newsfirstkannada.com

VIDEO: ರಸ್ತೆ ದಾಟುವಾಗ ಸ್ಕೂಲ್ ವ್ಯಾನ್ ಡಿಕ್ಕಿ ಹೊಡೆದ್ರೂ ಮಹಿಳೆ ಪಾರು; ಈ ಅಪಘಾತದ ದೃಶ್ಯ ನೋಡಿದ್ರೆ ಬೆಚ್ಚಿ ಬೀಳ್ತೀರಾ!

Share :

06-07-2023

  ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದ್ದ ಸ್ಕೂಲ್ ವ್ಯಾನ್

  ವ್ಯಾನ್‌ ಚಕ್ರದ ಕೆಳಗೆ ಸಿಕ್ಕಿದ್ದರೂ ಮಹಿಳೆ ಅದೃಷ್ಟ ಚೆನ್ನಾಗಿತ್ತು

  ಅಪಘಾತದಲ್ಲಿ ಈ ಮಹಿಳೆ ಪಾರಾಗಿದ್ದು ನಿಜಕ್ಕೂ ಮಿರಾಕಲ್!

ಬೆಂಗಳೂರು: ಅಬ್ಬಾ.. ಈ ಭೀಕರ ಅಪಘಾತದ ದೃಶ್ಯ ನೋಡಿದ್ರೆ ನಿಮ್ಮ ಎದೆ ಝಲ್ ಅನ್ನುತ್ತೆ. ರಸ್ತೆ ದಾಟುವಾಗ ಓರ್ವ ಮಹಿಳೆಗೆ ಸ್ಕೂಲ್ ವ್ಯಾನ್ ಡಿಕ್ಕಿ ಹೊಡೆದಿದೆ. ವ್ಯಾನ್‌ ಚಕ್ರದ ಕೆಳಗೆ ಸಿಕ್ಕಿ ಹೋಗಿದ್ದರೂ ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭೀಕರ ಅಪಘಾತದ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಂದ ಹಾಗೆ ಈ ಅಪಘಾತ ನಡೆದಿರೋದು ನಗರದ ಬಸನವಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಕಳೆದ ಜೂನ್ 26ನೇ ತಾರೀಖಿನಂದು ರಾಧಮ್ಮ ಎಂಬ ಮಹಿಳೆ ರಸ್ತೆ ದಾಟುವಾಗ ಸೀತಾ ಸರ್ಕಲ್ ಕಡೆಯಿಂದ ವಿದ್ಯಾಪೀಠದ ಕಡೆಗೆ ಬರ್ತಿದ್ದ ಸ್ಕೂಲ್ ವ್ಯಾನ್ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ರಾಧಮ್ಮ ಪ್ರಾಣಪಾಯದಿಂದ ಪಾರಾಗಿದ್ದು, ಅವರ ಕಾಲಿಗೆ ಪೆಟ್ಟಾಗಿದೆ. ಬಸವನಗುಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಸ್ಕೂಲ್ ವ್ಯಾನ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾಣಪಾಯದಿಂದ ಪಾರಾಗಿರುವ ರಾಧಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ರಸ್ತೆ ದಾಟುವಾಗ ಸ್ಕೂಲ್ ವ್ಯಾನ್ ಡಿಕ್ಕಿ ಹೊಡೆದ್ರೂ ಮಹಿಳೆ ಪಾರು; ಈ ಅಪಘಾತದ ದೃಶ್ಯ ನೋಡಿದ್ರೆ ಬೆಚ್ಚಿ ಬೀಳ್ತೀರಾ!

https://newsfirstlive.com/wp-content/uploads/2023/07/Bangalore-Accident-CCTV.jpg

Load More