newsfirstkannada.com

ಕೊಂದು ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಕೇಸ್​ಗೆ ಟ್ವಿಸ್ಟ್​​.. ಮೂವರು ಆರೋಪಿಗಳು ಅರೆಸ್ಟ್​

Share :

Published July 8, 2023 at 7:09pm

    ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ ಆಗಿರುವುದು ಪೊಲೀಸರ ತಲೆ ಕೆಡಿಸಿತ್ತು

    ಪ್ರಕರಣ ಬೆನ್ನು ಹತ್ತಿದ ಪೊಲೀಸರಿಗೆ ಆರೋಪಿಗಳು ಸಿಕ್ಕಿದ್ದೆ ರೋಚಕ

    ಅಡುಗೆ ಭಟ್ಟನನ್ನು ಕೊಲೆ ಮಾಡುವುದರ ಹಿಂದಿತ್ತು ಒಂದು ರಹಸ್ಯ..!

ಬೆಂಗಳೂರು: ಚನ್ನನಾಯಕನ ಪಾಳ್ಯದಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವ ಪ್ರಕರಣವನ್ನು ನಗರದ ಪೀಣ್ಯ ಠಾಣೆಯ ಪೊಲೀಸರು ಭೇದಿಸಿದ್ದಾರೆ. ಜೊತೆಗೆ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೆಗ್ಗನಹಳ್ಳಿ ನಿವಾಸಿ ಅನಂದ್ (38) ಎನ್ನುವರು ಕೊಲೆಯಾದ ವ್ಯಕ್ತಿ. ಈತನನ್ನು ಸತೀಶ್, ಪುಟ್ಟ ಮತ್ತು ದಯಾನಂದ ಎನ್ನುವ ಆರೋಪಿಗಳು ಹತ್ಯೆ ಮಾಡಿ ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಬಳಿಕ ಸ್ಥಳದಿಂದ ಪರಾರಿಯಾಗಿದ್ದರು. ಸದ್ಯ ಈ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಆನಂದ್ ಹಲವು ವರ್ಷದಿಂದ ನಗರದಲ್ಲಿ ನೆಲೆಸಿದ್ದನು. ಜೀವನಕ್ಕಾಗಿ ಆರೋಪಿ ಸತೀಶ್ ಬಳಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದನು. ಆದ್ರೆ ಇತ್ತೀಚೆಗೆ ಆ ಕೆಲಸ ಬಿಟ್ಟು ತಾನೇ ಸ್ವಂತದ ಅಡುಗೆ ಕ್ಯಾಟರಿಂಗ್ ಆರಂಭಿಸಿದ್ದನು. ಇದರಿಂದ ಆರೋಪಿಗೆ ಹೊಡೆತ ಬಿದ್ದಿತ್ತು. ಇದರಿಂದ ಹಗೆ ಸಾಧಿಸಿ ಆತನನ್ನು ಮುಗಿಸಲು ನಿರ್ಧರಿಸಿದ್ದನು ಎನ್ನಲಾಗಿದೆ.

ವಿವಾಹ ವಾರ್ಷಿಕೋತ್ಸವ ಖುಷಿಯಲ್ಲಿದ್ದ ಆನಂದ್ ತಮಿಳುನಾಡಿನಿಂದ ಪತ್ನಿಗೆ ಬರಲು ಹೇಳಿದ್ದನು. ಅದೇ ದಿನವೇ ಆರೋಪಿ ಸತೀಶ್ ತನ್ನ ಸ್ನೇಹಿತರನ್ನು ಹಾಗೂ ಆನಂದ್​ ಜೊತೆ ಸೇರಿ ತನ್ನ ಮನೆಯಲ್ಲಿ ಪಾರ್ಟಿ ಮಾಡಿದ್ದನು. ಬಳಿಕ ಸ್ನೇಹಿತರೊಂದಿಗೆ ಸೇರಿ ಆತನನ್ನು ಹತ್ಯೆ ಮಾಡಿ ಬಳಿಕ ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಸದ್ಯ ಆರೋಪಿಗಳನ್ನ ವಶಕ್ಕೆ ಪಡೆದಿರುವ ಪೀಣ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಂದು ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಕೇಸ್​ಗೆ ಟ್ವಿಸ್ಟ್​​.. ಮೂವರು ಆರೋಪಿಗಳು ಅರೆಸ್ಟ್​

https://newsfirstlive.com/wp-content/uploads/2023/07/BNG_ACCUSED.jpg

Load More