newsfirstkannada.com

ರೀಲ್​ ಅಲ್ಲ ರಿಯಲ್​.. ಬರೋಬ್ಬರಿ 15 ಕಿ.ಮೀ​ ಚೇಸ್​ ಮಾಡಿ ಭ್ರಷ್ಟ ಅಧಿಕಾರಿಯನ್ನ ಹಿಡಿದ ಲೋಕಾಯುಕ್ತರು..!

Share :

15-07-2023

    ಲೋಕಾಯುಕ್ತರನ್ನು ನೋಡ್ತಿದ್ದಂತೆ ಕಾಲ್ಕಿತ್ತಿದ್ದ ಫುಡ್​ ಇನ್​ಸ್ಪೆಕ್ಟರ್

    ಬೆಂಗಳೂರಿನಲ್ಲಿ ಲಂಚ ಪಡೆಯುವಾಗ ಗಾಳ ಹಾಕಿದ ಲೋಕಾ

    ಚೇಸಿಂಗ್​ ಮಾಡಿ ಫಿಲಂ ಸ್ಟೈಲ್​ನಲ್ಲಿ ಹಿಡಿದ ಲೋಕಾಯುಕ್ತರು

ಬೆಂಗಳೂರು: ಭ್ರಷ್ಟ ಸರ್ಕಾರಿ ಸಿಬ್ಬಂದಿಯನ್ನು ಫಿಲಂ ಸ್ಟೈಲ್​ನಲ್ಲಿ 15 ಕಿಲೋ ಮೀಟರ್​ ಕಾರಿನ ಮೂಲಕ ಚೇಸಿಂಗ್​ ಮಾಡಿ ಲೋಕಾಯುಕ್ತ ಅಧಿಕಾರಿಗಳು ಹಿಡಿದಿದ್ದಾರೆ.

ಭ್ರಷ್ಟ ಮಹಂತೆ ಗೌಡ ಎನ್ನುವರು ಲೋಕಾಯುಕ್ತರಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದ ಅಧಿಕಾರಿ. ನಗರದ ಕೆ.ಜಿ ಸರ್ಕಲ್ ಬಳಿಯಿರುವ ತಹಶೀಲ್ದಾರ್ ಕಚೇರಿಯಲ್ಲಿ ಮಹಂತೆ ಗೌಡ ಫುಡ್​ ಇನ್​ಸ್ಪೆಕ್ಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಂಗದಾಮಯ್ಯ ಎನ್ನುವರು ಟ್ರೇಡ್‌ ಲೈಸೆನ್ಸ್​ಗಾಗಿ ಮಹಂತೆಗೌಡ ಬಳಿ ತೆರಳಿದ್ದಾಗ 1 ಲಕ್ಷ ರೂಪಾಯಿಗಳ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ 43 ಸಾವಿರ ಹಣ ಪಡೆಯುವಾಗ ಲೋಕಾಯುಕ್ತ ತಂಡ ಆ ಸ್ಥಳಕ್ಕೆ ತೆರಳಿದೆ. ಹಣ ಪಡೆದ ಅಧಿಕಾರಿ, ಇದು ಲೋಕಾಯುಕ್ತರ ಟ್ರ್ಯಾಪ್​ ಎಂದು ತಿಳಿದುಕೊಂಡು ಕಾರಿನಲ್ಲಿ ಎಷ್ಕೇಪ್​ ಆಗಲು ಪ್ರಯತ್ನಿಸಿದ್ದಾನೆ. ಲೋಕಾಯುಕ್ತರ ಕೈಗೆ ಸಿಗದೇ ಕಾರಿನಲ್ಲಿ ಸುಮಾರು 15 ಕಿ.ಮೀ ವರೆಗೆ ತಪ್ಪಿಸಿಕೊಂಡು ಹೋಗಿದ್ದಾನೆ. ಆದರೆ ಲೋಕಾಯುಕ್ತರು ಫಿಲಂ ಸ್ಟೈಲ್​ನಲ್ಲಿ ಚೇಸ್ ಮಾಡಿ ನೆಲಮಂಗಲ ಬಳಿಯ ಸೊಂಡೇ‌ಕೊಪ್ಪ ಸಮೀಪ ಭ್ರಷ್ಟ ಅಧಿಕಾರಿಯ ಕಾರಿಗೆ ಮುಂದೆ ಬಂದು ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಕಾರು ಅಲ್ಲಿಗೆ ಸ್ಟಾಪ್ ಆಗಿದ್ದರಿಂದ ಲೋಕಾಯುಕ್ತರು ಭ್ರಷ್ಟ ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೀಲ್​ ಅಲ್ಲ ರಿಯಲ್​.. ಬರೋಬ್ಬರಿ 15 ಕಿ.ಮೀ​ ಚೇಸ್​ ಮಾಡಿ ಭ್ರಷ್ಟ ಅಧಿಕಾರಿಯನ್ನ ಹಿಡಿದ ಲೋಕಾಯುಕ್ತರು..!

https://newsfirstlive.com/wp-content/uploads/2023/07/BNG_MAHANTE_GOWDA.jpg

Load More