newsfirstkannada.com

ಆಕ್ಸೆಲ್ ಬ್ಲೇಡ್​​ನಲ್ಲಿ ಮಹಿಳೆಯನ್ನು ತುಂಡರಿಸಿದ ನರರಾಕ್ಷಸರು.. ಮೃತದೇಹದ ಮುಂದೆ ಬಿರಿಯಾನಿ ತಿಂದರು!

Share :

13-06-2023

  ತಲೆ, ದೇಹ, ಕೈ-ಕಾಲು ಕತ್ತರಿಸಿ ಚೀಲದಲ್ಲಿ ಹಾಕಿ ಬಿಸಾಡಿದ್ದ ಹಂತಕರು

  ಗೀತಮ್ಮಳನ್ನ ಕೊಂದವರಲ್ಲಿ ಇಬ್ಬರು ಅರೆಸ್ಟ್​, ಉಳಿದವರಿಗಾಗಿ ಶೋಧ

  ಬಿಹಾರದಿಂದ ಕೊಲೆಗಾರರನ್ನು ಕರೆಯಿಸಿಕೊಂಡು ಮನೆಯೊಡತಿಯ ಹತ್ಯೆ..!

ಈ ಹಿಂದೆ ಕುಕ್ಕರ್​, ಫ್ರಿಡ್ಜ್​ ಹತ್ಯೆಗೆ ಫೇಮಸ್ ಆಗಿದ್ದ ರಾಷ್ಟ್ರ ರಾಜಧಾನಿ ಸಾಲಿಗೆ ರಾಜ್ಯ ರಾಜಧಾನಿಯು ಸೇರಿಬಿಟ್ಟಿದೆ. ಬಾಡಿಗೆ ಮನೆಯನ್ನ ಸ್ವಂತ ಮನೆ ಮಾಡಿಕೊಳ್ಳುವ ಆಸೆಗೆ ಬಿದ್ದ ಯುವಕರು ಮನೆಯೊಡತಿಗೆ ಮಹೂರ್ತ ಫಿಕ್ಸ್​ ಮಾಡಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.

ಮುಂಬೈನಲ್ಲಿ ನಡೆದ ಎದೆ ನಡುಗಿಸುವ ಕೊಲೆ. ದೆಹಲಿಯಲ್ಲಿ ನಡೆದ ದೇಹ ತುಂಡರಿಸಿದ ಕೇಸ್​​ ಜನ್ರ ಮನಸ್ಸಿನಿಂದ ಮಾಸುವ ಮುನ್ನವೇ ಅಂತಹದ್ದೇ ಮತ್ತೊಂದು ಘೋರ ಕೃತ್ಯ ನಡೆದು ಹೋಗ್ಬಿಟ್ಟಿದೆ. ಅದು ಕೂಡ ಬೆಂಗಳೂರಿನಲ್ಲಿ. ಇಲ್ಲಿ ಪಾಪಿ ಅದೆಷ್ಟರ ಮಟ್ಟಿಗೆ ವಿಕೃತಿ ಮೆರೆದಿದ್ದಾರೆ ಅಂದ್ರೆ ಮಹಿಳೆಯ ಶವವನ್ನ ತುಂಡು ತುಂಡಾಗಿ ಕತ್ತರಿಸಿ ಸಿಕ್ಕ ಸಿಕ್ಕ ಕಡೆ ಎಸೆದುಬಿಟ್ಟಿದ್ದಾರೆ.

ಆಕ್ಸೆಲ್ ಬ್ಲೇಡ್​​ನಲ್ಲಿ ಮೃತದೇಹ ತುಂಡರಿಸಿದ್ದ ನರರಾಕ್ಷಸರು

ಇದು ಸಿಲಿಕಾನ್​ ಸಿಟಿಯಲ್ಲಿ ನಡೆದ ಎದೆ ನಡುಗಿಸುವ ಪ್ರಕರಣ. ಕಳೆದ 7 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದವರೇ ತನ್ನ ಮನೆ ಮಾಲಕಿಯನ್ನು ಬರ್ಬರವಾಗಿ ಕೊಂದು, ದೇಹವನ್ನ ತುಂಡು ತುಂಡಾಗಿ ಕತ್ತರಿಸಿ ಹಾಕಿದ್ದಾರೆ. ಅಷ್ಟಕ್ಕೂ ಈ ಬೆಚ್ಚಿಬೀಳುವ ಭೀಭತ್ಸ ನರ ಹಂತಕರು ಯಾರು?.

‘ಬಾಡಿಗೆ’ ಹಂತಕರು!

 • 7 ವರ್ಷಗಳಿಂದ ಗೀತಮ್ಮಳ ಮನೆಯಲ್ಲಿ ಬಾಡಿಗೆಗೆ ವಾಸವಿದ್ರು
 • ಬಿಹಾರ್​ದ ಪಂಕಜ್‌, ಇಂದರ್‌ ಕುಮಾರ್‌ ಇತರರು ವಾಸವಿದ್ರು
 • ಎ1 ಆರೋಪಿ ಪಂಕಜ್​ನನ್ನ ಅತಿಯಾಗಿ ನಂಬಿದ್ದ ಮೃತ ಗೀತಮ್ಮ
 • ಪ್ರತಿಯೊಂದು ವಿಚಾರದಲ್ಲಿ ಪಂಕಜ್​ನನ್ನೆ ಆಶ್ರಯಿಸಿದ್ದ ಗೀತಮ್ಮ
 • ATMನಿಂದ ಹಣ ತೆಗೆಯೋದಕ್ಕೂ ಕಾರ್ಡ್ ಪಂಕಜ್​ಗೆ ಕೊಡುತ್ತಿದ್ರು
 • ಗೀತಮ್ಮ ಹೆಸರಿನಲ್ಲಿದ್ದ 4 ಬಾಡಿಗೆ ಮನೆ ಮೇಲೆ ಕಣ್ಣಿಟ್ಟಿದ್ದ ಪಂಕಜ್
 • 4 ಬಾಡಿಗೆ ಮನೆಯನ್ನ ತನ್ನ ಹೆಸರಿಗೆ ಮಾಡಿಕೊಡುವಂತೆ ಕೇಳಿದ್ದ
 • ಅದಕ್ಕಾಗಿ ಕಾಗದ ಪತ್ರವನ್ನು ಕೂಡ ರೆಡಿ ಮಾಡಿಸಿಕೊಂಡು ಬಂದಿದ್ದ
 • ಗೀತಮ್ಮ ಅವರ ಇಬ್ಬರು ಹೆಣ್ಣು ಮಕ್ಕಳಿಗೂ ಮದುವೆಯಾಗಿದೆ
 • ಗೀತಮ್ಮಳ ನಂತರ ಬಾಡಿಗೆ ಮನೆ ಹಣ ನನಗೆ ಆಗುತ್ತೆ ಅಂತ ಹತ್ಯೆ

ಬನ್ನೇರುಘಟ್ಟದ ಹತ್ಯೆ ಪ್ರಕರಣ ಅಷ್ಟಕ್ಕೂ ಬಯಲಿಗೆ ಬಂದಿದ್ದು ಹೇಗೆ ಅಂದ್ರಾ? ದಾರಿ ಹೋಕರಿಗೆ ಸಿಕ್ಕ ಆ ಒಂದು ದೇಹದ ತುಂಡು. ಜೂನ್​ ಒಂದರಂದು ಆರೋಪಿಗಳು ಕೊಲೆಯಷ್ಟೇ ಮಾಡಿಲ್ಲ. ಈ ಕೃತ್ಯ ಬೆಳಕಿಗೆ ಬರಬಾರದು ಅಂತ ಕೊಲೆಯ ನಂತರ ಗೀತಮ್ಮಳ ದೇಹವನ್ನ ಎಕ್ಸೆಲ್ ಬ್ಲೇಡ್​​ನಲ್ಲಿ ತುಂಡು ತುಂಡಾಗಿ ಕತ್ತರಿಸಿ ಬೇರೆ ಬೇರೆ ಭಾಗದಲ್ಲಿ ಎಸೆದಿದ್ದಾರೆ. ಹೀಗೆ ಎಸೆದ ಒಂದು ಭಾಗದ ಸುತ್ತ ಸುತ್ತಿದಾಗ ಒಂಟಿ ಮಹಿಳೆಯನ್ನ ಕೊಂದ ಪಾತಕಿಗಳಲ್ಲಿ ಒಬ್ಬನಾದ ಆರೊಪಿ ಇಂದಲ್ ಕುಮಾರ್ ಸೆರೆ ಸಿಕ್ಕಿದ್ದಾನೆ.

ಗೀತಮ್ಮಳನ್ನ ಕೊಂದವರು ಮನುಷ್ಯರೋ? ರಾಕ್ಷಸರೋ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಅದಕ್ಕೆ ಕಾರಣ ಸೆರೆಸಿಕ್ಕ ಕೊಲೆಗಾರ ಇಂದಲ್ ಕುಮಾರ್ ಪೊಲೀಸರ ಮುಂದೆ ಬಾಯಿಬಿಟ್ಟ ಹತ್ಯೆಯ ಭಯಾನಕತೆ.

ಪೊಲೀಸರ ಮುಂದೆ ಆರೋಪಿ ಬಾಯ್ಬಿಟ್ಟ ಭಯಾನಕತೆ

ಪೊಲೀಸರ ಮುಂದೆ ಆರೋಪಿ ಇಂದಲ್ ಕುಮಾರ್ ಬಾಯ್ಬಿಟ್ಟ ಭಯಾನಕತೆ ಇದು. ಎಕ್ಸೆಲ್ ಬ್ಲೇಡ್​​ನಲ್ಲಿ ಮೃತದೇಹ ತುಂಡರಿಸಿದ್ದ ನರರಾಕ್ಷಸರು. ಗೀತಮ್ಮ ಹೆಣ ಕತ್ತರಿಸುತ್ತಾ ಊಟವನ್ನೂ ಮಾಡಿದ್ದಾರಂತೆ. ಹೆಣದ ಮುಂದೆಯೇ ರಾತ್ರಿ ನಾನ್ ವೆಜ್ ಊಟ ಮಾಡಿದ್ರಂತೆ. ಬಳಿಕ ತಲೆ, ದೇಹ, ಕೈ-ಕಾಲು ಕತ್ತರಿಸಿ ಚೀಲದಲ್ಲಿ ಹಾಕಿ ಬಿಸಾಡಿದರಂತೆ. ಮೃತದೇಹ ಸಿಗದೆ ಇದ್ರೆ, ನಮ್ಮ ಮೇಲೆ ಅನುಮಾನ ಬರಲ್ಲ ಅನ್ನೋ ಕಾರಣಕ್ಕೇನೆ ಹೀಗೆ ದೇಹವನ್ನ ಕತ್ತರಿಸಿದ್ದರಂತೆ. ಎಡಗೈ, 2 ಕಾಲು ಎಲ್ಲಿ ಎಸೆದಿದ್ದಾರೆ ಅನ್ನೋದು ಸದ್ಯ ಪತ್ತೆಯಾಗಿಲ್ಲ. ಉಳಿದಂತೆ ಎಲ್ಲ ದೇಹದ ಭಾಗಗಳು ಪತ್ತೆಯಾಗಿದೆ. ಇನ್ನೊಂದು ಸ್ಫೋಟಕ ಸಂಗತಿ ಅಂದ್ರೆ ಗೀತಮ್ಮ ಹತ್ಯೆಗೆ ತಮ್ಮ ರಾಜ್ಯದ ನಾಲ್ವರ ಸಹಾಯವನ್ನೂ ಪಡೆದಿದ್ದ. ಎ1 ಆರೋಪಿ ಪಂಕಜ್, ಇನ್ನೂಳಿದವರಿಗಾಗಿ ತೀವ್ರ ಶೋಧ ನಡೆಯುತ್ತಿದೆ. ಇನ್ನು ಆರೋಪಿಗಳಿಗಾಗಿ 2 ತಂಡ ರಚನೆ ಮಾಡಿರುವ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಶೋಧಕಾರ್ಯ ಮುಂದುವರಿಸಿದ್ದಾರೆ.

ಈ ಕೊಲೆ ಮುಂಬೈನಲ್ಲಿ ನಡೆದ ಕೊಲೆಯಂತೆಯೇ ಜನನಿಬೀಡ ಪ್ರದೇಶದಲ್ಲಿ ನಡೆದಿದೆ. ಹೀಗಾಗಿ ಮೃತದೇಹವನ್ನ ಸಾಗಿಸಲು ಸಾಧ್ಯವಾಗಲ್ಲ ಅನ್ನೋ ಕಾರಣಕ್ಕೆ ದೇಹವನ್ನ ತುಂಡರಿಸಿದ್ದಾರೆ. ಸದ್ಯ ಬಿಹಾರ ಮೂಲದ ಆರೋಪಿಗಳಲ್ಲಿ ಒಬ್ಬನಷ್ಟೇ ಪತ್ತೆಯಾಗಿದ್ದು, ಉಳಿದವರು ಇನ್ನಷ್ಟೇ ಸಿಗಬೇಕಿದೆ. ಅದೇನೇ ಇರಲಿ ದೂರದ ಊರಿನಿಂದ ಬಂದವ್ರಿಗೆ ತನ್ನ ಮನೆಯಲ್ಲೇ ಇರುವುದಕ್ಕೆ ಆಶ್ರಯಕೊಟ್ಟಿದ್ದಕ್ಕೆ ಮಹಿಳೆಗೆ ಸಿಕ್ಕಿದ್ದು ಮಾತ್ರ ಘೋರವಾದ ಹತ್ಯೆಯ ಬಹುಮಾನ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಕ್ಸೆಲ್ ಬ್ಲೇಡ್​​ನಲ್ಲಿ ಮಹಿಳೆಯನ್ನು ತುಂಡರಿಸಿದ ನರರಾಕ್ಷಸರು.. ಮೃತದೇಹದ ಮುಂದೆ ಬಿರಿಯಾನಿ ತಿಂದರು!

https://newsfirstlive.com/wp-content/uploads/2023/06/GEETHA_DEATH.jpg

Load More