬರ.. ಫ್ಯಾನ್ಸ್ಗಳ ಡ್ಯಾನ್ಸ್ನದ್ದೇ ಆರ್ಭಟ ಇತ್ತು. ಸುದೀಪ್ ಪತ್ನಿ ಪ್ರಿಯಾ ಕಿಚ್ಚನಿಗಾಗಿ ಸರ್ಪ್ರೈಸ್ ಗಿಫ್ಟ್ ಒಂದನ್ನ ನೀಡಿದ್ರು. ಅದರಂತೆ ಕಿಚ್ಚ ನಟನೆಯ ಅಷ್ಟೂ ಚಿತ್ರಗಳನ್ನ ಡ್ರೋನ್ ಲೈಟಿಂಗ್ ಶೋ ಮೂಲಕ ಪ್ರದರ್ಶನಗೊಳಿಸಲಾಯ್ತು.
ಬರ್ತ್ಡೇ ಹಬ್ಬದ ಮಧ್ಯೆ ಎಲ್ಲ ಲೈಟ್ಸ್ ಆಫ್ ಮಾಡಿ ಮೊಬೈಲ್ ಫ್ಲಾಶ್ ಲೈಟ್ ಮಾತ್ರವೇ ಆನ್ ಮಾಡಿ ಅಭಿಮಾನಿಗಳು ಶುಭಾಶಯದ ದೀಪ ಬೆಳಗಿದ್ರು. ಇನ್ನು ನಂದಿ ಲಿಂಕ್ ಗ್ರೌಂಡ್ಸ್ಗೆ ಆಗಮಿಸಿದ್ದ ಅಭಿಮಾನಿಗಳಲ್ಲಿ ಕೆಲವರು ದರ್ಶನ್ ಹಾಗೂ ಸುದೀಪ್ ಒಟ್ಟಿಗೆ ಇರುವ ಫೋಟೋ ಪ್ರದರ್ಶಿಸಿದ್ರು. ಸೂರ್ಯ, ಚಂದ್ರ ಹೆಂಗೋ.. ನಮ್ಮ ಕನ್ನಡ ಚಿತ್ರ ರಂಗಕ್ಕೆ ನೀವಿಬ್ರು ಹಂಗೆ ಅಂತ ಬರೆದು ತಂದಿದ್ರು. ಇಬ್ಬರ ಸ್ನೇಹ ಸಮ್ಮಿಲನವನ್ನು ಅಭಿಮಾನಿಗಳು ಬಯಸಿದ್ರು.
ನಂದಿ ಲಿಂಕ್ ಗ್ರೌಂಡ್ಸ್ಗೆ ಆಗಮಿಸಿದ್ದ ಅಭಿಮಾನಿಗಳಲ್ಲಿ ಕೆಲವರು ದರ್ಶನ್ ಹಾಗೂ ಸುದೀಪ್ ಒಟ್ಟಿಗೆ ಇರುವ ಫೋಟೋ ಪ್ರದರ್ಶಿಸಿದ್ರು, ಸೂರ್ಯ, ಚಂದ್ರ ಹೆಂಗೋ, ನಮ್ಮ ಕನ್ನಡ ಚಿತ್ರ ರಂಗಕ್ಕೆ ನೀವಿಬ್ರೂ ಹಂಗೆ ಅಂತ ಬರೆದು ಫೋಟೋ ಪ್ರದರ್ಶಿಸಿ ಇಬ್ಬರ ಸ್ನೇಹ ಸಮ್ಮಿಲನ ಬಯಸಿದ್ರು. #newsfirstlive #KichchaSudeep #birthday #Darshan pic.twitter.com/ISOPtUtYG0
— NewsFirst Kannada (@NewsFirstKan) September 2, 2023
ಇನ್ನು, ಬರ್ತ್ಡೇ ಸೆಲೆಬ್ರೇಷನ್ಗೂ ಮುನ್ನ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದ ಕಿಚ್ಚ ಸುದೀಪ್ಗೆ ನಟ ಡಾಲಿ ಧನಂಜಯ್, ವಸಿಷ್ಟ ಸಿಂಹ, ಪ್ರೇಮ್, ನಟಿ ಪೂಜಾಗಾಂಧಿ, ಸಂಜನಾ ಗಲ್ರಾನಿ ಅಡ್ವಾನ್ಸ್ ವಿಷ್ ಮಾಡಿದ್ರು.
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್, ಯಾಕೋ ಏನೋ ಗೊತ್ತಿಲ್ಲ.. ಎಲ್ಲಾರೂ ಸುಳ್ಳು ಹೇಳ್ತಾ ಇದ್ದಾರೆ. ನನಗೆ ಐವತ್ತಾಯ್ತು, ನನಗೆ ಐವತ್ತಾಯ್ತು ಅಂತ ನಾನು ಇವಾಗ 29 ದಾಟುತ್ತಿದ್ದೇನೆ ಎಂದು ಹೇಳಿದ್ದು ತಮಾಷೆಯಾಗಿ ಕಾಂಡಿತು.
ಒಂದು ಸ್ಪೆಷಲ್ ಗಿಫ್ಟ್ ಕೊಡೋ ಕಿಚ್ಚ
ಪ್ರತಿ ಸಲ ತನ್ನ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಏನಾದ್ರು ಒಂದು ಸ್ಪೆಷಲ್ ಗಿಫ್ಟ್ ಕೊಡೋ ಕಿಚ್ಚ. ಈ ಬಾರಿ ತಮ್ಮ ಬರ್ತ್ ಡೇಗೂ ಮೊದಲೇ ಸರ್ಪ್ರೈಸ್ ಕೊಟ್ಟಿದ್ದಾರೆ. ಮತ್ತೆ ಡೈರೆಕ್ಟರ್ ಕ್ಯಾಪ್ ಹಾಕ್ತಿದ್ದಾರೆ. ‘ಕೆಕೆ’ ಅನ್ನೋ ಚಿತ್ರ ನಿರ್ದೇಶಿಸ್ತಿದ್ದು, ಅದರ ಲುಕ್ ರಿಲೀಸ್ ಆಗಿದೆ. ಇನ್ನು ಬರ್ತ್ಡೇ ದಿನವೇ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾದ ಟೀಸರ್ ಕೂಡ ರಿಲೀಸ್ ಆಗಿದೆ.
ಕಿಚ್ಚನ ಬರ್ತ್ಡೇ ಸೆಲೆಬ್ರೇಷನ್ ಸಂಭ್ರಮದಲ್ಲಿ ಅಭಿಮಾನಿಗಳು ರಾತ್ರಿ ಕಳೆದಿದ್ದಾರೆ. ಇವತ್ತೀಡಿ ಕಿಚ್ಚನ ಗುಂಗಲ್ಲೇ ಇರೋದು ಕನ್ಫರ್ಮ್. ನ್ಯೂಸ್ ಫಸ್ಟ್ ವತಿಯಿಂದಲೂ ಅಭಿನಯ ಚಕ್ರವರ್ತಿಗೆ 50ನೇ ಹುಟ್ಟು ಹಬ್ಬದ ಶುಭಾಶಯಗಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ