/newsfirstlive-kannada/media/post_attachments/wp-content/uploads/2023/09/Police-Commissioner-PC.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್​ಶೀಟ್​ ಸಲ್ಲಿಕೆಯಾದ ಮೇಲೆ ಅನೇಕ ಸತ್ಯಗಳು, ಹುದುಗಿದ್ದ ಅನೇಕ ಕರಾಳ ಅಧ್ಯಾಯಗಳು ಆಚೆ ಬಂದಿವೆ. ಈ ಒಂದು ಪ್ರಕರಣವನ್ನು ಬಹುಬೇಗ ಇತ್ಯರ್ಥಗೊಳಿಸಲು ಫಾಸ್ಟ್​ಟ್ರ್ಯಾಕ್ ಕೋರ್ಟ್ ಅಥವಾ ಸ್ಪೇಷಲ್ ಕೋರ್ಟ್​​ ನೇಮಿಸಲು ಮನವಿ ಮಾಡುವ ಚಿಂತನೆಯಲ್ಲಿದೆ ಪೊಲೀಸ್ ಇಲಾಖೆ.
ಇದನ್ನೂ ಓದಿ:‘ನನ್ನ ಫೋನ್ ಸ್ವಿಚ್ ಆಫ್ ಆಗುತ್ತೆ’ ವಿಜಯಲಕ್ಷ್ಮೀಗೆ ದರ್ಶನ್ ಅರೆಸ್ಟ್ ಆದ ವಿಚಾರ ಗೊತ್ತಾಗಿದ್ದು ಹೇಗೆ..?
ಈ ಬಗ್ಗೆ ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಮನವಿ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ. ಈಗಾಗಲೇ ಈ ಕುರಿತು ಸಮಾಲೋಚನೆ ನಡೆಸಲಾಗ್ತಿದೆ. ಮುಂದೆ ಈ ಬಗ್ಗೆ ಮನವಿ ಮಾಡುವವರಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಚಾರ್ಜ್​ಶೀಟ್ ವಿಚಾರವಾಗಿ ಮಾತನಾಡಿರುವ ಪೊಲೀಸ್ ಆಯುಕ್ತರು ಬಹುಪಾಲು ರಿಪೋರ್ಟ್​ಗಳು ಚಾರ್ಜ್​ಶೀಟ್ ಸಲ್ಲಿಕೆಗೂ ಮುನ್ನವೇ ನಮ್ಮ ಕೈಸೇರಿವೆ. ಮತ್ತಷ್ಟು ರಿಪೋರ್ಟ್ ಇನ್ನೂ ಬರಬೇಕಿದೆ ಎಂದು ಹೇಳಿದ್ದಾರೆ. ಇನ್ನು ಪರಪ್ಪನ ಅಗ್ರಹಾರದಲ್ಲಿ ದರ್ಶನ್​ಗೆ ಸಿಕ್ಕ ರಾಜಾತಿಥ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಬಿ. ದಯಾನಂದ್ ಅವರು ಈಗಾಗಲೇ ಪ್ರಕರಣವನ್ನು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಸಿಸಿಬಿ ಜಂಟಿ ಪೊಲೀಸ್ ಡಾ.ಚಂದ್ರಗುಪ್ತ ನೇತೃತ್ವದಲ್ಲಿ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us