ಪೊಲೀಸರಿಂದ ಸುಳ್ಳು ಸುದ್ದಿ ತಡೆಗೆ ಮಾಸ್ಟರ್ ಪ್ಲಾನ್
ಕಿತಾಪತಿ ಮಾಡಿದ್ರೆ ನೀವು ಲಾಕ್ ಆಗೋದು ಗ್ಯಾರಂಟಿ
ಸಾಮಾಜಿಕ ಜಾಲತಾಣದ ಗಲ್ಲಿಗಲ್ಲಿಗೂ ಪೊಲೀಸ್ ಬೀಟ್
ಬೆಂಗಳೂರು: ಇನ್ಮುಂದೆ ಸುಖಾ-ಸುಮ್ಮನೆ ಸುಳ್ಳು ಸುದ್ದಿ ಹರಡುವ ಹಾಗೆ ಇಲ್ಲ. ಸೋಷಿಯಲ್ ಮೀಡಿಯಾ ಅಕೌಂಟ್ ಇದೆ ಎಂದು ಮೆರೆದ್ರೆ ದಂಡಂ ದಶಗುಣಂ ಗ್ಯಾರಂಟಿ. ಸುಳ್ಳು ಸುದ್ದಿ ಹರಡುವವರನ್ನು ಲಾಕ್ ಮಾಡಲು ಬೆಂಗಳೂರು ಪೊಲೀಸ್ ತಯಾರಾಗಿದೆ.
ಹೌದು, ಸುಳ್ಳು ಸುದ್ದಿ ಹರಡೋರ ವಿರುದ್ಧ ಹದ್ದಿನ ಕಣ್ಣಿಡಲು ಖಾಕಿ ಪಡೆ ಸದ್ದಿಲ್ಲದೇ ಆ್ಯಕ್ಟೀವ್ ಆಗಿದೆ. ಯಾಕಂದ್ರೆ ರಾಜ್ಯದಲ್ಲಿ ಸೈಬರ್ ಕ್ರೈಂ ಹಾವಳಿ ಹೆಚ್ಚಾಗಿದೆ. ಸೋಷಿಯಲ್ ಮೀಡಿಯಾದಿಂದಲೇ ಶಾಂತಿ ಕದಡುವ ಯತ್ನ ನಡೆಯುತ್ತಿದ್ದು, ಸುಳ್ಳು ಸುದ್ದಿಯಿಂದಲೇ ಗಲಭೆಗಳು ಹೆಚ್ಚಾಗುತ್ತಿವೆ.
ಇದನ್ನು ತಡೆಗಟ್ಟಲು ಖಾಕಿ ಪಡೆಯಿಂದ ಹೊಸ ವಿಂಗ್ ರೆಡಿ ಮಾಡುತ್ತಿದೆ. ಸಿಲಿಕಾನ್ ಸಿಟಿಯ ಪ್ರತಿ ಠಾಣೆಯಲ್ಲೂ ಸೋಷಿಯಲ್ ಮೀಡಿಯಾ ವಿಂಗ್ ತೆರೆಯಲು ನಿರ್ಧರಿಸಿದೆ. ಪ್ರತಿ ಠಾಣೆಗೂ ಇಬ್ಬರು ಸಿಬ್ಬಂದಿಯಂತೆ ನಗರದಾದ್ಯಂತ ಎಲ್ಲಾ ಠಾಣೆಗೂ ಪೊಲೀಸರ ನೇಮಕ ಮಾಡಿಕೊಳ್ಳಲಾಗುತ್ತದೆ.
ಈ ಘಟಕವು ತಮ್ಮ ಏರಿಯಾದಲ್ಲಿ ನಡೆಯುವ ಸೋಶಿಯಲ್ ಮೀಡಿಯಾಗಳ ಪ್ರತಿ ಫಂಕ್ಷನ್ಗಳ ಬಗ್ಗೆ ಮಾಹಿತಿ ಕಲೆ ಹಾಕಲಿದೆ. ಅವಹೇಳನಕಾರಿ ಪೋಸ್ಟ್, ಅಶಾಂತಿ ಉಂಟು ಮಾಡುವ ಪೋಸ್ಟ್ ಹಾಕಿದ್ರೆ ತಕ್ಷಣ ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಮೂಲಕ ಸಾಮಾಜಿಕ ಜಾಲತಾಣದ ಗಲ್ಲಿಗಲ್ಲಿಗೂ ಬೀಟ್ ಹಾಕಲಿದೆ ಬೆಂಗಳೂರು ಪೊಲೀಸ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ