ಬೆಂಗಳೂರು ಟ್ರಾಫಿಕ್‌ನಿಂದಲೇ ಸಾವಿರಾರು ಕೋಟಿ ರೂಪಾಯಿ ನಷ್ಟ!
ಬೆಂಗಳೂರಿನಲ್ಲಿ ಜನಸಂಖ್ಯೆಯ ಜೊತೆಗೆ ವಾಹನಗಳು ದಟ್ಟಣೆ ಜಾಸ್ತಿ
ಸಿಲಿಕಾನ್ ಸಿಟಿ ಟ್ರಾಫಿಕ್ ಸಮಸ್ಯೆಯಿಂದ ಆಗುತ್ತಿರೋ ನಷ್ಟ ಎಷ್ಟು!
ಬೆಂಗಳೂರು: ರಾಜ್ಯ ರಾಜಧಾನಿ, ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎಂದೆಲ್ಲಾ ಎಷ್ಟು ಖ್ಯಾತಿ ಪಡೆದಿದೆಯೋ ಬೆಂಗಳೂರು ಟ್ರಾಫಿಕ್ ವಿಚಾರದಲ್ಲೂ ಸಹ ಅಷ್ಟೇ ಕುಖ್ಯಾತಿ ಪಡೆದುಕೊಂಡಿದೆ. ಇದರಿಂದ ಸಿಟಿ ಮಂದಿ ಅನುಭವಿಸುತ್ತಿರೋ ಪರದಾಟಗಳು ಅಷ್ಟಿಷ್ಟಲ್ಲ. ಸದ್ಯ ಹೊರಬಿದ್ದಿರೋ ಮಾಹಿತಿ ಪ್ರಕಾರ ಸಾವಿರಾರು ಕೋಟಿ ರೂಪಾಯಿ ಈ ಟ್ರಾಫಿಕ್‌ನಿಂದಲೇ ನಷ್ಟವಾಗುತ್ತಿದೆ ಎಂದು ವರದಿಯಾಗಿದೆ.
ಸಂಚಾರ ದಟ್ಟಣೆಯಿಂದಾಗಿ ವಾರ್ಷಿಕ 19 ಸಾವಿರ ಕೋಟಿ ನಷ್ಟ
ವಾಹನಗಳ ಜೊತೆ ರಸ್ತೆಗೆ ಇಳಿದರೆ ಮುಗಿದೋಯ್ತು ಸಂಚಾರ ವಿಳಂಬ, ದಟ್ಟಣೆ, ಸಿಗ್ನಲ್‌ಗಳಲ್ಲಿ ಗಂಟೆಗಟ್ಟಲೆ ನಿಲ್ಲೋದು, ಸಮಯದ ನಷ್ಟ ಸೇರಿ ಇತರೆ ಅಂಶಗಳು ನಗರದಲ್ಲಿ ಕಾಮನ್ ಆಗಿಬಿಟ್ಟಿದೆ. ಈ ಬಗ್ಗೆ ಸಂಚಾರ ತಜ್ಞ ಎಂ ಎನ್ ಶ್ರೀಹರಿ ಮತ್ತು ಅಧ್ಯಯನ ಮಾಡಿದ್ದಾರೆ. ಅವರ ಮಾಹಿತಿ ಪ್ರಕಾರ ಟ್ರಾಫಿಕ್ ಜಾಮ್‌ನಿಂದ ವಾರ್ಷಿಕ 19,725 ಕೋಟಿ ರೂಪಾಯಿ ನಷ್ಟವನ್ನು ಬೆಂಗಳೂರು ಅನುಭವಿಸುವಂತಾಗಿದ್ಯಂತೆ. ಈ ಅಧ್ಯಯನದಲ್ಲಿ ರಸ್ತೆ ಯೋಜನೆ, ಮೇಲ್ಸೇತುವೆ, ಸಂಚಾರ ನಿರ್ವಹಣೆ ಮತ್ತು ಮೂಲಸೌಕರ್ಯ ಕೊರತೆಯ ಸುತ್ತಲು ಹಲವು ಸಮಸ್ಯೆಗಳಿವೆ ಅನ್ನೋದನ್ನ ಬಹಿರಂಗಪಡಿಸಲಾಗಿದೆ. ಜೊತೆಗೆ ಪರಿಹಾರವನ್ನೂ ತಜ್ಞರು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಯಾವುದೇ ಸರ್ಕಾರ ಬಂದು ಹೋದರೂ, ನಗರದ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ಟ್ರಾಫಿಕ್‌ಗೆ ಮುಕ್ತಿ ನೀಡಲು ಆಗುತ್ತಿಲ್ಲ. ಮುಂದಾಲೋಚನೆಯಿಂದ ಸಂಚಾರ ದಟ್ಟಣೆಯನ್ನ ನಿಯಂತ್ರಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲು ಪ್ರಸ್ತುತ ಸರ್ಕಾರವಾದರೂ ಗಂಭೀರ ಚಿಂತನೆ ನಡೆಸಬೇಕಿದೆ. ನಗರದ ಟ್ರಾಫಿಕ್ ಪ್ರಾಬ್ಲಮ್‌ನಿಂದ ಸುಮಾರು 19 ಸಾವಿರ ಕೋಟಿ ನಷ್ಟವಾಗ್ತಿರೋದಂತೂ ಬೇಸರದ ವಿಚಾರವೇ ಅಲ್ವಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ