ಬೆಂಗಳೂರಿನ ಲಗ್ಗೆರೆ ಬಳಿ ದಾರುಣ ಘಟನೆ
ಕೆಲಸಕ್ಕೆ ಹೋದವರು ಶವವಾಗಿ ಬಂದರು
ಮೃತರಿಬ್ಬರು ತುಂಬಾ ಬಡವರು, ಏನ್ ಕೆಲ್ಸ ಮಾಡ್ತಿದ್ರು ಗೊತ್ತಾ?
ಬೆಂಗಳೂರು: ಗಾರೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಬ್ರೇಕ್ ಫೇಲ್ ಆಗಿದ್ದ ಬಿಎಂಟಿಸಿ ಬಸ್ ಹರಿದು ಸಾವನ್ನಪ್ಪಿರುವ ಘಟನೆ ಲಗ್ಗೆರೆಯ ಕೆಂಪೇಗೌಡ ಆರ್ಚ್ ಬಳಿ ನಡೆದಿದೆ.
ಸುರೇಶ್ ಹಾಗೂ ಆತನ ಸ್ನೆಹಿತ ಸಾವನ್ನಪ್ಪಿರುವ ದುರ್ದೈವಿಗಳು. ಈ ಇಬ್ಬರು ಗಾರೆ ಕೆಲಸ ಮುಗಿಸಿಕೊಂಡು ಲಗ್ಗೆರೆ ಬಳಿಯ ರಿಂಗ್ ರಸ್ತೆಯನ್ನು ಕ್ರಾಸ್ ಮಾಡುತ್ತಿದ್ದರು. ಈ ವೇಳೆ ಬ್ರೇಕ್ ಫೇಲ್ ಆಗಿದ್ದ ಬಿಎಂಟಿಸಿ ಬಸ್ ಇಬ್ಬರನ್ನು ಗುದ್ದಿಕೊಂಡು ಹೋಗಿ ಇನ್ನೊಂದು ಬಿಎಂಟಿಸಿ ಬಸ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ಬಸ್ಗಳ ಮಧ್ಯೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸದ್ಯ ಎರಡು ಬಿಎಂಟಿಸಿ ಬಸ್ ಕಂಡಕ್ಟರ್ ಹಾಗೂ ಡ್ರೈವರ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ರಾಜಾಜಿನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ