newsfirstkannada.com

ಸ್ನೇಹಿತರ ಜೊತೆ ಅತ್ಯಾಚಾರಕ್ಕೆ ಯತ್ನಿಸಿದ ಪಾಪಿ ಗಂಡ; ಪ್ರೀತಿಸಿ ಮದ್ವೆಯಾದ ಟೆಕ್ಕಿ ನ್ಯಾಯಕ್ಕಾಗಿ ಹೋರಾಟ

Share :

29-06-2023

    ಮ್ಯಾಟ್ರಿಮೋನಿಯಲ್ ನೋಡಿ ಬಳಿಕ ಪರಸ್ಪರ ಒಪ್ಪಿ ಮದುವೆ ಆಗಿದ್ದರು

    ಮನೆಗೆ ಗಾಂಜಾ ತಂದು ಸೇವನೆ ಮಾಡ್ತಿದ್ದ ಪತಿ ಅಖಿಲೇಷ್, ಸ್ನೇಹಿತರು

    ಪತಿಯ ಮುಂದೆ ಪತ್ನಿಯ ಎಳೆದಾಡಿದ ಪತಿ ಸ್ನೇಹಿತರು ಎಂದು ಆರೋಪ

ಬೆಂಗಳೂರು: ಸಿಲಿಕಾನ್ ಸಿಟಿಯ ಬ್ಯುಸಿ ಲೈಫ್ ಹೇಗಾಗಿದೆ ಅಂದ್ರೆ ದಿನಕ್ಕೊಂದು ಕೌಟುಂಬಿಕ ಕಲಹ, ಗಂಡ-ಹೆಂಡ್ತಿ ಜಗಳ ಬೀದಿಗೆ ಬರ್ತಿದೆ. ಇವತ್ತು ಪ್ರೀತಿಸಿ ಮದುವೆಯಾಗಿದ್ದ ಟೆಕ್ಕಿಯೊಬ್ಬರು ತನ್ನ ಗಂಡನ ವಿರುದ್ಧ ಗಂಭೀರ ಆರೋಪ ಮಾಡಿದ್ದು, ನ್ಯಾಯಕ್ಕಾಗಿ ಪೊಲೀಸ್ ಠಾಣೆಯಲ್ಲಿ ಪಟ್ಟು ಹಿಡಿದಿದ್ದಾರೆ.

2019ರಲ್ಲಿ ಆಂಧ್ರದ ಕಾಕಿನಾಡ ಮೂಲದ ಅಖಿಲೇಷ್ ಧರ್ಮರಾಜ್‌ನ ಜೊತೆ ಬೆಂಗಳೂರಿನ ವಸಂತಪುರದ ಟೆಕ್ಕಿ ಮದುವೆಯಾಗಿದ್ದಾರೆ. ಮ್ಯಾಟ್ರಿಮೋನಿಯಲ್ ನೋಡಿ ಬಳಿಕ ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಸದ್ಯ HSR ಲೇಔಟ್‌ನಲ್ಲಿ ಈ ದಂಪತಿ ವಾಸವಿದ್ದರು.

ಅಖಿಲೇಷ್ ಧರ್ಮರಾಜ್‌ನ ಮನೆಗೆ ಗಾಂಜಾ ತಂದು ಸೇವನೆ ಮಾಡ್ತಿದ್ದ. ಆನಂತರ ಮತ್ತಿನಲ್ಲಿ ನಿತ್ಯ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲ ಸ್ನೇಹಿತರನ್ನು ಮನೆಗೆ ಕರೆತಂದು ಗಾಂಜಾ ಪಾರ್ಟಿ ಮಾಡ್ತಿದ್ದ. ಈ ವೇಳೆ ಆತನ ಸ್ನೇಹಿತರು ಟೆಕ್ಕಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಆಗ ಮನೆಯಿಂದ ತಪ್ಪಿಸಿಕೊಂಡ ಬಂದ ಟೆಕ್ಕಿಗೆ ವಾಪಸ್ಸು ಮನೆಗೆ ಬರುವಂತೆ ಕಿರುಕುಳ ನೀಡಿದ್ದಾರೆ. ಈ ವಿಷಯ ಹೊರಗೆ ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಎನ್ನಲಾಗಿದೆ.

ಪತಿಯ ಮುಂದೆ ಪತ್ನಿಯ ಎಳೆದಾಡಿದ ಪತಿ ಸ್ನೇಹಿತರು ಡ್ರಗ್ ಸೇವಿಸಿ ಲೈಂಗಿಕ ಕಿರುಕುಳ ಕೊಟ್ಟಿರುವ ಆರೋಪ ಕೇಳಿ ಬಂದಿದೆ. ಗಂಡ ಹಾಗೂ ಆತನ ಸ್ನೇಹಿತರ ಕಿರುಕುಳಕ್ಕೆ ನೊಂದ ಮಹಿಳೆ ಪೊಲೀಸರಿಗೆ ದೂರು ಕೊಡಲು ಬಂದಿದ್ದಾರೆ. ಆಗ ಕೇಸ್ ವಾಪಸ್‌ ಪಡೆಯಲು ಒತ್ತಡ ಕೇಳಿ ಬಂದಿದ್ದು, ಪೊಲೀಸ್ ಸ್ಟೇಷನ್ ಮುಂದೆ ನೊಂದ ಮಹಿಳೆ ಪ್ರತಿಭಟನೆ ಮಾಡಿದ್ದಾರೆ. ಟೆಕ್ಕಿಯ ಹೋರಾಟಕ್ಕೆ ಮಣಿಿದಿರುವ ಸುಬ್ರಮಣ್ಯಪುರ ಠಾಣೆ ಪೊಲೀಸರು ಆರೋಪಿಗಳ ಸೆರೆ ಹಿಡಿದು ವಿಚಾರಣೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಸ್ನೇಹಿತರ ಜೊತೆ ಅತ್ಯಾಚಾರಕ್ಕೆ ಯತ್ನಿಸಿದ ಪಾಪಿ ಗಂಡ; ಪ್ರೀತಿಸಿ ಮದ್ವೆಯಾದ ಟೆಕ್ಕಿ ನ್ಯಾಯಕ್ಕಾಗಿ ಹೋರಾಟ

https://newsfirstlive.com/wp-content/uploads/2023/06/Bangalore-Husband.jpg

Load More