newsfirstkannada.com

ಬೆಂಗಳೂರಿನ ಉಗ್ರರ ಸಂಚು ಬಯಲು ಮಾಡಿದ್ದು ಒಂದೇ ಒಂದು ಫೋನ್​​ ಕಾಲ್​​; ಯಾರದ್ದು..?

Share :

21-07-2023

  ಬೆಂಗಳೂರಲ್ಲಿ ಉಗ್ರರ ಸಂಚು ಬಯಲಾಗಿದ್ದು ಹೇಗೆ?

  ಇಂಟರ್ ಸೆಪ್ಷನ್​ ಕರೆಗಳಿಂದ ಸಿಕ್ಕಿಬಿದ್ದ ಶಂಕಿತ ಉಗ್ರರು!

  ಶಂಕಿತ ಉಗ್ರರಿಗೆ ಆಶ್ರಯ ಕೊಟ್ಟಿದ್ದವರಿಗೆ ಸಂಕಷ್ಟ!

ಬೆಂಗಳೂರು: ರಾಜಧಾನಿಯಲ್ಲಿ ದೊಡ್ಡ ಮಟ್ಟದ ನರಮೇಧಕ್ಕೆ ಸ್ಕೆಚ್ ಹಾಕಿದ್ದ ನರರಾಕ್ಷಸರನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಆದರೆ ಈ ದುಷ್ಟರ ಕೂಟ ಇಂಥದ್ದೊಂದು ಸಂಚು ನಡೆಸ್ತಿದ್ದಾರೆ ಅಂತ ಸುಳಿವು ಕೊಟ್ಟಿದ್ದೇ ಅದೊಂದು ಫೋನ್ ಕಾಲ್. ಪೊಲೀಸರು ಈ ಮಹಾ ಸಂಚನ್ನು ಟ್ರ್ಯಾಕ್ ಮಾಡಿದ್ದೇ ರಣರೋಚಕ. ಬೆಂಗಳೂರಿನಲ್ಲಿ ಸೆರೆ ಸಿಕ್ಕಿರುವ ಐವರು ಶಂಕಿತ ಉಗ್ರರ ಬಂಧನದ ಬೆನ್ನಲ್ಲೇ ಹಲವು ಭಯಾನಕ ಸಂಗತಿಗಳು ಹೊರ ಬರ್ತಿವೆ. ಐವರು ಉಗ್ರರು ದೊಡ್ಡ ಮಟ್ಟದ ದಾಳಿಗೆ ಸ್ಕೆಚ್ ಹಾಕ್ತಿದ್ದಾರೆ ಅಂತ ಸುಳಿವು ನೀಡಿದ್ದೇ ಗುಪ್ತಚರ ಇಲಾಖೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾತ್ರಿ ಹೊತ್ತಲ್ಲೇ ಒಂದೆರಡು ಮೊಬೈಲ್​​ಗಳು ಆ್ಯಕ್ಟಿವ್ ಆಗಿರುವ ಸಣ್ಣ ಸುಳಿವೊಂದು ಗುಪ್ತಚರ ಇಲಾಖೆಗೆ ಸಿಕ್ಕಿತ್ತು. ಇದರ ಮೂಲ ಹುಡುಕಬೇಕು ಅಂತಾನೇ ಐಬಿ ಕಣಕ್ಕೆ ಇಳಿದಿತ್ತು. ಕೆಲವು ಮೊಬೈಲ್​​ ನಂಬರ್​ಗಳನ್ನು ಪರಿಶೀಲನೆ ನಡೆಸಿದಾಗ ಯಾವುದೇ ಸಂಶಯ ಬರಲಿಲ್ಲ. ಆದರೆ ಅದೊಂದು ಮೊಬೈಲ್ ನಂಬರ್​ ಮಾತ್ರ ಸಿಕ್ಕಾಪಟ್ಟೆ ಸಂಶಯಕ್ಕೆ ದಾರಿ ಮಾಡಿಕೊಟ್ಟಿತ್ತು. ಹೀಗಾಗಿ ಆ ಮೊಬೈಲ್​​ ನಂಬರ್​​ನ್ನು ಐಬಿ ಇಂಟರ್​​ಸೆಪ್ಷನ್​ಗೆ ಹಾಕಿತ್ತು. ಕಳೆದ 3 ತಿಂಗಳಿಂದ ನಿರಂತರ ಕಾಯುವಿಕೆ ನಡೆದಿತ್ತು. ಆದ್ರೆ ಕಳೆದ ಒಂದು ತಿಂಗಳ ಅವಧಿಯಲ್ಲಿ ನಿಗೂಢವಾದ ಕೋಡ್​ ವರ್ಡ್ ಬಳಕೆ ಆಗಿತ್ತು. ಹೀಗಾಗಿ ಐಬಿ ಅಲರ್ಟ್ ಆಗಿತ್ತು.

ಪರಪ್ಪನ ಜೈಲಿನಲ್ಲಿ ಮಾತನಾಡ್ತಿದ್ದುದು ಯಾರು.. ಯಾರೊಂದಿಗೆ?
ಗುಪ್ತಚರ ಇಲಾಖೆಯ ‘ಆಪರೇಷನ್ ಇಂಟರ್​ಸೆಪ್ಷನ್’ ಯಶಸ್ವಿ!

ಇಂಟರ್​ಸೆಪ್ಷನ್​ ಮೂಲಕ ಆ ಇಬ್ಬರ ನಿಗೂಢ ಮಾತುಕತೆಯನ್ನು ಕಂಡು ಹಿಡಿದಿತ್ತು ಗುಪ್ತಚರ ಇಲಾಖೆ. ನಡುರಾತ್ರಿಯಲ್ಲಿ ಮೊಬೈಲ್​​ನಲ್ಲಿ ಸ್ಕೆಚ್ ಹಾಕ್ತಿದ್ದವರು ಬೇರೆ ಯಾರೂ ಅಲ್ಲ. ಐವರು ಶಂಕಿತ ಉಗ್ರರ ಗುಂಪಿನಲ್ಲಿರೋ ಟಿ.ನಜೀರ್ ಹಾಗೂ ಜುನೈದ್​​. ವಿವಿಧ ಪ್ರಕರಣಗಳಲ್ಲಿ ಜೈಲು ಸೇರಿದ್ದ ಈ ಇಬ್ಬರಿಗೂ ಜೈಲಿನಲ್ಲೇ ಸ್ನೇಹ-ಸಂಪರ್ಕ ಬೆಳೆದಿತ್ತು. ಒಂದು ತಿಂಗಳ ಅಂತರದಲ್ಲಿ ಪ್ರಮುಖ ಉಪಕರಣ ಡೆಲಿವರಿ ಬಗ್ಗೆ ಮಾಹಿತಿ ಸಿಕ್ಕಿದ್ದ ಬೆನ್ನಲ್ಲೇ ಕಳೆದ ಒಂದು ವಾರದಿಂದ ಆಪರೇಷನ್ ಇಂಟರ್​​ ಸೆಪ್ಷನ್​ ನಡೆಸಲು ಗುಪ್ತಚರ ಇಲಾಖೆ ಸಜ್ಜಾಗಿತ್ತು. ಮೊನ್ನೆ CCB ಅಧಿಕಾರಿಗಳ ನೆರವಿನೊಂದಿಗೆ ಯಶಸ್ವಿ ಆಪರೇಷನ್ ನಡೆಸಿತ್ತು.

ಸ್ವಾತಂತ್ರ್ಯ ದಿನದಂದೇ ದೊಡ್ಡ ಸ್ಫೋಟಕ್ಕೆ ಸಜ್ಜಾಗಿದ್ರಾ?

ಇನ್ನು, ಕರ್ನಾಟಕದಲ್ಲಿ ಪಿಎಫ್​​ಐ ಬ್ಯಾನ್​ ಬೆನ್ನಲ್ಲೇ ಆಗಸ್ಟ್ 15ರಂದೇ ವಿಧ್ವಂಸಕ ಕೃತ್ಯ ನಡೆಸಲು ಶಂಕಿತ ಉಗ್ರರು ಪ್ಲಾನ್ ಮಾಡಿದ್ದರು ಎಂಬ ಮಾಹಿತಿ ಬಯಲಾಗಿದೆ. ಶಂಕಿತ ಉಗ್ರರ ಈ ಪ್ಲಾನ್ ಬಗ್ಗೆ ಕಳೆದ ಸೆಪ್ಟೆಂಬರ್​ನಲ್ಲೇ ಎನ್​ಐಎ ರಾಜ್ಯ ಪೊಲೀಸರಿಗೆ ಎಚ್ಚರಿಕೆ ನೀಡಿತ್ತಂತೆ. ಆ ಪ್ರಕಾರ, ಒಬ್ಬೊಬ್ಬರು 5 ಪಿಸ್ತೂಲ್​ ಶೇಖರಣೆ ಮಾಡಿ, ಜನನಿಬಿಡ ಪ್ರದೇಶಕ್ಕೆ ನುಗ್ಗಿ ಏಕಾಏಕಿ ದಾಳಿ ಮಾಡೋಕೆ ಸಂಚು ರೂಪಿಸಿದ್ದರಂತೆ. ಸದ್ಯ ಎನ್​ಐಎ ಮಾಹಿತಿ ಆಧರಿಸಿ ಶಂಕಿತರನ್ನ ಸಿಸಿಬಿ ಲಾಕ್ ಮಾಡಿದೆ.

ಶಂಕಿತರದ್ದು ಒಳಗೊಂದು.. ಹೊರಗೊಂದು ಮುಖವಾಡ!
ಹೊರಗೆ ಸಾಮಾನ್ಯರ ಬದುಕು.. ಒಳಗೆ ಬರೀ ಬಂದೂಕು!

ವಿಧ್ವಂಸಕ ಕೃತ್ಯಕ್ಕೆ ಪ್ಲಾನ್​ ಮಾಡಿದ್ದವರು ಸಾಮಾನ್ಯರಂತೆ ಬದುಕುತ್ತಿದ್ರು ಅನ್ನೋ ಸ್ಫೋಟಕ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಡ್ರೈವರ್​, ಮೆಕ್ಯಾನಿಕ್​, ವೆಲ್ಡರ್​​ ಕೆಲಸ ಮಾಡ್ತಿದ್ದ ಶಂಕಿತರು ಅಸಲಿ ಮುಖ ಮರೆಮಾಚಲು ಸಾಮಾನ್ಯರಂತೆ ಬದುಕುತ್ತಿದ್ರು ಎನ್ನಲಾಗಿದೆ. ಒಂದನೇ ಶಂಕಿತ ಉಗ್ರ ಜುನೈದ್​, ಕುರಿ ವ್ಯಾಪಾರಿಯಾಗಿದ್ದು ಕೊಲೆ ಹಾಗೂ ರಕ್ತಚಂದನ ಕೇಸ್​​​ನಲ್ಲಿ ಸಿಕ್ಕಿಬಿದ್ದಿದ್ದ. ಇನ್ನು 2ನೇ ಶಂಕಿತ ಉಗ್ರ ಮುದಾಸೀರ್, ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದ, ಕೊಲೆ, ದರೋಡೆ, ರಕ್ತ ಚಂದನ ಕಳವು ಕೇಸ್ ಬಂಧಿಯಾಗಿದ್ದ. 3ನೇ ಶಂಕಿತ ಉಗ್ರ ಸೈಯದ್​ ಉಮರ್ ಕೂಡ ಮೆಕ್ಯಾನಿಕ್ ಜೊತೆಗೆ ಕಾರು ಚಾಲಕನಾಗಿ ಕೆಲಸ ಮಾಡ್ತಿದ್ದು ಈತನ ಮೇಲೆ ಕೊಲೆ ಪ್ರಕರಣ ಇದೆ. ಇನ್ನು 4ನೇ ಶಂಕಿತ ಉಗ್ರ ಜಾಹೀದ್, ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದು ಕೊಲೆ, ದರೋಡೆ ಪ್ರಕರಣದಲ್ಲಿದ್ದ. 5ನೇ ಶಂಕಿತ ಉಗ್ರ ಸೈಯದ್ ಸುಹೇಲ್, ಮೆಕ್ಯಾನಿಕ್ ಆಗಿದ್ದು ಕೊಲೆ ಪ್ರಕರಣ ಇದೆ. ಇನ್ನು 6ನೇ ಶಂಕಿತ ಉಗ್ರ ಕೂಡ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಕೊಲೆ ಕೇಸ್​​ನಲ್ಲಿದ್ದಾನೆ.

ಇನ್ನು, ಶಂಕಿತ ಉಗ್ರರಿಗೆ ಮನೆ ಕೊಟ್ಟಿದ್ದ ಮಾಲೀಕರಿಗೆ ಸಂಕಷ್ಟ ತಂದಿದೆ. ಬಾಡಿಗೆ ಕೊಡುವಾಗ ಪೂರ್ವಾಪರ ತಿಳಿಯದೇ ಯಾವುದೇ ಕರಾರುಪತ್ರ ಪಡೆಯದೇ ಮನೆ ನೀಡಿರುವ ಆರೋಪ ಕೇಳಿಬಂದಿದೆ. ಹೆಬ್ಬಾಳ ಬಳಿಯ ಭುವನೇಶ್ವರಿ ನಗರದಲ್ಲಿ ಮನೆ ಬಾಡಿಗೆ ನೀಡಿದ್ದ ಮನೆ ಮಾಲಕಿ ಪದ್ಮಾ ವಿರುದ್ಧ ಪ್ರಕರಣ ದಾಖಲಿಸಲು ಸಿದ್ಧತೆ ನಡೆದಿದೆ. ಒಟ್ಟಿನಲ್ಲಿ ಒಂದು ಫೋನ್​​ ಕಾಲ್​​ನಿಂದ ಆರಂಭವಾದ ಆಪರೇಷನ್ ಐವರು ಉಗ್ರರನ್ನು ಬೇಟೆಯಾಡುವ ಮಟ್ಟಕ್ಕೆ ಬಂದಿದ್ದು ಮಾತ್ರ ರಣರೋಚಕ. ಗುಪ್ತಚರ ಇಲಾಖೆ ಹಾಗೂ ಸಿಸಿಬಿ ಪೊಲೀಸರ ಕಾರ್ಯ ದೊಡ್ಡಮಟ್ಟದ ಸಾವು-ನೋವನ್ನು ತಪ್ಪಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿನ ಉಗ್ರರ ಸಂಚು ಬಯಲು ಮಾಡಿದ್ದು ಒಂದೇ ಒಂದು ಫೋನ್​​ ಕಾಲ್​​; ಯಾರದ್ದು..?

https://newsfirstlive.com/wp-content/uploads/2023/07/bangaluru.jpg

Load More