newsfirstkannada.com

ಬೆಂಗಳೂರಿನಲ್ಲಿ ಧಾರಾಕಾರ ಸುರಿದ ಮಳೆ.. ನಗರದಲ್ಲಿ ಅವಾಂತರಗಳ ಹೊಳೆ

Share :

21-05-2023

    ಸಂಜೆಯ ವರ್ಷಧಾರೆಗೆ ನಗರದಲ್ಲಿ ಅವಾಂತರ

    ಬೆಂಗಳೂರಿನ ಹಲವೆಡೆ ಅಲ್ಲೋಲ ಕಲ್ಲೋಲ

    ಹೊಸ ಸರ್ಕಾರಕ್ಕೆ ಭಾರೀ ವರ್ಷಧಾರೆಯ ಸ್ವಾಗತ

ಹೊಸ ಸರ್ಕಾರಕ್ಕೆ ಮೊದಲ ದಿನವೇ ಮುಂಗಾರು ಮಳೆ ಸವಾಲಾಗಿ ಪರಿಣಮಿಸಿದೆ. ಕಳೆದ ವರ್ಷ ಮಳೆ ನಿರ್ವಹಣೆಯಲ್ಲಿ ವಿಫಲವಾದ ಬಿಜೆಪಿ ಸರ್ಕಾರದ ವಿರುದ್ಧ ಬೆಂಗಳೂರಿನ ಜನತೆ ಹಿಡಿ ಶಾಪ ಹಾಕಿದ್ರು. ಬೆಂಗಳೂರು ಅವಾಂತರಗಳ ಬಗ್ಗೆ ಜನರ ಆಕ್ರೋಶ ಹೊರ ಹಾಕಿದ್ರು. ಕಳೆದ ರಾತ್ರಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಆಗಿದ್ದು, ನೂತನ ಸರ್ಕಾರದ ಎಚ್ಚರಿಕೆ ಸಂದೇಶ ರವಾನಿಸಿದೆ.

ಒಂದೆಡೆ ಮಧ್ಯಾಹ್ನದವರೆಗೆ ಸಿದ್ದರಾಮಯ್ಯನ ಪಟ್ಟಾಭಿಷೇಕದ ಅಬ್ಬರ. ಮತ್ತೊದೆಂಡೆ ಸಂಜೆ ಬಳಿಕ ಮಳೆರಾಯನ ಆರ್ಭಟ. ಇದು ನಿನ್ನೆ ರಾಜ್ಯ ರಾಜಧಾನಿಯಲ್ಲಿನ ವಾತಾವರಣ. ನೂತನ ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ ಸಿದ್ದರಾಮಯ್ಯರಿಗೆ, ಮೊದಲ ದಿನವೇ ಮಳೆರಾಯ ಸವಾಲು ಹಾಕಿದ್ದಾನೆ.

ಸಂಜೆಯ ವರ್ಷಧಾರೆಗೆ ನಗರದಲ್ಲಿ ಅವಾಂತರಗಳ ಹೊಳೆ
ಬೆಂಗಳೂರು ತಂತ್ರಜ್ಞಾನ, ಐಟಿ ವಲಯದ ಮೂಲಕ ವಿಶ್ವದಲ್ಲೇ ತನ್ನ ಕೀರ್ತಿ ಪತಾಕೆಯನ್ನು ಹಾರಿಸಿದೆ. ಇದರ ಜೊತೆಗೆ ಮಳೆ ಸೃಷ್ಟಿಸುವ ಅವಾಂತರಗಳು ಸಿಲಿಕಾನ್​​ ಸಿಟಿಗೆ ಅಪಖ್ಯಾತಿಯ ಮಸಿಯನ್ನು ಬಳಿದಿವೆ. ಬೆಂಗಳೂರಿನಲ್ಲಿ ಸಣ್ಣ ಮಳೆ ಬಂದ್ರೆ ಸಾಕು, ನಗರದ ಚಿತ್ರಣವೇ ಬದಲಾಗುತ್ತೆ. ರಸ್ತೆಗಳಿಗೆ ನೀರು ನುಗ್ಗುವುದು. ತಗ್ಗು ಪ್ರದೇಶಗಳು ಜಲಾವೃತವಾಗೋದು ಸಾಮಾನ್ಯವಾಗಿದೆ. ಸಿಲಿಕಾನ್​ ಸಿಟಿಗೆ ಮಳೆರಾಯನದ್ದೇ ದೊಡ್ಡ ಚಿಂತೆ ಆಗಿದೆ.

ಕಳೆದ ವರ್ಷವಂತು ವರುಣಾರ್ಭಟಕ್ಕೆ ಬಿಜೆಪಿ ಸರ್ಕಾರ ಬೆಚ್ಚಿಬಿದ್ದಿತ್ತು. ಮಳೆ ಅವಾಂತರ ಕಂಡು ಕೆಲ ಉದ್ಯಮಿಗಳು ಬೆಂಗಳೂರಿನ ಸಹವಾಸವೇ ಸಾಕಪ್ಪ ಎಂಬ ಮಾತುಗಳನ್ನ ಆಡಿದ್ರು.. ಇದನ್ನೆ ಬಂಡವಾಳ ಮಾಡಿಕೊಂಡ ಅಕ್ಕ-ಪಕ್ಕ ರಾಜ್ಯಗಳು, ಬೆಂಗಳೂರಿನ ಐಟಿ ಕಂಪನಿಗಳನ್ನು ಸೆಳೆಯಲು ಪೈಪೋಟಿಗೆ ಇಳಿದಿದ್ದು ಇತಿಹಾಸ. ಇದೆಲ್ಲವನ್ನೂ ಈಗ್ಯಾಗಪ್ಪ ಹೇಳ್ತಿದ್ದಾರೆ ಅಂತ ನಿಮ್ಮ ಮನದಲ್ಲಿ ಪ್ರಶ್ನೆ ಮೂಡಬಹುದು. ಅದಕ್ಕೆ ಈ ದೃಶ್ಯಗಳೇ ಉತ್ತರ.

ಮಳೆರಾಯನ ಆರ್ಭಟ
ರಾಜ್ಯದಲ್ಲಿ ನೂತನ ಸರ್ಕಾರ ರಚನೆಯಾದ ದಿನವೇ, ಮಳೆರಾಯ ಆರ್ಭಟವನ್ನು ತೋರಿದ್ದಾನೆ. ಸಂಜೆ ವೇಳೆ ಗಂಟೆಗಳ ಕಾಲ ಸುರಿದ ಮಳೆಗೆ ಬೆಂಗಳೂರಿನ ಹಲವೆಡೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.. ವಿಧಾನಸೌಧ ಪಕ್ಕದಲ್ಲೇ ಇರುವ ಎಂ.ಎಸ್.ಬಿಲ್ಡಿಂಗ್ ಮುಂಭಾಗದ ರಸ್ತೆ ಮಳೆ ನೀರಿನಿಂದ ಹೊಳೆಯಂತಾಗಿತ್ತು. ನೀರು ಹರಿದು ಹೋಗಲು ಜಾಗ ಇಲ್ಲದೇ ವಾಹನ ಸವಾರರು ಪರದಾಡಿದ್ರು. ಇನ್ನು, ಜೆಸಿ ರಸ್ತೆಯಲ್ಲಿ ಮಳೆ ಗಾಳಿಗೆ ಮರದ ಕೊಂಬೆಗಳು ಮುರಿದುಬಿದ್ವು. ಹಡ್ಸನ್ ವೃತ್ತದಲ್ಲಿ ಬಿಎಂಟಿಸಿ ಬಸ್ ಮೇಲೆ ಮರದ ಕೊಂಬೆ ಬಿದ್ದ ಪರಿಣಾಮ ಪ್ರಯಾಣಿಕರು ಆತಂಕಗೊಂಡಿದ್ರು.

ಕರೆ ಮಾಡಿ ಕುಂದುಕೊರತೆ ವಿಚಾರಿಸಿದ ಸಚಿವ ರಾಮಲಿಂಗಾರೆಡ್ಡಿ
ಮಳೆ ಅವಾಂತರಗಳ ವರದಿಗಳು ಪ್ರಸಾರವಾಗ್ತಿದ್ದಂತೆ ಎಚ್ಚೆತ್ತ ಸಚಿವ ರಾಮಲಿಂಗಾರೆಡ್ಡಿ, ಸಚಿವರಾದ ಮೊದಲ ದಿನವೇ ಫೀಲ್ಡ್​ಗಿಳಿದು, ಕುಂದುಕೊರತೆಗಳನ್ನ ಆಲಿಸಿದ್ರು. ಬಿಬಿಎಂಪಿ ಆಯುಕ್ತರು, ಬೆಸ್ಕಾಂ ಎಂ.ಡಿ.ಗೂ ಕರೆ ಮಾಡಿ, ವಿದ್ಯುತ್‌ ವ್ಯತ್ಯಯ ಸರಿಪಡಿಸುವಂತೆ ಮತ್ತು ಮರಗಳನ್ನ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ರು. ನೂತನ ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು ನಗರಾಭಿದ್ಧಿ ಖಾತೆ ಮೇಲೆ ಕಣ್ಣಿಟ್ಟಿದ್ದು, ಮೊದಲ ದಿನವೇ ಬೆಂಗಳೂರಿನ ಮೇಲೆ ಕಾಳಜಿ ತೋರಿದ್ರು.

ಕಳೆದ ವರ್ಷ ಮಳೆ ಅವಾಂತರ ಸರಿಪಡಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿತ್ತು. ಅವೈಜ್ಞಾನಿಕ ಕಾಮಗಾರಿ, ರಸ್ತೆ ಗುಂಡಿಗಳಿಂದ ಬೆಂಗಳೂರಿನ ಜನತೆ ಹಿಂದಿನ ಬಿಜೆಪಿ ಸರ್ಕಾರಕ್ಕೆ ಹಿಡಿ ಶಾಪ ಹಾಕಿದ್ರು. ಬೆಂಗಳೂರಿನಲ್ಲಿ ಬಿಜೆಪಿ ಕಳಪೆ ಪ್ರದರ್ಶನಕ್ಕೆ ಮಳೆ ನೀರಿನ ನಿರ್ವಹಣೆ ಕೂಡ ಒಂದು ಕಾರಣ. ಇದೀಗ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ, ಮಳೆರಾಯ ವಾರ್ನಿಂಗ್​ ನೀಡಿದ್ದಾನೆ. ಹೀಗಾಗಿ ನೂತನ ಸರ್ಕಾರ, ಮಳೆಗಾಲವನ್ನು ಎದುರಿಸಲು ಆದಷ್ಟು ಬೇಗ ಸಕಲ ರೀತಿ ಸಜ್ಜಾಗಬೇಕಿದೆ. ಇಲ್ಲದಿದ್ರೆ, ಈ ವರ್ಷವೂ ಬೆಂಗಳೂರು, ಮಳೆ ನೀರಲ್ಲಿ ತೇಲುವುದು ಪಕ್ಕಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿನಲ್ಲಿ ಧಾರಾಕಾರ ಸುರಿದ ಮಳೆ.. ನಗರದಲ್ಲಿ ಅವಾಂತರಗಳ ಹೊಳೆ

https://newsfirstlive.com/wp-content/uploads/2023/05/Bangalore-Rain.jpg

Load More