newsfirstkannada.com

×

ವೈಯಾಲಿಕಾವಲ್ ಮಹಾಲಕ್ಷ್ಮಿ ಕೇಸ್‌ಗೆ ಹೊಸ ಟ್ವಿಸ್ಟ್‌.. ಪೀಸ್‌, ಪೀಸ್ ಮಾಡಿದ್ದು ಅಶ್ರಫ್ ಅಲ್ಲ? ಮತ್ಯಾರು?

Share :

Published September 23, 2024 at 1:37pm

Update September 23, 2024 at 2:04pm

    ಗೆಳೆಯ ಆಶ್ರಫ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ಕುಟುಂಬಸ್ಥರು

    ಮಹಾಲಕ್ಷ್ಮಿಯನ್ನ 50 ಪೀಸ್‌ ಮಾಡಿ ಫ್ರಿಡ್ಜ್‌ನಲ್ಲಿಟ್ಟಿದ್ದ ಹಂತಕ ಎಲ್ಲಿದ್ದಾನೆ?

    ಬೆಂಗಳೂರಲ್ಲಿ ವಾಸವಿದ್ದ ಕಿರಾತಕನ ಬೆನ್ನು ಬಿದ್ದ ಪೊಲೀಸ್‌ ತನಿಖಾ ತಂಡ

ಬೆಂಗಳೂರು: ವೈಯಾಲಿಕಾವಲ್ ಮಹಾಲಕ್ಷ್ಮಿ ಕೇಸ್‌ಗೆ ಭಯಾನಕ ಟ್ವಿಸ್ಟ್ ಸಿಕ್ಕಿದೆ. 50 ಪೀಸ್‌ ಮಾಡಿ ಫ್ರಿಡ್ಜ್‌ನಲ್ಲಿಟ್ಟಿದ್ದ ಹಂತಕ ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ತನಿಖೆ ನಡೆಸುತ್ತಿರುವ ಪೊಲೀಸರು ಪ್ರತಿಯೊಂದು ಆಯಾಮದಲ್ಲೂ ಇಂಚಿಂಚೂ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಮಹಾಲಕ್ಷ್ಮಿ ಕುಟುಂಬಸ್ಥರು ಆರೋಪಿಸಿದ್ದ ಅಶ್ರಫ್ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗಿದೆ.

ಇದನ್ನೂ ಓದಿ: ವೈಯಾಲಿಕಾವಲ್‌ ಮಹಾಲಕ್ಷ್ಮಿ ಕೇಸ್‌.. ಆರೋಪಿ ಬಂಧನಕ್ಕೆ ಐದು ತಂಡಗಳ ರಚನೆ; ಪೊಲೀಸರ ಪ್ಲಾನ್ ಏನೇನು..?

ಮಹಾಲಕ್ಷ್ಮಿ ದುರಂತ ಸಾವು ಬೆಳಕಿಗೆ ಬಂದ ಮೇಲೆ ಕುಟುಂಬಸ್ಥರು ಆಕೆಯ ಗೆಳೆಯ ಆಶ್ರಫ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಎಲ್ಲರಿಗೂ ಬಲವಾದ ಶಂಕೆ ಈತನ ಮೇಲೆ ಇತ್ತು. ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಕೂಡಲೇ ಕಟಿಂಗ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಅಶ್ರಫ್‌ ಅನ್ನು ವಶಕ್ಕೆ ಪಡೆದಿದ್ದಾರೆ.

ಸತ್ಯ ಒಪ್ಪಿಕೊಂಡ ಅಶ್ರಫ್‌!
ಮಹಾಲಕ್ಷ್ಮಿ ಕೇಸ್‌ನಲ್ಲಿ ಅನುಮಾನಕ್ಕೆ ಗುರಿಯಾಗಿದ್ದ ಅಶ್ರಫ್, ಪೊಲೀಸರ ವಿಚಾರಣೆ ವೇಳೆ ಸತ್ಯ ಒಪ್ಪಿಕೊಂಡಿದ್ದಾನೆ. ಮಹಾಲಕ್ಷ್ಮಿ ಜೊತೆ ನನಗೆ ಸಂಬಂಧ ಇದ್ದಿದ್ದು ನಿಜ ಎಂದು ಆಕೆಯ ಸಂಪರ್ಕದ ಪಿನ್ ಟು ಪಿನ್ ಮಾಹಿತಿ ಬಿಚ್ಚಿಟ್ಟಿದ್ದಾನೆ.

6 ತಿಂಗಳ ಹಿಂದೆ ಮಹಾಲಕ್ಷ್ಮಿ ಜೊತೆ ಸಂಪರ್ಕ ಇದ್ದಿದ್ದು ನಿಜ. ಆದ್ರೆ ನಾನು ಕೊಲೆ ಮಾಡಿಲ್ಲ ಎಂದು ಅಶ್ರಫ್ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ನಾನು ಆರು ತಿಂಗಳಿಂದ ಆಕೆಯಿಂದ ದೂರ ಇದ್ದೀನಿ. ನಮ್ಮ ಸಂಬಂಧದ ವಿಚಾರ ಕುಟುಂಬಸ್ಥರಿಗೆ ಗೊತ್ತಾಗಿ ಜಗಳ ಆಯ್ತು. ಆಮೇಲೆ ನಾನು ಆಕೆಯ ತಂಟೆಗೆ ಹೋಗಿಲ್ಲ. ಈ ಕೊಲೆಗೂ ನನಗೂ ಸಂಬಂಧ ಇಲ್ಲ ಅಶ್ರಫ್ ಹೇಳಿದ್ದಾನೆ.

ಇದನ್ನೂ ಓದಿ: ರಕ್ತ ಸೋರಿ ಹುಳ ಆಗಿ ವಾಸನೆ ಬರ್ತಿತ್ತು.. ಫ್ರಿಡ್ಜ್​ನಲ್ಲಿ 32 ತುಂಡಾಗಿದ್ದಳು ಮಹಾಲಕ್ಷ್ಮೀ 

ಈ ಹೇಳಿಕೆಯನ್ನು ದಾಖಲಿಸಿಕೊಂಡಿರುವ ವೈಯಾಲಿಕಾವಲ್‌ ಪೊಲೀಸರು ಅಶ್ರಫ್ ಹಾಗೂ ಮಹಾಲಕ್ಷ್ಮಿಯ ಕಾಂಟ್ಯಾಕ್ಟ್ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಕಳೆದ ಆರು ತಿಂಗಳಿಂದ ಸಂಪರ್ಕ ಇಲ್ಲದಿರೋದು ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿಯಲ್ಲಿ ಅಶ್ರಫ್‌ಗೂ ಮಹಾಲಕ್ಷ್ಮಿಯ ಸಾವಿಗೂ ಸಂಬಂಧ ಇಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಸದ್ಯ ಅಶ್ರಫ್ ಅನ್ನು ಪೊಲೀಸರು ಬಿಟ್ಟು ಕಳಿಸಿದ್ದಾರೆ.

ಮಹಾಲಕ್ಷ್ಮಿ ಪೀಸ್‌, ಪೀಸ್ ಮಾಡಿದ್ದು ಯಾರು?
ವೈಯಾಲಿಕಾವಲ್ ಮಹಿಳೆಯ ಸಾವಿನ ಪ್ರಕರಣವನ್ನು ಇಡೀ ಶೇಷಾದ್ರಿಪುರಂ ಸಬ್ ಡಿವಿಷನ್ ಪೊಲೀಸರ ತಂಡ ತನಿಖೆ ನಡೆಸುತ್ತಿದೆ. ವೈಯಾಲಿಕಾವಲ್, ಸದಾಶಿವನಗರ, ಹೈಗ್ರೌಂಡ್ಸ್, ಶೇಷಾದ್ರಿಪುರಂ ಇನ್ಸಪೆಕ್ಟರ್‌ಗಳ ನೇತೃತ್ವದಲ್ಲಿ ಒಂದು ತಂಡ ರಚನೆ ಮಾಡಲಾಗಿದೆ. ಎಸಿಪಿ ಪ್ರಕಾಶ್ ರೆಡ್ಡಿ ಅವರು ಇಡೀ ಟೀಂ ಮಾನಿಟರ್ ಮಾಡುತ್ತಿದ್ದಾರೆ. ಒಬ್ಬ ಎಸಿಪಿ, ನಾಲ್ವರು ಇನ್ಸ್‌ಪೆಕ್ಟರ್ ಕಡೆಯಿಂದ ಡಿಸಿಪಿ ಶೇಖರ್ ಅವರು ತನಿಖೆಯ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕಮಿಷನರ್ ದಯಾನಂದ್ ಹೇಳಿದ್ದೇನು?
ವೈಯಾಲಿಕಾವಲ್‌ ಮಹಾಲಕ್ಷ್ಮಿ ಕೇಸ್‌ ಬಗ್ಗೆ ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ್​ ಹೇಳಿಕೆ ನೀಡಿದ್ದಾರೆ. ಮಹಾಲಕ್ಷ್ಮಿ ಹ*ತ್ಯೆ ಮಾಡಿದ್ದು ಯಾರು ಎಂಬುದು ಗೊತ್ತಾಗಿದೆ. ಆತ ಹೊರರಾಜ್ಯದವನಾಗಿದ್ದು ಸದ್ಯ ಬೆಂಗಳೂರಲ್ಲಿ ವಾಸವಿದ್ದ. ಆತನ ಪತ್ತೆ ಹಚ್ಚಿ ಬಂಧನ ಮಾಡುವ ಕಾರ್ಯಾಚರಣೆ ನಡೆದಿದೆ. ಸದ್ಯದಲ್ಲೇ ಆತನನ್ನ ಬಂಧಿಸೋದಾಗಿ ಬಿ.ದಯಾನಂದ್​ ಹೇಳಿದ್ದಾರೆ.

ಈಗಾಗಲೇ ಅನುಮಾನಾಸ್ಪದ ಆರೋಪಿ ಬೆನ್ನಟ್ಟಿರೋ ಪೊಲೀಸರು ಎರಡು ರಾಜ್ಯಗಳಿಗೆ ಎರಡು ಟೀಮ್‌ ಕಳಿಸಿದೆ. ಪಶ್ಚಿಮ ಬಂಗಾಳ ಹಾಗೂ ಬಿಹಾರಕ್ಕೆ ತೆರಳಿರುವ ಪೊಲೀಸರ ತಂಡ ಮಹಾಲಕ್ಷ್ಮಿ ಹಂತಕನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ವೈಯಾಲಿಕಾವಲ್ ಮಹಾಲಕ್ಷ್ಮಿ ಕೇಸ್‌ಗೆ ಹೊಸ ಟ್ವಿಸ್ಟ್‌.. ಪೀಸ್‌, ಪೀಸ್ ಮಾಡಿದ್ದು ಅಶ್ರಫ್ ಅಲ್ಲ? ಮತ್ಯಾರು?

https://newsfirstlive.com/wp-content/uploads/2024/09/Vyalikaval-Mahalakshmi-Death-Case-5.jpg

Load More