ಮಳೆಯ ಅವಾಂತರಕ್ಕೆ ಬೆಂಗಳೂರಿಗರು ತತ್ತರ
ಬೆಂಗಳೂರಲ್ಲಿ ನೆಲಕ್ಕುರುಳುತ್ತಿವೆ ಮರಗಳು
ಸಿಲಿಕಾನ್ಸಿಟಿಯಲ್ಲಿ ಮಳೆ ಜೊತೆಗೆ ಲೆಕ್ಕವಿಲ್ದಷ್ಟು ಸಮಸ್ಯೆಗಳು
ಬಿಸಿಲ ಬೇಗೆಗೆ ಬೆಂದು ಹೋಗಿದ್ದ ರಾಜ್ಯದ ಜನರಿಗೆ ಮಳೆರಾಯ ತಂಪನ ಎರೆಯುವುದರ ಜೊತೆಗೆ ಹಲವು ಅವಾಂತರ ಸೃಷ್ಠಿ ಮಾಡಿದ್ದಾನೆ. ನಿನ್ನೆ ಸಂಜೆ ಎಡಬಿಡೆದೆ ಸುರಿಯೋ ಮಳೆ ನಗರದ ಪ್ರಮುಖ ರಸ್ತೆಗಳನ್ನೇ ನುಂಗಿ. ಅವಾಂತರಗಳ ಸರಮಾಲೆಯನ್ನೇ ಸೃಷ್ಟಿಸಿದ್ದಾನೆ. ಇನ್ನು ಹಲವು ಜಿಲ್ಲೆಗಳಲ್ಲೂ ಮುಂಗಾರು ಪೂರ್ವ ಮಳೆಯ ಆರ್ಭಟ ಜೋರಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟ ಜೋರಾಗಿದೆ. ನಿನ್ನೆ ಸಂಜೆ ಸೂರ್ಯ ಮುಳುಗ್ತಿದ್ದಂತೆ ಆಕಾಶದಲ್ಲಿ ಹೆಪ್ಪುಗಟ್ಟುವ ಮೋಡ ಒಂದೇ ಸಮನೆ ಸುರಿಸೋ ಮಳೆ ರಾಜಧಾನಿ ಜನ್ರನ್ನು ಇನ್ನಿಲ್ಲದಂತೆ ಕಾಡಿದೆ. ಬಿಸಿಲ ಬೇಗೆಯಿಂದ ಬೆಂದೋಗಿದ್ದ ಬೆಂದಕಾಳೂರಿನ ಜನರಿಗೆ ವರುಣದೇವ ಧರಗೆ ಅಪ್ಪಳಿಸಿ ತಂಪೆರೆದಿದ್ರೆ. ಇನ್ನೂ ಸ್ವಲ್ಪ ಜನ ಟ್ರಾಫಿಕ್ನಲ್ಲಿ ಲಾಕ್ ಆಗಿ ಮಳೆಯ ಸವಾಸವೇ ಸಾಕು ಎಂದು ಪರದಾಡಿದ್ರು.
ಮುಂಗಾರು ಪೂರ್ವ ಮಳೆಗೆ ಸಿಲಿಕಾನ್ ಸಿಟಿ ಜನ ತತ್ತರ
ನಿನ್ನೆ ಮಧ್ಯಾಹ್ನದಿಂದ ಸುರಿಯುತ್ತಿರುವ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ತಗ್ಗುಪ್ರದೇಶಗಳು ಜಲಾವೃತಗೊಂಡಿವೆ.. ರಸ್ತೆಯ ಮೇಲೆ ನೀರು ನಿಂತು ವಾಹನ ಸವಾರರ ಪರದಾಟ ಹೇಳತೀರದಂತಾಗಿತ್ತು. ಇನ್ನು ಮಳೆಯಿಂದ ಲಿಂಗರಾಜಪುರ ಅಂಡರ್ಪಾಸ್ ಜಲಾವೃತವಾಗಿತ್ತು. ಕಾರ್ಪೊರೇಷನ್, ಶಾಂತಿನಗರ, ಮೆಜೆಸ್ಟಿಕ್,ಮಾರ್ಕೆಟ್, ಶೇಷಾದ್ರಿಪುರ, ಬಸವನಗುಡಿ, ಬಾಣಸವಾಡಿ, ಸದಾಶಿವನಗರ ನಾಯಂಡಹಳ್ಳಿ ಭಾಗದಲ್ಲಿ ಭಾರಿ ಮಳೆ ಫುಲ್ ಟ್ರಾಫಿಕ್ ಜಾಮ್ ಆಗಿತ್ತು.
ಮುಂಗಾರು ಪೂರ್ವ ಮಳೆಯಿಂದ ಎಚ್ಚೆತ್ತ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್, ಮಳೆ ಅನಾಹುತ ತಡೆಗೆ ಸನ್ನದ್ಧ ಸ್ಥಿತಿಯಲ್ಲಿರುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಇನ್ನೂ 5 ದಿನ ಮಳೆ ಸಾಧ್ಯತೆ ಹಿನ್ನೆಲೆ ಎಚ್ಚೆತ್ತ ಸರ್ಕಾರ BBMPಯ ಎಲ್ಲಾ ವಲಯಗಳ ಆಯುಕ್ತರಿಗೆ ಖಡಕ್ ನಿರ್ದೇಶನ ನೀಡಿದೆ.
ರಾಮನಗರದಲ್ಲಿ ಮಳೆಯ ಅಬ್ಬರ.. ಜನಜೀವನ ಅಸ್ತವ್ಯಸ್ತ
ಇನ್ನು ಬೆಂಗಳೂರು ಅಷ್ಟೇ ಅಲ್ಲದೇ ರಾಮನಗರದಲ್ಲೂ ಮಳೆರಾಯನ ಆರ್ಭಟ ಜೋರಾಗಿತ್ತು. ಚನ್ನಪಟ್ಟಣದ ಹಲವುಯ ಕೆಲವೆಡೆ ಮಳೆ ಅಬ್ಬರಕ್ಕೆ ಜನ ಜೀವನ ಸಂಪೂರ್ಣ ಅಸ್ಥವ್ಯಸ್ಥವಾಗಿತ್ತು. ಇನ್ನು ಹಲವು ಕಡೆ ಗಾಳಿ ಮಳೆಯಿಂದ ಮರಗಳು ಧರಗೆ ಉರುಳಿದ್ದು ವಿದ್ಯುತ್ ಸಂಪರ್ಕ ವ್ಯತ್ಯಾಯವಾಗಿದೆ.
ಗಾಳಿ-ಮಳೆಗೆ ಧರೆಗುರುಳಿದ ಮರಗಳು, ಜನರು ತತ್ತರ
ಇನ್ನು ಮಲೆನಾಡಿನ ಹಲವು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಮಳೆಗೆ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕುರಳಿದ್ದು ಕೆಲಕಾಲ ಆತಂಕಕ್ಕೆ ಕಾರಣವಾಯಿತು. ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ಹಲವೆಡೆ ವಿದ್ಯುತ್ ವ್ಯವಸ್ಥೆ ಇಲ್ಲದೆ ಜನರು ಪರದಾಡುವಂತಾಯಿತು.
ಒಟ್ಟಾರೆ ಮುಂಗಾರು ಪೂರ್ವ ಮಳೆ ಹಲವು ಅವಾಂತಗಳನ್ನೇ ಸೃಷ್ಠಿ ಮಾಡಿದೆ. ಬೆಂಗಳೂರು ಅಷ್ಟೇ ಅಲ್ಲದೆ ವಿವಿಧ ಜಿಲ್ಲೆಗಳಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇನ್ನು ಮುಂಗಾರಿನಲ್ಲಿ ವರುಣನ ಅಬ್ಬರ ಜೋರಾಗುವ ಸಾಧ್ಯತೆ ಇದೆ. ಹೀಗಾಗಿ ಜನರು ಹಾಗೂ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ