ಶಕ್ತಿ ಯೋಜನೆಯ ಸೈಡ್ ಎಫೆಕ್ಟ್, ವಿದ್ಯಾರ್ಥಿಯಿಂದ ಹಲ್ಲೆ
ಕಂಡಕ್ಟರ್, ಇನ್ಸ್ಪೆಕ್ಟರ್ ಮೇಲೆ ಹಲ್ಲೆ ಮಾಡಿದ ವಿದ್ಯಾರ್ಥಿ
ಪೊಲೀಸ್ ಠಾಣೆಗೆ ದೌಡಾಯಿಸಿದ ಹಿರಿಯ ಅಧಿಕಾರಿಗಳು
ಬೆಂಗಳೂರು: ಶಕ್ತಿ ಯೋಜನೆಯ ಸೈಡ್ ಎಫೆಕ್ಟ್ನಿಂದಾಗಿ ವಿದ್ಯಾರ್ಥಿಯೋರ್ವ ಸಬ್ ಇನ್ಸ್ಪೆಕ್ಟರ್ ಹಾಗೂ ಕಂಡಕ್ಟರ್ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಈ ಘಟನೆಯು ನಗರದ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಆರೋಪಿ ಮೌನೇಶ್ ಹಲ್ಲೆ ಮಾಡಿ ಪರಾರಿಯಾಗಿರುವ ವಿದ್ಯಾರ್ಥಿ. ಈತ ಕೆಎಲ್ಇ ಕಾಲೇಜಿನಲ್ಲಿ ಮೊದಲ ವರ್ಷದ (ಡೆಂಟಲ್) ಮೆಡಿಕಲ್ ಸ್ಟೂಡೆಂಟ್. ಪೀಣ್ಯಾದ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಿದ್ದು ಹೂಗಾರ ಮೇಲೆ ವಿದ್ಯಾರ್ಥಿ ಹಲ್ಲೆ ಮಾಡಿದ್ದಾನೆ. ಮುಖಕ್ಕೆ ಪಂಚ್ ಮಾಡಿ, ಮರ್ಮಾಂಗಕ್ಕೆ ಹಲ್ಲೆ ಮಾಡಿ ಎಸ್ಕೇಪ್ ಆಗಿರುವ ಆರೋಪ ಕೇಳಿಬಂದಿದೆ. ತೀವ್ರ ಗಾಯಗೊಡಿರುವ ಇನ್ಸ್ಪೆಕ್ಟರ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಪೀಣ್ಯಾ ಠಾಣೆಗೆ ದೌಡಾಯಿಸಿದ್ದಾರೆ.
ಮೊದಲು ಬಸ್ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಯು ಕಂಡಕ್ಟರ್ಗೆ ಬಸ್ ಪಾಸ್ ಜೆರಾಕ್ಸ್ ತೋರಿಸಿದ್ದ. ಹೀಗಾಗಿ ಕಂಡಕ್ಟರ್ ಜೆರಾಕ್ಸ್ ಅಲ್ಲ ಒರಿಜಿನಲ್ ಪಾಸ್ ತೋರಿಸು ಎಂದಿದ್ದಾರೆ. ಇದಕ್ಕೆ ವಿದ್ಯಾರ್ಥಿ ಲೇಡಿಸ್ ಆಧಾರ್ ಕಾರ್ಡ್ ಜೆರಾಕ್ಸ್ ತೋರಿಸಿದ್ರೆ ಸುಮ್ಮನಿದ್ದೀರಿ. ನಾನು ಜೆರಾಕ್ಸ್ ತೋರಿಸಿದ್ರೆ ಯಾಕೆ ಗಲಾಟೆ ಮಾಡ್ತೀಯಾ ಎಂದು ವಿದ್ಯಾರ್ಥಿ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಕಂಡಕ್ಟರ್ ಬಸ್ ಅನ್ನು ನೇರ ಪೀಣ್ಯಾ ಪೊಲೀಸ್ ಠಾಣೆ ಬಳಿ ನಿಲ್ಲಿಸಿದ್ದಾರೆ. ಈ ವೇಳೆ ಠಾಣೆಯಲ್ಲಿ ಇನ್ಸ್ಪೆಕ್ಟರ್ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ. ವಿದ್ಯಾರ್ಥಿ ಸಹೋದರ ಕೂಡ ಇನ್ಸ್ಪೆಕ್ಟರ್ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ