newsfirstkannada.com

ಮಾಸ್ಟರ್​ ಆನಂದ್​ಗೆ 18.50 ಲಕ್ಷ ರೂ. ವಂಚಿಸಿದ ಆರೋಪ.. ಖಾಸಗಿ ಕಂಪನಿ ವಿರುದ್ಧ ಕೇಸ್ ದಾಖಲು

Share :

26-06-2023

    ನಿವೇಶನ ನೀಡುವುದಾಗಿ ವಂಚಿಸಿದ ಆರೋಪ

    ಮುಂಗಡವಾಗಿ ಕೊಟ್ಟಿದ್ದ ಹಣ ನೀಡದೇ ವಂಚನೆ

    ಚಂದ್ರಲೇಔಟ್ ಠಾಣೆಯಲ್ಲಿ ಕೇಸ್ ದಾಖಲು

ಬೆಂಗಳೂರು: ಚಿತ್ರನಟ, ನಿರೂಪಕ ಮಾಸ್ಟರ್ ಆನಂದ್​ಗೆ ನಿವೇಶನ ನೀಡೋದಾಗಿ ‘ಮಲ್ಟಿ ಲೀಪ್ ವೆಂಚರ್ಸ್ ಕಂಪನಿ’ (Multi Leap Ventures Private Limited) ಬರೋಬ್ಬರಿ 18.50 ಲಕ್ಷ ರೂಪಾಯಿ ವಂಚನೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ನಗರದ ಚಂದ್ರಲೇಔಟ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಏನಿದು ಆರೋಪ..? 

ಮಾಸ್ಟರ್​ ಆನಂದ್ ಶೂಟಿಂಗ್​ಗೆ ತೆರಳಿದ್ದ ವೇಳೆ ಕೊಮ್ಮಘಟ್ಟದ ರಾಮಸಂದ್ರ ಗ್ರಾಮದಲ್ಲಿ ನಿವೇಶನ ನೋಡಿದ್ದರು. ಮನಿಕಾ ಕೆಂ.ಎಂ ಎನ್ನುವವರು ನಿವೇಶನ ಖರೀದಿಸಲು ಸಾಲ ಸೌಲಭ್ಯ ಇರೋದಾಗಿ ಹೇಳಿದ್ದರಂತೆ. ನಂತರ ಕಂಪನಿಯು ರಾಮಸಂದ್ರದ ಬಳಿ 2,000 ಅಡಿ ವಿಸ್ತೀರ್ಣದ ನಿವೇಶನ ತೋರಿಸಿತ್ತು. ಇದರ ಖರೀದಿಗೆ ಒಪ್ಪಂದ ಕೂಡ ಆಗಿತ್ತು. ಅದರಂತೆ ಮೊದಲ ಹಂತವಾಗಿ 18.5 ಲಕ್ಷ ರೂಪಾಯಿ ಹಣವನ್ನು ನಟ ನೀಡಿದ್ದರು ಎನ್ನಲಾಗಿದೆ.

ಖರೀದಿ ಮಾಡುವುದರಿಂದ ಮಾಸ್ಟರ್ ಆನಂದ್ ಹಾಗು ಪತ್ನಿ ಯಶಸ್ವಿನಿ ಹೆಸರಲ್ಲಿ ಕಂಪನಿಯು ಖರೀದಿ ಖರಾರು ಪತ್ರವನ್ನು ಮಾಡಿ ಕೊಟ್ಟಿತ್ತು. ಆದರೆ ಕಂಪನಿಯು ಗೊತ್ತಿಲ್ಲದೇ ನಿವೇಶನವನ್ನು ಬೇರೆಯವರಿಗೆ ಮಾರಾಟ ಮಾಡಿದೆ. ಈ ಬಗ್ಗೆ ವಿಚಾರಿಸಿದರೆ ಯಾವುದೇ ಸ್ಪಂದನೆ ನೀಡಿಲ್ಲ. ಅಲ್ಲದೇ ಮುಂಗಡವಾಗಿ ನೀಡಿದ್ದ ಹಣವನ್ನೂ ವಾಪಸ್ ಕೊಟ್ಟಿಲ್ಲ ಎಂಬ ಆರೋಪ ಕೇಳಿಬಂದಿದೆ.

2020ರ ಸೆಪ್ಟೆಂಬರ್​ನಿಂದ 2021ರ ಅಕ್ಟೋಬರ್​ನ ಅವಧಿಯಲ್ಲಿ ಮಲ್ಟಿ ಲೀಪ್ ವೆಂಚರ್ಸ್ ಕಂಪನಿ ವಂಚನೆ ಮಾಡಿದೆ ಎನ್ನಲಾಗಿದೆ. ಈ ಸಂಬಂಧ ಮಾಸ್ಟರ್​ ಆನಂದ್, ಚಂದ್ರಲೇಔಟ್ ಠಾಣೆಯಲ್ಲಿ BUDS (ಅನಿಯಂತ್ರಿತ ಉಳಿತಾಯ ಯೋಜನೆಗಳ ನಿಷೇಧ) ಕಾಯ್ದೆ ಅಡಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಸ್ಟರ್​ ಆನಂದ್​ಗೆ 18.50 ಲಕ್ಷ ರೂ. ವಂಚಿಸಿದ ಆರೋಪ.. ಖಾಸಗಿ ಕಂಪನಿ ವಿರುದ್ಧ ಕೇಸ್ ದಾಖಲು

https://newsfirstlive.com/wp-content/uploads/2023/06/MASTER_ANAND.jpg

Load More