ದರ್ಶನ್ ಋಣ ನಮ್ಮ ಕುಟುಂಬದ ಮೇಲಿದೆ ಆದಷ್ಟು ಬೇಗ ಹೊರಗೆ ಬರಲಿ
ಭೇಟಿಗೆ ಹೋದಾಗ ನಮಗೆ ಧೈರ್ಯ ತುಂಬಿದ್ರು, ಧೈರ್ಯವಾಗಿರುವಂತೆ ಹೇಳಿದ್ರು
ದರ್ಶನ್ ಭೇಟಿಯ ನಂತರ ಭಾವುಕರಾದ ಡಿಂಪಲ್ ಕ್ವೀನ್ ರಚಿತಾ ರಾಮ್
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಸೇರಿರುವ ದರ್ಶನ್ರನ್ನ ಡಿಂಪಲ್ ಕ್ವೀನ್ ರಚಿತಾ ರಾಮ್ ಭೇಟಿಯಾಗಿದ್ದಾರೆ. ದರ್ಶನ್ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ ರಚಿತಾ ರಾಮ್, ಬಳಿಕ ಮಾಧ್ಯಮಳೊಂದಿಗೆ ಮಾತನಾಡಿ, ರಾಜನನ್ನ ರಾಜನ ರೀತಿ ನೋಡೋಕೆ ನನಗಿಷ್ಟ, ಈ ರೀತಿಯಲ್ಲಿ ನೋಡೋಕೆ ಕಷ್ಟ ಆಗುತ್ತೆ ಎಂದಿದ್ದಾರೆ.
ದರ್ಶನ್ ಭೇಟಿ ಬಳಿಕ ಮಾತನಾಡಿದ ರಚಿತಾ ರಾಮ್, ನಾನು ಅವರ ಬ್ಯಾನರ್ನಿಂದಲೇ ಇಂಟ್ರಡ್ಯೂಸ್ ಆಗಿದ್ದು. ಅವ್ರು ನನಗೆ ಅವಕಾಶ ಕೊಡಲು ನೋ ಅಂದಿದ್ರೆ, ಬಿಂದ್ಯಾ ರಚಿತಾ ರಾಮ್ ಆಗುತ್ತಿರಲಿಲ್ಲ. ಅವರನ್ನ ನೋಡಿದ ಕೂಡಲೇ ನಾವೆಲ್ಲಾ ಭಾವುಕರಾದ್ವಿ, ಅವರೇ ನಮಗೆ ಧೈರ್ಯ ಹೇಳಿದ್ರು, ಸಮಾಧಾನ ಮಾಡಿದ್ರು ಎಂದು ರಚಿತಾ ಹೇಳಿದ್ದಾರೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ದಚ್ಚು ಮೀಟ್ ಮಾಡಿದ ರಚ್ಚು.. 3 ಬ್ಯಾಗ್‌ಗಳಲ್ಲಿ ಡಿಂಪಲ್ ಕ್ವೀನ್ ತಂದು ಕೊಟ್ಟಿದ್ದೇನು?
ಕಾನೂನಿನಲ್ಲಿ ನಮಗೆ ನಂಬಿಕೆ ಇದೆ. ಆದಷ್ಟು ಬೇಗ ಹೊರಗೆ ಬರ್ತೀನಿ ಅಂತ ದರ್ಶನ್ ಹೇಳಿದ್ದಾರೆ ಅಂತ ರಚಿತಾ ರಾಮ್ ಮಾಧ್ಯಮಗಳ ಎದುರು ಹೇಳಿದ್ರು. ಅದಕ್ಕೆ ನಾನು ನಿಮಗೋಸ್ಕರ ವೇಟ್ ಮಾಡ್ತಾ ಇದ್ದೀವಿ ಬೇಗ ಬನ್ನಿ ಎಂದೆ. ಅವರನ್ನು ನೋಡಿದ ಮೇಲೆ ನನಗೆ ನಿರಾಳವಾಯ್ತು, ಆರೋಗ್ಯ ವಿಚಾರಿಸಿದಾಗ ಐ ಆ್ಯಮ್ ಫೈನ್ ಅಂದ್ರು .
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸ್ಫೋಟಕ ಟ್ವಿಸ್ಟ್.. ದರ್ಶನ್ A1 ಮಾಡ್ತಿರೋದೇಕೆ? ಅಸಲಿ ರಹಸ್ಯ ಇಲ್ಲಿದೆ!
ಕಾನೂನು ಪ್ರಕ್ರಿಯೆ ಬಗ್ಗೆ ಅವರೇ ಮಾತನಾಡಬೇಕು, ನಾವೇನೇ ಮಾತಾಡಿದ್ರು ಅದು ತಪ್ಪಾಗುತ್ತೆ, ಅವರ ಋಣ ನಮ್ಮ ಕುಟುಂಬದ ಮೇಲಿದೆ, ಆದಷ್ಟು ಬೇಗ ನಮಗೆ ಒಳ್ಳೆಯ ಸುದ್ದಿ ಸಿಗಲಿ ಎಂದು ದೇವರಲ್ಲಿ ಕೇಳಿಕೊಳ್ತೀನಿ ಅಂತ ಹೇಳಿದ್ರು ರಚಿತಾ ರಾಮ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ