ರಸ್ತೆಗಿಳಿದ ಆಟೋಗಳ ಚಕ್ರದ ಗಾಳಿ ತೆಗೆದು ದಬ್ಬಾಳಿಕೆ

ಱಪಿಡೋ ಸವಾರನಿಗೆ ಬಾರಿಸಿ ಮೃಗಗಳಂತೆ ವರ್ತನೆ
ಬೆಂಗಳೂರು: ರಾಜ್ಯ ರಾಜಧಾನಿಯನ್ನು ಸ್ತಬ್ದ ಮಾಡಿ ಖಾಸಗಿ ಸಾರಿಗೆ ಸಂಸ್ಥೆಗಳು ನಡೆಸಿದ ಪ್ರತಿಭಟನೆ ಯಶಸ್ವಿಯಂತೂ ಆಗಿದೆ. ಆದ್ರೆ ಬೇಡಿಕೆ ಈಡೇರಿಕೆ ಸಾಧ್ಯಾನಾ ಅನ್ನೋದೇ ಪ್ರಶ್ನೆ. ಯಾಕಂದ್ರೆ ಬಹುತೇಕ ಬೇಡಿಕೆಗಳು ಈಡೇರಿಸಲು ಅಸಾಧ್ಯ ಅನ್ನೋ ಹಾಗಿದೆ. ಇನ್ನು ಸಿಎಂ ಸಿಎಂ ಸಿದ್ದರಾಮಯ್ಯ ಕೂಡ ಬೇಡಿಕೆಗಳನ್ನ ಈಡೇರಿಸೋದು ಅಸಾಧ್ಯ ಅಂತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪಟ್ಟು ಹಿಡಿದ ಖಾಸಗಿ ವಾಹನಗಳ ಒಕ್ಕೂಟ ಬೆಂಗಳೂರು ಬಂದ್ಗೆ ಕರೆ ನೀಡಿತ್ತು. ಈ ಹಿನ್ನೆಲೆ ಹೃದಯ ಭಾಗದಲ್ಲಿದ್ದ ಆಟೋ ಚಾಲಕರು, ಕ್ಯಾಬ್ ಚಾಲಕರಿಂದ ಪ್ರತಿಭಟನೆ, ಱಲಿ ಮಾಡಲಾಯ್ತು. ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಅನೇಕ ಚಾಲಕರು ಗುಂಡಾವರ್ತನೆ ತೋರಿದ್ದು, ವಾಹನಗಳ ಡ್ಯಾಮೇಜ್, ಹಲ್ಲೆ, ಹಣ ವಸೂಲಿ ಮಾಡಿದ ದೃಶ್ಯ ಕಂಡುಬಂತು.
ಱಪಿಡೋ ಚಾಲಕನ ಜೊತೆ ಪಬ್ಲಿಕ್ಗೂ ಥಳಿತ!
ಈ ಘಟನೆ ನಡೆದಿದ್ದು ಆನಂದ್ ರಾವ್ ಸರ್ಕಲ್ನಲ್ಲಿ.. ಱಪಿಡೋ ಬೈಕ್ ಸವಾರನನ್ನ ಅಡ್ಡಗಟ್ಟಿದ ಪ್ರತಿಭಟನೆಕಾರರು ಆ ಸವಾರನ ಮೇಲೆ ಹಲ್ಲೆ ಮಾಡಿದ್ರು. ಜೊತೆಗೆ ಱಪಿಡೋ ಬೈಕ್ನ ಹಿಂದೆ ಕೂತಿದ್ದ ಸವಾರನ ಮೇಲೂ ದರ್ಪ ತೋರಿದ್ರು.
ಚಾಲಕನ ಮೇಲೆ ಹಲ್ಲೆ.. ಗಾಡಿ ಜಖಂ
ಈ ಘಟನೆಯೂ ನಡೆದಿರೋದು ಇದೇ ಫ್ಲೈಓವರ್ ಮೇಲೆ. ಪ್ರತಿಭಟನಾ ಱಲಿಯ ನಡುವೆಯೇ ವಾಹನವನ್ನ ತಗೊಂಡು ಹೋಗಲು ಯತ್ನಿಸಿದ್ದಕ್ಕೆ ಆಕ್ರೋಶಗೊಂಡ ಪ್ರತಿಭಟನಾ ನಿರತರು, ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ್ದಾರೆ. ಜೊತೆಗೆ ಆತನ ವಾಹವನ್ನೂ ಜಖಂಗೊಳಿಸಿದ್ದಾರೆ.
ಮನಬಂದತೆ ಯುವಕನನ್ನ ಥಳಿಸಿದ ಪ್ರತಿಭಟನೆಕಾರರು!
ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಱಪಿಡೋ ಬೈಕ್ ಸವಾರ ಅಂತಾ ಗೊತ್ತಾದ ತಕ್ಷಣ ಆತನ ಕೆನ್ನೆಗೆ ಬಾರಿಸಿ ಮೃಗಗಳಂತೆ ವರ್ತಿಸಿದ್ದಾರೆ.
ಮಡಿವಾಳ ಅಂಡರ್ಪಾಸ್ನಲ್ಲಿ ಬೈಕ್ ಚಿಂದಿ!
ಮಡಿವಾಳ ಅಂಡರ್ಪಾಸ್ನಲ್ಲಿ ಱಪಿಡೋ ಬೈಕ್ ಎನ್ನುವ ಕಾರಣ ಕಾರಿನಿಂದ ಗುದ್ದಿ ಸೈಡಿಗೆ ಎಸೆದು ಹೋಗಿದ್ದಾರೆ. ನಾನು ಲೀಗಲ್ ಆಗಿ ಲೈನ್ಸೆಸ್ ತಗೊಂಡೇ ಱಪಿಡೋ ಮಾಡ್ತಿದ್ದೇನೆ ಅಂತ ಹೇಳಿದ್ರು ಬಿಡಲಿಲ್ಲಾ ಅನ್ನೋ ಆರೋಪ ಕೇಳಿ ಬಂದಿದೆ.
ಬೆಂಬಲಿಸದ ಚಾಲಕನಿಗೆ ಅವಮಾನ!
ಈ ವಿಡಿಯೋ ನೋಡಿದ್ಮೇಲೆ ಪ್ರತಿಭಟನೆಕಾರರ ಮೇಲಿನ ಗೌರವ ಎಲ್ಲೋ ಒಂದು ಕಡೆ ಕಮ್ಮಿ ಆಗ್ಬಿಡುತ್ತೆ.. ಬಂದ್ಗೆ ಸಪೋರ್ಟ್ ಕೊಟ್ಟಿಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ ಕ್ಯಾಬ್ ಚಾಲಕನ ಮುಖಕ್ಕೆ ಉಗಿದು ಪ್ರಾಣಿಗಳಂತೆ ವರ್ತಿಸಿದ್ದಾರೆ.
ಕಾಲಿಗೆ ಬಿದ್ದು ಕೇಳಿಕೊಂಡ ಚಾಲಕ!
ಗಾಂಧಿನಗರದ ಮೌರ್ಯ ಸರ್ಕಲ್ ಬಳಿ ನಡೆದ ಘಟನೆ ಇದು. ವೈಟ್ಬೋರ್ಡ್ ಕಾರಿನಲ್ಲಿ ಬಾಡಿಗೆ ಹೊಡಿತಿದ್ರು ಅನ್ನೋ ಕಾರಣಕ್ಕೆ ಕಾರ್ ಅಡ್ಡಗಟ್ಟಿದ್ದು, ಡ್ರೈವರ್ನ ಹಿಗ್ಗಾಮುಗ್ಗ ನಿಂದಿಸಿದ್ರು. ಈ ವೇಳೆ ಅಣ್ಣಂದಿರ ನನ್ನ ಕೆಲಸ ಹೋಗಿಬಿಡುತ್ತೆ, ತಪ್ಪಾಯ್ತೋ ಬಿಟ್ಬಿಡಿ ಅಂತ ಕಾಲಿಗೆ ಬಿದ್ದು ಬೇಡಿಕೊಂಡಿದ್ದಾರೆ.
ಕಾರಿನ ಕೀ ಕಸಿದು ದಬ್ಬಾಳಿಕೆ.. ಮುಷ್ಕರವಿದ್ರೂ ರಸ್ತೆಗಿಳಿದ ಚಾಲಕರಿಗೆ ಮೊಟ್ಟೆ ಎಸೆತ!
ಬಂದ್ಗೆ ಸಹಕರಿಸದೆ ಎಂದಿನಂತೆ ಕೆಲಸಕ್ಕೆ ಬಂದಿದ್ದ ಕ್ಯಾಬ್ಡ್ರೈವರ್ ಮೇಲೆ ಪ್ರತಿಭಟನಾಕಾರರು ಹಲ್ಲೆ ಮಾಡಿದ್ದಾರೆ.. ಕಾರಿನ ಕೀ ಕಸಿದು ದರ್ಪ ತೋರಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ಯಾಬ್ ಚಾಲಕನನ್ನ ರಕ್ಷಿಸಿದ್ದಾರೆ. ಹೆಬ್ಬಾಳದಲ್ಲಿ ರಸ್ತೆಗಿಳಿದಿದ್ದ ಕ್ಯಾಬ್ಗೆ ಮೊಟ್ಟೆ ಎಸೆದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
ಮುಷ್ಕರವಿದ್ದರೂ ರಸ್ತೆಗಿಳಿದ ಕ್ಯಾಬ್ ಮೇಲೆ ಕಲ್ಲು ತೂರಾಟ
ಬಂದ್ ಇದ್ರೂ ಲೆಕ್ಕಿಸದೇ ಕ್ಯಾಬ್ ಓಡಿಸಿದ ಚಾಲಕನಿಗೆ ಮೆಜೆಸ್ಟಿಕ್ ಸಮೀಪ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲೇ ಪ್ರತಿಭಟನಾಕಾರರು ಕ್ಯಾಬ್ ಮೇಲೆ ಕಲ್ಲು ತೂರಿದ್ದಾರೆ. ಇನ್ನು ಮತ್ತೊಂದು ಕ್ಯಾಬ್ನ ಮೇಲೆ ಕಲ್ಲು ತೂರಾಟ ಮಾಡಲಾಗಿದ್ದು, ಕಾರ್ನ ಗಾಜು ಪುಡಿಯಾಗಿದೆ.
ರಸ್ತೆಗಿಳಿದ್ದಿದ್ದ ಆಟೋ ಚಕ್ರದ ಗಾಳಿ ಬಿಟ್ಟ ಪ್ರತಿಭಟನಾಕಾರರು
ಪ್ರತಿಭಟನಾ ನಿರತ ಮತ್ತು ಕರ್ತವ್ಯ ನಿರತ ಚಾಲಕರ ನಡುವೆ ವಾಗ್ವಾದ ನಡೆದಿದ್ದು, ರಸ್ತೆಗಿಳಿದ್ದಿದ್ದ ಆಟೋ ಚಕ್ರದ ಗಾಳಿ ಬಿಟ್ಟ ಪ್ರತಿಭಟನಾಕಾರರು ದರ್ಪ ಮೆರೆದಿದ್ದಾರೆ. ಇನ್ನು KC ಜನರಲ್ ಆಸ್ಪತ್ರೆಯಲ್ಲಿಯೂ ಖಾಸಗಿ ವಾಹನಗಳಿಲ್ಲದೇ ಜನ್ರು ಪರದಾಡಿದ್ದಾರೆ. ಅತ್ತ ಏರ್ಪೋರ್ಟ್ನಿಂದ ತೆರಳುವ ಸಾರ್ವಜನಿಕರು ಕೂಡ ಪ್ರೈವೇಟ್ ವೆಹಿಲಕ್ಸ್ ಇಲ್ಲದೇ ಜನ ಪರದಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ