newsfirstkannada.com

ಬಾಡಿಗೆಗೆ ಮನೆ ಕೊಡೋ ಮುನ್ನ ಎಚ್ಚರ.. ಬೆಂಗಳೂರು ಶಂಕಿತ ಉಗ್ರರ ಮನೆ ಮಾಲಕಿ ಹೇಳಿದ್ದೇನು?

Share :

19-07-2023

    ಅಡ್ವಾನ್ಸ್​ ಕೊಟ್ಟಿಲ್ಲ ಅಂದರೆ ಮನೆ ಖಾಲಿ ಮಾಡಿ ಎಂದು ಹೇಳಿದ್ದೆ

    ಹೆಣ್ಣು ಮಗಳ ಜೊತೆ ಬಂದು ಮನೆ ಬಾಡಿಗೆ ಕೇಳಿದ್ದ ಸೈಯದ್ ಪತ್ನಿ

    40 ವರ್ಷದಿಂದ ಈ ಏರಿಯಾದಲ್ಲಿದ್ದೇವೆ, ಅವಮಾನ ಮಾಡಬೇಡಿ

ಬೆಂಗಳೂರು: ನಗರದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್ ಹಾಕಿದ್ದ ಸಮಾಜಘಾತುಕರ ಬಗ್ಗೆ ಸಿಸಿಬಿ ಪೊಲೀಸರು ಖಚಿತ ಮಾಹಿತಿ ಅಧರಿಸಿ ವಶಕ್ಕೆ ಪಡೆದಿದ್ದಾರೆ. ಶಂಕಿತ ಉಗ್ರರಲ್ಲಿ ಒಬ್ಬರಾದ ಸೈಯದ್ ಸುಹೇಲ್ ಸುಲ್ತಾನ್ ಪಾಳ್ಯದ ಬಾಡಿಗೆ ಮನೆಗೆ ಅಡ್ವಾನ್ಸ್​ ಕೂಡ ಕೊಡದೇ ಮನೆಯಲ್ಲಿದ್ದರು ಇಂಬ ಸತ್ಯವನ್ನು ಆ ಮನೆಯ ಮಾಲೀಕರು ಹೇಳಿದ್ದಾರೆ. ಮಾಧ್ಯಮದವರ ಮುಂದೆ ಅಳುತ್ತಾ ಮಾತನಾಡಿದ ಮನೆಯ ಮಾಲಕಿ, ದಯವಿಟ್ಟು ಹೇಳುತ್ತೇನೆ ಹೀಗೆ ಮಾಡಬೇಡಿ ಸರ್​ ಕೈಮುಗಿತೀನಿ ಇಲ್ಲಿಂದ ಹೊರಡಿ. ಸೈಯದ್​ನ ಪತ್ನಿ​ ಹೆಣ್ಣುಮಗಳ ಜೊತೆ ಬಂದು ಮನೆ ಬಾಡಿಗೆ ಕೇಳಿದರು. 5 ಸಾವಿರ ಕೊಟ್ಟು ಬಾಡಿಗೆಗೆ ಬಂದರು. ಆಮೇಲೆ ಅಡ್ವಾನ್ಸ್​ ಕೊಡದೇ ಮತ್ತೆ 5 ಸಾವಿರ ರೂ. ಮಾತ್ರ ಕೊಡಲು ಬಂದರು. ಅದಕ್ಕೆ 5 ಸಾವಿರ ಬೇಡ, ಅಡ್ವಾನ್ಸ್​ 50 ಸಾವಿರ ರೂಪಾಯಿ ಕೊಡು ಎಂದು ಹೇಳಿದ್ದೆ.

ಆ ಮೇಲೆ ಮನೆ ಅಜೆಸ್ಟ್​ ಆಗಿಲ್ಲ ಅಂದ್ರೆ ಮನೆ ಖಾಲಿ ಮಾಡುವುದಾಗಿ 9 ದಿನದಲ್ಲಿ ಹೇಳಿದ್ದರು. ನನಗೆ ಈ ತರ ಎಲ್ಲ ಅವಮಾನ ಮಾಡಬೇಡಿ ಸ್ವಾಮಿ. ದಯವಿಟ್ಟು ಇಲ್ಲಿಂದ ಕೆಳಗಡೆ ನಡೆಯಿರಿ. 40 ವರ್ಷದಿಂದ ಈ ಏರಿಯಾದಲ್ಲಿ ಇದ್ದೇವೆ. ಯಾವತ್ತೂ ಈ ಥರ ತೊಂದರೆ ಆಗಿಲ್ಲ. ಅಡ್ವಾನ್ಸ್​ ಕೊಟ್ಟಿಲ್ಲದ್ದಕ್ಕೆ ಅವತ್ತೆ ಮನೆ ಖಾಲಿ ಮಾಡಲು ಹೇಳಿದ್ದೆ. ಆದ್ರೆ ಬೇರೆ ಸಿಕ್ಕಿದರೆ ಹೋಗುತ್ತೇವೆ ಎಂದಿದ್ರು. ಅವರು ಇಲ್ಲಿಗೆ ಬಂದು 1 ತಿಂಗಳ ಮೇಲೆ 10 ದಿನವಾಗಿದೆ ಅಷ್ಟೇ. ನನಗೂ ಗೊತ್ತಿರೋದು ಇಷ್ಟೇ ಎಂದು ಮಾಲಕಿ ಕಣ್ಣೀರು ಹಾಕಿದ್ದಾರೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಡಿಗೆಗೆ ಮನೆ ಕೊಡೋ ಮುನ್ನ ಎಚ್ಚರ.. ಬೆಂಗಳೂರು ಶಂಕಿತ ಉಗ್ರರ ಮನೆ ಮಾಲಕಿ ಹೇಳಿದ್ದೇನು?

https://newsfirstlive.com/wp-content/uploads/2023/07/SYAYAD_SYHEL_HOUSE_1.jpg

Load More