ಇಸ್ರೋದ ವಿಜ್ಞಾನಿಗಳಿಗೆ ಆಭಿನಂದನೆ ಸಲ್ಲಿಸಿದ ಮೋದಿ
ವಿಜ್ಞಾನಿಗಳ ಜತೆ ಕೆಲ ಸಮಯ ಸಮಾಲೋಚನೆ ನಡೆಸಿದ್ರು
ನಮ್ಮ ವಿಜ್ಞಾನಿಗಳ ಸಾಧನೆ ವಿಶ್ವದಲ್ಲಿ ಯಾರೂ ಮಾಡಿಲ್ಲ
ಬೆಂಗಳೂರು: ಚಂದ್ರಯಾನ-3 ಯಶಸ್ಸು ಮಹತ್ತರವಾದ ಸಾಧನೆ ಆಗಿದ್ದು ಈ ನಿಮ್ಮ ಕಾರ್ಯ ಮತ್ತು ಪರಿಶ್ರಮಕ್ಕೆ ಸೆಲ್ಯೂಟ್ ಮಾಡುತ್ತೇನೆ ಎಂದು ಪ್ರಧಾನಿ ಮೋದಿ ಹೇಳುತ್ತ ಭಾವುಕರಾದರು.
ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಇವತ್ತು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿರುವ ಇಸ್ರೋದ ಕಚೇರಿಗೆ ಭೇಟಿ ನೀಡಿದ್ದಾರೆ. ವಿಜ್ಞಾನಿಗಳ ಜೊತೆ ಚಂದ್ರಯಾನ-3 ಕುರಿತು ಮಾಹಿತಿ ಪಡೆದುಕೊಂಡರು. ಅದೇ ಖುಷಿಯಲ್ಲಿ ಇದೀಗ ಮೋದಿ ಅವರು ವಿಜ್ಞಾನಿಗಳ ಮತ್ತು ಭಾರತದ ಸಾಧನೆ ಬಗ್ಗೆ ಮಾತನಾಡುತ್ತಿದ್ದಾರೆ. ಈ ಸಂದರ್ಭದಲ್ಲಿ, ಹೆಮ್ಮೆಯ ವಿಜ್ಞಾನಿಗಳ ಸಾಹಸವನ್ನು ಬಣ್ಣಿಸುತ್ತ ಭಾವುಕರಾದರು.
ಇಸ್ರೋ ಕಚೇರಿಯಲ್ಲಿ ವಿಜ್ಞಾನಿಗಳನ್ನ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣದಲ್ಲಿ ವಿಜ್ಞಾನಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಹಾಡಿ ಹೊಗಳಿದರು. ವಿಶ್ವದಲ್ಲಿ ಯಾರೂ ಮಾಡದ ಸಾಧನೆ ನಮ್ಮ ವಿಜ್ಞಾನಿಗಳು ಮಾಡಿದ್ದಾರೆ. ಭಾರತೀಯರ ಕನಸನ್ನು ನನಸು ಮಾಡಿದ್ದಾರೆ. ನಿಮ್ಮೆಲ್ಲರಿಗೂ ನಾನು ಸೆಲ್ಯೂಟ್ ಹೇಳುತ್ತೇನೆ. ನಮಸ್ಕಾರ ಮಾಡುತ್ತೇನೆ. ನಿಮ್ಮ ಪರಿಶ್ರಮಕ್ಕೆ ನನ್ನ ಸೆಲ್ಯೂಟ್, ನಿಮ್ಮ ಧೈರ್ಯಕ್ಕೆ ಸೆಲ್ಯೂಟ್, ನಿಮ್ಮ ಬದುಕಿಗೆ ಸೆಲ್ಯೂಟ್ ಎನ್ನುತ್ತ ಮತ್ತಷ್ಟು ಭಾವುಕರಾದರು.
ಹೆಮ್ಮೆಯ ಇಸ್ರೋ ವಿಜ್ಞಾನಿಗಳ ಬೆನ್ನುತಟ್ಟಿ ಪ್ರಧಾನಿ ಮೋದಿ ಗದ್ಗದಿತರಾದರು. ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಇವತ್ತು ಬೆಂಗಳೂರಿನ ಇಸ್ರೋ ಕಚೇರಿಗೆ ಭೇಟಿ ನೀಡಿ ವಿಜ್ಞಾನಿಗಳನ್ನು ಅಭಿನಂದಿಸಿದರು. ಈ ವೇಳೆ ಭಾರತದ ಸಾಧನೆಯನ್ನು ಬಣ್ಣಿಸುತ್ತ ಭಾವುಕರಾದರು.@narendramodi
#ISRO #Modi #Chandrayaan3 #ModiEmotional pic.twitter.com/c1rkd1duQA
— NewsFirst Kannada (@NewsFirstKan) August 26, 2023
ಭಾಷಣದಲ್ಲಿ ಮೋದಿ ಹೇಳಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ