newsfirstkannada.com

WATCH: ಜುನೇದ್‌ಗೂ ಸೈಯ್ಯದ್ ಸುಹೇಲ್‌ಗೂ ಇತ್ತು ಲಿಂಕ್‌; ಶಂಕಿತ ಉಗ್ರನ ಪತ್ನಿ ಹೇಳಿದ್ದೇನು?

Share :

19-07-2023

    ಅಣ್ಣಾ ಇದು ಕೇಸ್‌ ಏನೆಂದು ನನಗೆ ಗೊತ್ತಿಲ್ಲ- ಸೈಯ್ಯದ್ ಪತ್ನಿ

    ‘ಮನೆಯಲ್ಲಿ ನನ್ನ ಗಂಡ ಮತ್ತು ನಮ್ಮ ಅತ್ತೆ ಮಾತ್ರ ಇರೋದು‘

    ಇಲ್ಲಿಗೆ ಯಾರು ಬಂದಿಲ್ಲ, ಆದರೆ ಗನ್​ ಎಲ್ಲಿಂದ ಬಂತು ಗೊತ್ತಿಲ್ಲ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್‌ ಹಾಕಿದ್ದ ಐವರು ಶಂಕಿತ ಉಗ್ರರನ್ನ CCB ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ನಗರದಲ್ಲಿ ಸ್ಕೆಚ್ ಹಾಕಿದ್ದ ಸಮಾಜಘಾತುಕರ ಬಗ್ಗೆ ಸಿಸಿಬಿ ಪೊಲೀಸರು ಖಚಿತ ಮಾಹಿತಿ ಅಧರಿಸಿ ಕೃತ್ಯ ವಿಫಲಗೊಳಿಸಿದ್ದಾರೆ. ಇನ್ನು ಶಂಕಿತರಲ್ಲಿ ಒಬ್ಬರಾದ ಸೈಯ್ಯದ್ ಸುಹೇಲ್ ಕುಟುಂಬಸ್ಥರು ಗೋಳಾಡಿದ್ದಾರೆ.

ಮಾಧ್ಯಮಗಳೆದುರು ಬಂಧಿತ ಉಗ್ರ ಸೈಯ್ಯದ್​ ಪತ್ನಿ ಅಳಲು ತೋಡಿಕೊಂಡು ಮಾತನಾಡಿದ್ದಾರೆ. ಅಣ್ಣಾ ಇದು ಏನ್ ಕೇಸ್ ಅಂತಾ ಗೊತ್ತಿಲ್ಲ. ನಾನು ಸೈಯದ್​ ಸುಹೇಲ್​ನ ಹೆಂಡತಿ. ಮನೆಯಲ್ಲಿ ನಾನು, ನನ್ನ ಯಜಮಾನ ಮತ್ತು ನಮ್ಮ ಅತ್ತೆ ಅವರು ಮಾತ್ರ ಇದ್ದೇವೆ ಅಷ್ಟೇ. ಬೇರೆ ಯಾರು ಬಂದಿಲ್ಲ. ನಿಜವಾಗ್ಲೂ ಇಲ್ಲಿಗೆ ಯಾರು ಕೂಡ ಬಂದಿಲ್ಲ.

ಇದನ್ನೂ ಓದಿ: ದುಬೈನಲ್ಲಿದ್ದು ಫಂಡಿಂಗ್ ಮಾಡಿದ್ದೇ A2 ಜುನೇದ್; ಬೆಂಗಳೂರಲ್ಲಿ ಉಗ್ರರ ಗ್ಯಾಂಗ್‌ ಸಿಕ್ಕಿಬಿದ್ದಿದ್ದೇ ರಣರೋಚಕ

ಉಮರ್​ ಯಾರು ಎಂಬುದು ಗೊತ್ತಿಲ್ಲ. ಜುನೈದ್​ ಬಗ್ಗೆ ಗೊತ್ತು. ಸಂದೆಲ್​ ಮರ್ಡರ್ ಕೇಸ್​ನಲ್ಲಿ ಇದ್ದ ಅದು ಅಷ್ಟೇ ಗೊತ್ತಿರೋದು. ನೈಟ್​, ಮಾರ್ನಿಂಗ್​ ಎಲ್ಲ ಟೈಮ್​ ನೋಡಿಕೊಂಡು ಇದ್ದೇನೆ. ಯಾರೂ ಬರಲ್ಲ. ನಮ್ಮ ಯಜಮಾನ ಎಲ್ಲ ಕೇಳಿ, ಎನ್‌ಕ್ವೈರಿ ಮಾಡಿಯೇ ಒಳಗೆ ಬರಲು ಬಿಟ್ಟಿರುವುದು. ಪೊಲೀಸರು ಇಲ್ಲಿಗೆ ಬಂದು ಚೆಕ್​ ಮಾಡಿದಾಗ ಇಲ್ಲಿ ಏನು ಸಿಕ್ಕಿಲ್ಲ. ಆದರೆ ಗನ್​ ಎಲ್ಲಾ ಎಲ್ಲಿಂದ ಬಂದಿರೋದು ನನಗೆ ಗೊತ್ತಿಲ್ಲ. ಇಲ್ಲಿಗೆ ಬಂದು 2 ತಿಂಗಳು ಅಷ್ಟೇ ಆಗಿರೋದು ಎಂದು ಸೈಯ್ಯದ್ ಸುಹೇಲ್ ಪತ್ನಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಜುನೇದ್‌ಗೂ ಸೈಯ್ಯದ್ ಸುಹೇಲ್‌ಗೂ ಇತ್ತು ಲಿಂಕ್‌; ಶಂಕಿತ ಉಗ್ರನ ಪತ್ನಿ ಹೇಳಿದ್ದೇನು?

https://newsfirstlive.com/wp-content/uploads/2023/07/SYAYAD_SYHEL_WIFE.jpg

Load More