ಬೆಂಗಳೂರಿಗರಿಗೆ ಆನ್‌ಲೈನ್ ಶಾಪಿಂಗ್ ಅಂದ್ರೆ ಅಷ್ಟೂ ಇಷ್ಟನಾ?
ಬೆಂಗಳೂರಿಗರು ಶಾಪಿಂಗ್ಗೆ ಮೀಸಲಿಡೋ ಸಮಯ ಎಷ್ಟು ಗೊತ್ತಾ?
ಸೈಬರ್ ಮೀಡಿಯಾ ರಿಸರ್ಚ್ ಸಂಸ್ಥೆ ಹೇಳಿದೆ ಕುತೂಹಲಕಾರಿ ಸಂಗತಿ
ಆನ್‌ಲೈನ್ ಶಾಪಿಂಗ್ ಅಂದ್ರೆ ಸಾಕು ಬಹುತೇಕರು ಇದರಲ್ಲೇ ಸಮಯ ಕಳೆಯುತ್ತಾರೆ. ತಮಗೆ ಬೇಕಾದನ್ನು ಖರೀದಿಸುತ್ತಾರೆ. ಮಾಲ್, ಶಾಪಿಂಗ್ ಎಂದು ಸಮಯ ಕಳೆಯಲು ಹಿಂದೇಟು ಹಾಕುವ ಬಹುತೇಕರು ಆನ್‌ಲೈನ್ ಶಾಪಿಂಗ್ ಮೊರೆ ಹೋಗುತ್ತಾರೆ. ಆದರೀಗ ಇದೇ ವಿಚಾರವಾಗಿ ಹೊಸದೊಂದು ಸಂಗತಿ ಹೊರಬಿದ್ದಿದೆ. ಅದೇನೆಂದರೆ ಆನ್‌ಲೈನ್ ಶಾಪಿಂಗ್ ವಿಚಾರದಲ್ಲಿ ಬೆಂಗಳೂರಿಗರೇ ಮೊದಲಿಗರಾಗಿದ್ದಾರೆ.
ಹೌದು. ಆನ್‌ಲೈನ್ ಮಾರಾಟ ಮಳಿಗೆಗಳಾದ ಅಮೆಜಾನ್, ಮೀಶೋ ಮತ್ತು ಇತರ ಶಾಪಿಂಗ್ ಸೈಟ್ಗಳಲ್ಲಿ ಬೆಂಗಳೂರಿನ ಜನರು ಅತಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಅಮೆಜಾನ್‌ನಲ್ಲಿ ವಾರಕ್ಕೆ ಸರಾಸರಿ 4 ಗಂಟೆಗಳ ಕಾಲ ಬೆಂಗಳೂರಿಗರು ಸಮಯ ಕಳೆಯುತ್ತಿದ್ದಾರೆ.
ಸೈಬರ್ ಮೀಡಿಯಾ ರಿಸರ್ಚ್
ಸೈಬರ್ ಮೀಡಿಯಾ ರಿಸರ್ಚ್ ಈ ಬಗ್ಗೆ ಅಧ್ಯಯನ ನಡೆಸಿದ್ದು ಮಾಹಿತಿ ಹೊರಹಾಕಿದೆ. ಅದರಲ್ಲಿ ಬೆಂಗಳೂರು ಬಳಿಕ ಗುವಾಹಟಿ, ಕೊಯಂಬತ್ತೂರು, ಲಕ್ನೋದ ಜನರು ಆನ್‌ಲೈನ್ ಶಾಪಿಂಗ್ಗಾಗಿ ಹೆಚ್ಚು ಸಮಯ ಮೀಸಲಿಡುತ್ತಾರೆ ಎಂದು ತಿಳಿಸಿದೆ. ಅಂದಹಾಗೆಯೇ ಈ ಜನರು ಆನ್‌ಲೈನ್ ಮೂಲಕ ಬಟ್ಟೆಗಳನ್ನು ಖರೀದಿಸಲು ವಾರಕ್ಕೆ ಸುಮಾರು 2 ಗಂಟೆ 25 ನಿಮಿಷಗಳನ್ನು ಮೀಸಲಿಡುತ್ತಾರೆ ಎಂಬುದನ್ನು ಸೈಬರ್ ಮೀಡಿಯಾ ರಿಸರ್ಚ್ ಹೇಳಿದೆ.
ಆನ್‌ಲೈನ್ ಶಾಪಿಂಗ್ಗೆ 149 ಗಂಟೆಗಳು ಮೀಸಲು
ಅಂದಹಾಗೆಯೇ ಮಹಿಳೆಯರು ಇ-ಕಾಮರ್ಸ್‌ನಲ್ಲಿ ವರ್ಷಕ್ಕೆ ಸರಿಸುಮಾರು 149 ಗಂಟೆಗಳ ಕಾಲ ಸಮಯ ಕಳೆಯುತ್ತಾರೆ ಎಂದು ಅಧ್ಯಯನ ತಿಳಿಸಿದೆ. ಶೇಕಡಾ 29 ರಷ್ಟು ಜನರು ಆನ್‌ಲೈನ್‌ನಲ್ಲಿ Rs15,000 ರಿಂದ 20,000 ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡುತ್ತಾರೆ. ಗುವಾಹಟಿ, ಕೊಯಂಬತ್ತೂರು, ಲಕ್ನೋ ಖರೀದಿದಾರರಿಂದ ಕಳೆದ ಆರು ತಿಂಗಳಲ್ಲಿ ಸರಾಸರಿ ಆನ್‌ಲೈನ್ 20,100 ರೂ ಖರ್ಚು ಮಾಡಿದ್ದಾರೆ ಎಂದು ಸೈಬರ್ ಮೀಡಿಯಾ ರಿಸರ್ಚ್ ತಿಳಿಸಿದೆ.
ಬೆಂಗಳೂರಿಗರು ಮಾಡುವ ಸರಾಸರಿ ಖರ್ಚು ಎಷ್ಟು?
ಇನ್ನು ಬೆಂಗಳೂರು ಜನರು ಸರಾಸರಿ 21,700 ಖರ್ಚು ಮಾಡುತ್ತಾರೆ. ಮುಂಬೈನಲ್ಲಿ ಅತಿ ಹೆಚ್ಚು ಜನರು ಸರಾಸರಿ ಆನ್‌ಲೈನ್ ಶಾಪಿಂಗ್ ಮಾಡುತ್ತಾರೆ. ಸುಮಾರು 24,200 ರೂಪಾಯಿಯಷ್ಟು ಖರ್ಚು ಮಾಡುತ್ತಾರೆ. ನಾಗ್ಪುರ ಮತ್ತು ಕೊಯಂಬತ್ತೂರು ಜನರು ಸರಾಸರಿ 21,600ರಷ್ಟು ಖರ್ಚು ಮಾಡುತ್ತಾರೆ. ಬಟ್ಟೆ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್ ಖರೀದಿಸುವ ಜನರು ಆನ್‌ಲೈನ್ ಶಾಪಿಂಗ್ ಮೊರೆ ಹೋಗುತ್ತಾರೆ ಎಂದು ಸೈಬರ್ ಮೀಡಿಯಾ ರಿಸರ್ಚ್ ಸಂಸ್ಥೆ ಅಧ್ಯಯನ ಮೂಲಕ ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ