ಅಂಗಡಿ ಮಾಲೀಕ ಹೇಳ್ತಿರೋದು ಕೇಳಿ ಪೊಲೀಸರಿಗೆ ಶಾಕ್
ಖತರ್ನಾಕ್ ಕೆಲಸ ಮಾಡ್ತಿದ್ದ ಶಿಪ್‌ಮೇಟ್ ಕೆಲಸಗಾರರು..!
ಆನ್‌ಲೈನ್ ಪ್ರಾಡೆಕ್ಟ್ಗಳನ್ನೇ ಟಾರ್ಗೆಟ್ ಮಾಡಿದ್ದ ಗ್ಯಾಂಗ್
ಆನ್‌ಲೈನ್ ಶಾಪಿಂಗ್ ಮಾಡೋರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇಷ್ಟು ದಿನ ನೀವು ಆನ್ಲೈನ್ನಲ್ಲಿ ಗ್ರಾಹಕರು ಮೋಸ ಹೋಗೋದನ್ನ ಕೇಳಿರುತ್ತೀರಾ ಅಲ್ವಾ. ಅದ್ರೆ ಇಲ್ಲಿ ಗ್ರಾಹಕರ ಬದಲು ಅಂಗಡಿ ಮಾಲೀಕರಿಗೆ ಪಂಗನಾಮ ಹಾಕಲಾಗಿದೆ.
ಅಂಗಡಿ ಮಾಲೀಕರೊಬ್ಬರು ನಾರ್ಥ್ಸನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ದೂರಿನ ಪ್ರಕಾರ ನಮಗೆ ಕಸ್ಟಮರ್ಗಳು ಪ್ರಾಡೆಕ್ಟ್ ಬೇಡವೆಂದು ರಿಟರ್ನ್ ಕಳುಹಿಸುತ್ತಿದ್ದಾರೆ. ಅದ್ರೆ ರಿಟರ್ನ್ ಕಳಿಸಿದ ಎಲ್ಲಾ ಪ್ರಾಡೆಕ್ಟ್ಗಳೂ ನಕಲಿ. ಅದು ನಮ್ಮ ಅಂಗಡಿಯ ವಸ್ತುಗಳಲ್ಲ ಎಂದು ಪೊಲೀಸರ ಬಳಿ ಹೇಳಿದ್ದಾರೆ. ಇದಕ್ಕೆ ಪೊಲೀಸರೇ ಅಚ್ಚರಿ ವ್ಯಕ್ತಪಡಿಸಿ ರಿಟರ್ನ್ ಬಂದ ವಸ್ತು ಹಾಗೂ ಅಂಗಡಿಯ ವಸ್ತುವನ್ನ ತರಿಸಿಕೊಂಡು ಪೊಲೀಸರು ಪರಿಶೀಲನೆ ನಡೆಸಿದಾಗ ಅಂಗಡಿ ಮಾಲೀಕ ಹೇಳಿರೋದು ಸತ್ಯ ಎಂದು ಗೊತ್ತಾಗಿದೆ.
ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಾಗ ಒಂದು ಶಾಕಿಂಗ್ ಮಾಹಿತಿ ಗೊತ್ತಾಗಿದೆ. ಯಾರೋ ಆನ್ಲೈನ್ನಲ್ಲಿ ಕ್ಯಾಶ್ ಆನ್ ಡೆಲಿವರಿಗಳನ್ನೇ ಟಾರ್ಗೆಟ್ ಮಾಡ್ತಿದ್ದಾರೆ. ಅಸಲಿ ಪ್ರಾಡೆಕ್ಟ್ ಗ್ರಾಹಕರ ಕೈ ಸೇರುವ ಮುನ್ನ ದಿನವೇ ನಕಲಿ ಪ್ರಾಡೆಕ್ಟ್ ಕೊಟ್ಟು ಹಣ ಪಡೆಯುತ್ತಿದ್ದಾರೆ ಅನ್ನೋ ಅಂಶ ಬೆಳಕಿಗೆ ಬಂದಿದೆ. ಮರುದಿನ ಅಸಲಿ ಪ್ರಾಡೆಕ್ಟ್ ಡೆಲಿವರಿಗೆ ಬಂದಾಗ್ಲೂ ಜನ ತೆಗೆದುಕೊಳ್ತಿದ್ರೂ. ಅಸಲಿ ಪ್ರಾಡೆಕ್ಟ್ ಕವರ್ಗೆ ಮೊದಲು ಬಂದಿದ್ದ ನಕಲಿ ಪ್ರಾಡೆಕ್ಟ್ ಹಾಕಿ ರಿಟರ್ನ್ ಮಾಡ್ತಿದ್ರೂ. ಅದು ಕೂಡ ಒರಿಜನಲ್ ಲೇಬಲ್ ಇರೋ ಪ್ಯಾಕೇಟ್ಗಳಲ್ಲೇ ರಿಟರ್ನ್ ಕಳಿಸ್ತಿದ್ರೂ. ಇನ್ನೂ ಕೆಲವರು ಐಟಂ ಚೆನ್ನಾಗಿಲ್ಲ ಅಂತಾ ರಿವ್ಯೂ ಬರೆಯುತ್ತಿದ್ದರು.
ಪೊಲೀಸರಿಗೆ ಸಿಕ್ಕಿದ್ದವು ನಕಲಿ ಲೇಬಲ್ಗಳು
ಈ ಅಸಲಿ, ನಕಲಿ ಆಟ ಆಡ್ತಿರೋದು ಯಾರು ಅಂತಾ ಬೆನ್ನು ಬಿದ್ದ ಪೊಲೀಸರಿಗೆ ಇನ್ನೊಂದು ಶಾಕಿಂಗ್ ವಿಚಾರ ಗೊತ್ತಾಗಿತ್ತು. ಈ ಮೊದಲು ಶಿಪ್ಮೇಟ್ನಲ್ಲಿ ಕೆಲಸ ಮಾಡ್ತಿದ್ದವರೇ ಈ ಕೆಲಸ ಮಾಡ್ತಿದ್ದಾರೆ ಅನ್ನೋದು ಫಿಕ್ಸ್ ಅಗಿತ್ತು. ಅದ್ರೆ ಇವರು ಯಾರು ಅನ್ನೋದನ್ನ ಪತ್ತೆ ಹಚ್ಚೋದು ದೊಡ್ಡ ಸವಾಲಾಗಿತ್ತು. ನಕಲಿ ಐಟಂ ಕೊಡ್ತಿದ್ದಾಗ ಬಳಸುತ್ತಿದ್ದ ನಕಲಿ ಲೇಬಲ್ಗಳು ಪೊಲೀಸರಿಗೆ ಸಿಕ್ಕಿದ್ದವು. ಅದರ ಜಾಡು ಹಿಡಿದಾಗ AWB (ಏರ್ ವೇ ಬಿಲ್) ನಂಬರ್ ಪೊಲೀಸರಿಗೆ ಸಿಕ್ಕಿತ್ತು. ಅದನ್ನ ಟ್ರ್ಯಾಕ್ ಮಾಡಿದಾಗ ಪೊಲೀಸರಿಗೆ ಆರೋಪಿಗಳ ಕೆವೈಸಿ ನಂಬರ್ ಹಾಗೆ ಬ್ಯಾಂಕ್ ಡಿಟೈಲ್ಸ್ ಸಿಕ್ಕಿತ್ತು. ಅದರ ಆಧಾರದ ಮೇಲೆ ಒಟ್ಟು 21 ಜನ ಆರೋಪಿಗಳನ್ನ ನಾರ್ಥ್ಸನ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳ ವಿದ್ಯಾಭ್ಯಾಸ ಕೇಳಿ ಪೊಲೀಸರೇ ಶಾಕ್ ಅಗಿದ್ದಾರೆ. ಇವರೆಲ್ಲ ಏನು ಎಂಜಿನಿಯರ್ಸ್ ಅಲ್ಲ ಹತ್ತನೇ ತರಗತಿ, ಪಿಯುಸಿ ಓದಿದವರು. ಶಿಫ್ಟ್ಮೇಟ್ನಲ್ಲಿ ಕೆಲಸ ಮಾಡ್ತಿದ್ದರಿಂದ ಆನ್‌ಲೈನ್, ಆಫ್ಲೈನ್ಗಳನ್ನ ಹ್ಯಾಕ್ ಕಲಿತ್ತಿದ್ದರು ಎಂದು ಗೊತ್ತಾಗಿದೆ. ಇನ್ನು ಆನ್‌ಲೈನ್ ಶಾಪಿಂಗ್ ಮಾಡೋರು ಸ್ವಲ್ಪ ಎಚ್ಚರವಾಗಿರೋದು ಒಳ್ಳೆಯದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ