ಸೀರೆ ಕೊಂಡು ಕೊಳ್ಳುವವರ ಸೋಗಿನಲ್ಲಿ ಅಂಗಡಿಗೆ ಬರುತ್ತೆ ಗ್ಯಾಂಗ್
ಮಾಲೀಕನ, ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಸೀರೆಗಳ ಕಳ್ಳತನ
ಲೇಡಿ ಗ್ಯಾಂಡ್ ಖತರ್ನಾಕ್ ಕಳ್ಳಾಟ ಅಂಗಡಿಯ ಸಿಸಿಟಿವಿಯಲ್ಲಿ ಸೆರೆ
ಬೆಂಗಳೂರು: ಸೀರೆ ಅಂಗಡಿಗಳಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸೀರೆಗಳನ್ನ ಕದಿಯುತ್ತಿದ್ದ ಕಿಲಾಡಿ ಲೇಡಿ ಗ್ಯಾಂಗ್ನ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ರಜಿನಿ ಮತ್ತು ಆಕೆಯ ಗ್ಯಾಂಗ್ನ ಇನ್ನೋರ್ವ ಮಹಿಳೆ ಬಂಧನ. ಆಗಸ್ಟ್ 3 ರಂದು ಬನಶಂಕರಿ ಬಳಿಯ ಕಾಮಾಕ್ಯ ಸಿಗ್ನಲ್ ಬಳಿಯಿರುವ ರಾಜರಾಜೇಶ್ವರಿ ಸಿಲ್ಕ್ ಮತ್ತು ಸ್ಯಾರೀಸ್ ಅಂಗಡಿಗೆ ಈ ಗ್ಯಾಂಗ್ನ 10 ಜನ ತೆರಳಿದ್ದಾರೆ. ಅಲ್ಲಿ ಸೀರೆಗಳನ್ನು ಕೊಳ್ಳುವವರ ಸೋಗಿನಲ್ಲಿ ಒಳಗೆ ಹೋಗಿದ್ದಾರೆ. ಬಳಿಕ ಕೆಲವರು ಸೀರೆಗಳನ್ನು ಖರೀದಿ ಮಾಡೋ ರೀತಿ ಅಂಗಡಿಯ ಮಾಲೀಕನ ಮತ್ತು ಸಿಬ್ಬಂದಿ ಗಮನ ಬೇರೆಡೆ ಸೆಳೆಯುತ್ತಾರೆ. ಆಗ ಉಳಿದವರು ಸೀರೆಗಳನ್ನು ಎಸ್ಕೇಪ್ ಮಾಡುತ್ತಾರೆ ಎನ್ನಲಾಗಿದೆ. ಈ ಬಗ್ಗೆ ಎಲ್ಲ ದೃಶ್ಯಗಳು ಅಂಗಡಿಯ ಸಿಸಿಟಿವಿಯ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಸೀರೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳಿಯರು ಅರೆಸ್ಟ್..#Sarees #Arested #CCTV #NewsFirstKannada pic.twitter.com/78gmRi7QCV
— NewsFirst Kannada (@NewsFirstKan) August 30, 2023
ಸೀರೆಗಳನ್ನು ಖರೀದಿ ಮಾಡಿ ಬಿಲ್ ಮಾಡುವ ನೆಪದಲ್ಲಿ ಒಂದೊಂದು ಸೀರೆ 10 ಸಾವಿರ ಬೆಲೆ ಬಾಳುವ ಒಟ್ಟು 24 ಸೀರೆಗಳನ್ನು ಲೇಡಿ ಗ್ಯಾಂಗ್ ಎಸ್ಕೇಫ್ ಮಾಡಿದೆ. ಹೀಗೆ ಲಕ್ಷಾಂತರ ರೂಪಾಯಿ ಬೆಲೆ ಮೌಲ್ಯದ ಸೀರೆಗಳನ್ನು ಕಿಲಾಡಿ ಲೇಡಿಗಳು ಮಂಗಮಾಯ ಮಾಡಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದು ಇನ್ನುಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಇನ್ನು ಬಗ್ಗೆ ಚನ್ನಮ್ಮನ ಅಚ್ಚುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ