newsfirstkannada.com

ಇನ್​​ಸ್ಟಾದಲ್ಲಿ ಪರಿಚಯವಾದ ಬಾಯ್​ಫ್ರೆಂಡ್​.. ಮೋಸದ ಜಾಲಕ್ಕೆ ಬಿದ್ದು ಜೀವ ತೆಗೆದುಕೊಂಡ ಯುವತಿ

Share :

16-09-2023

    ಸುಂದರ ಜೀವನದಲ್ಲಿ ಹುಳಿ ಹಿಂಡಿ ಹೋದವನ್ಯಾರು..?

    ಆತನ ಮೋಸದ ವಂಚನೆಗೆ ಬಿದ್ದಿದ್ದ ಯುವತಿ ಆತ್ಮಹತ್ಯೆ

    ಆ ಯುವತಿಗೆ ಇನ್​ಸ್ಟಾದಲ್ಲಿ ಪರಿಚಯವಾಗಿದ್ದ ಯುವಕ

ಬೆಂಗಳೂರು: ಇನ್​ಸ್ಟಾದಲ್ಲಿ ಪರಿಚಯವಾದ ಯುವಕನ ಮೋಸದ ಜಾಲಕ್ಕೆ ಬಿದ್ದು ವಿಷ ಸೇವಿಸಿದ್ದ ಯುವತಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 11 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮುಸ್ಕಾನ್ ಖಾನೂಮ್ ಎನ್ನುವ ಯುವತಿ ಮೃತ ದುರ್ದೈವಿ. ಇನ್​ಸ್ಟಾದಲ್ಲಿ ಪರಿಚಯವಾದ ಯುವಕನು ಮೋಸ ಮಾಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಯುವಕನ ಮೋಸದಿಂದ ಯುವತಿ ಕಳೆದ ವಾರ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಳು. ಮನೆಯವರು ತಕ್ಷಣ ಆಕೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದ್ರೆ ಸೆ.11 ರಂದು ಚಿಕಿತ್ಸೆ ಫಲಿಸದ ಕಾರಣ ಯುವತಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ.

ಆರೋಪಿ ಯುವಕನ ಜೊತೆ ಮೃತ ಯುವತಿ

ಬಳಿಕ ಆಸ್ಪತ್ರೆಗೆ ತೆರಳಿ ಪುಟ್ಟೇನಹಳ್ಳಿ ಪೊಲೀಸರು ಎಮ್​ಎಲ್​ಸಿ ರಿಪೋರ್ಟ್ ಆಧರಿಸಿ ಯುಡಿಆರ್ ಮಾಡಿಕೊಂಡಿದ್ದಾರೆ. ಇನ್​ಸ್ಟಾದಲ್ಲಿ ಪರಿಚಯವಾದ ಯುವಕ ವಂಚನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆದ್ರೆ ಈ ಬಗ್ಗೆ ಮೊದಲೇ ಠಾಣೆಗೆ ಬಂದು ದೂರು ನೀಡಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಕುಟುಂಬಸ್ಥರು ಕಮಿಷನರ್​ ಕಚೇರಿಗೆ ಹೋಗಿ ದೂರು ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್​​ಸ್ಟಾದಲ್ಲಿ ಪರಿಚಯವಾದ ಬಾಯ್​ಫ್ರೆಂಡ್​.. ಮೋಸದ ಜಾಲಕ್ಕೆ ಬಿದ್ದು ಜೀವ ತೆಗೆದುಕೊಂಡ ಯುವತಿ

https://newsfirstlive.com/wp-content/uploads/2023/09/BNG_GIRL_DEAD.jpg

Load More