newsfirstkannada.com

ಬೆಂಗಳೂರಲ್ಲಿ ಭಾರೀ ಪ್ರಮಾಣದ ಸ್ಫೋಟಕಗಳು ಪತ್ತೆ.. ಎಕ್ಸ್​ಪ್ಲೊಸಿವ್ ವಸ್ತುಗಳ ಕಂಡು ಬೆಚ್ಚಿಬಿದ್ದ ಪೊಲೀಸ್..!

Share :

30-07-2023

    ಅನುಮತಿಯಿಲ್ಲದೇ ಅಡಗಿಸಿಟ್ಟಿದ್ದ ಸ್ಫೋಟಕ ವಸ್ತು

    ಅನುಮಾನಗಳಿಗೆ ಎಡೆಮಾಡಿಕೊಟ್ಟ ಸ್ಫೋಟಕಗಳು

    ಆರೋಪಿಗಳು ವಶಕ್ಕೆ.. ತೀವ್ರಗೊಂಡ ವಿಚಾರಣೆ

ಬೆಂಗಳೂರು: ಸೋಲದೇವನಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ ಮನೆಯಲ್ಲಿ ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳಾದ 1.8 ಕೆ.ಜಿ ತೂಕದ 15 rex ಎಕ್ಸ್​ಪ್ಲೋಸಿವ್ ಜೆಲ್, 1.9 ಕೆ.ಜಿ ಕಾರ್ಕೋಲ್ ಫೌಡರ್, 7.8 ಕೆ.ಜಿ ಸಲ್ಫರ್ ಫೌಡರ್, 13 ಕೆ.ಜಿ ಪೊಟಾಶಿಯಂ ನೈಟ್ರೇಟ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಶ್ರೀನಿವಾಸ್, ಕುಮಾರ್ ಮತ್ತು ಶಂಕರ್ ಪೊಲೀಸರ ವಶದಲ್ಲಿರುವ ಆರೋಪಿಗಳು. ಇವರು ಹೆಸರುಘಟ್ಟದ ಕಲ್ಲುಗುಡ್ಡದಹಳ್ಳಿ, ದಾಸೇನಹಳ್ಳಿಯ 2 ಮನೆಗಳಲ್ಲಿ ಸ್ಫೋಟಕ ವಸ್ತುಗಳಾದ 1.8 ಕೆ.ಜಿ ತೂಕದ 15 rex ಎಕ್ಸ್​ಪ್ಲೋಸಿವ್ ಜೆಲ್, 1.9 ಕೆ.ಜಿ ಕಾರ್ಕೋಲ್ ಫೌಡರ್, 7.8 ಕೆ.ಜಿ ಸಲ್ಫರ್ ಫೌಡರ್, 13 ಕೆ.ಜಿ ಪೊಟಾಷಿಯಂ ನೈಟ್ರೇಟ್ ಅನ್ನು ಅಕ್ರಮವಾಗಿ ಸಂಗ್ರಹಿಸಿದ್ದರು. ಪೊಲೀಸರು ಖಚಿತ ಮಾಹಿತಿ ಮೇರೆಗೆ ಆರೋಪಿಗಳ ಮನೆಗಳ ಮೇಲೆ ದಾಳಿ ಮಾಡಿ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದಾಸೇನಹಳ್ಳಿಯ ರಾಘವೇಂದ್ರ ಲೇಔಟ್​ನ ಶ್ರೀನಿವಾಸ್ ಮನೆ ಮೇಲೂ ದಾಳಿ ಮಾಡಿದಾಗ ಕೆಜಿಗಟ್ಟಲೇ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.‌ ಯಾವುದೇ ಅನುಮತಿಯಿಲ್ಲದೇ ಸ್ಫೋಟಕಗಳನ್ನು ಸಂಗ್ರಹಿಸಿದ್ದಕ್ಕೆ 2 ಪ್ರತ್ಯೇಕ ಪ್ರಕರಣಗಳನ್ನು ಸೋಲದೇವನಹಳ್ಳಿ ಪೊಲೀಸರು ದಾಖಲಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಕಲ್ಲು ಕ್ವಾರಿಗಾಗಿ ಸ್ಫೋಟಕಗಳನ್ನು ಸಂಗ್ರಹಿಸಿದ್ದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಭಾರೀ ಪ್ರಮಾಣದ ಸ್ಫೋಟಕಗಳು ಪತ್ತೆ.. ಎಕ್ಸ್​ಪ್ಲೊಸಿವ್ ವಸ್ತುಗಳ ಕಂಡು ಬೆಚ್ಚಿಬಿದ್ದ ಪೊಲೀಸ್..!

https://newsfirstlive.com/wp-content/uploads/2023/07/BNG_RAID_POLICE.jpg

Load More