ಕೆಂಪೇಗೌಡ ವಿಮಾನ ನಿಲ್ದಾಣದಿಂದ 45 ಕಿ.ಮೀ ದೂರದಲ್ಲಿ ಹೊಸ ಏರ್‌ಪೋರ್ಟ್!
ಬೆಂಗಳೂರು ಹೊರವಲಯದ 6-7 ಸ್ಥಳಗಳ ಪೈಕಿ ನೆಲಮಂಗಲವೇ ಆಯ್ಕೆ ಯಾಕೆ?
ಬೋಸ್ಟನ್, ಐಡೆಕ್ ಕನ್ಸಲ್ಟೆನ್ಸಿ ಕಂಪನಿಗಳಿಂದ ವಿಮಾನ ನಿಲ್ದಾಣದ ಸ್ಥಳ ಆಯ್ಕೆ
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ KIALಗೆ 2ನೇ ಏರ್‌ಪೋರ್ಟ್ ನಿರ್ಮಾಣ ಎಲ್ಲಿ? ಸ್ಥಳ ಆಯ್ಕೆಯ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಅಂತಿಮವಾಗಿ ಬೆಂಗಳೂರಿನ ಕೆಐಎಎಲ್‌ಗೆ 2ನೇ ಏರ್‌ಪೋರ್ಟ್ ಅನ್ನು ನೆಲಮಂಗಲ- ಕುಣಿಗಲ್ ಮಧ್ಯೆ ನಿರ್ಮಾಣಕ್ಕೆ ಸ್ಥಳ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿರಿಮೆಗೆ ಮತ್ತೊಂದು ಗರಿ; ಏನದು?
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಿಂದ 5 ಕಿ.ಮೀ ದೂರದಲ್ಲಿ ಹೊಸ ಏರ್‌ಪೋರ್ಟ್ ನಿರ್ಮಾಣ ಮಾಡಲಾಗುತ್ತಿದೆ. ಹೊಸ ಏರ್‌ಪೋರ್ಟ್ ನಿರ್ಮಾಣಕ್ಕೆ 4-5 ಸಾವಿರ ಎಕರೆ ಭೂಮಿ ಬೇಕು. ಹೀಗಾಗಿ ಚರ್ಚೆಯಲ್ಲಿದ್ದ 6-7 ಸ್ಥಳಗಳ ಪೈಕಿ ನೆಲಮಂಗಲ ಸ್ಥಳ ಅಂತಿಮವಾಗಿದೆ. KIALಗೆ 2ನೇ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧದ 11ನೇ ಸಭೆಯಲ್ಲಿ ಈ ಸ್ಥಳ ಆಯ್ಕೆ ಮಾಡಲಾಗಿದೆ.
ಬೋಸ್ಟನ್, ಐಡೆಕ್ ಕನ್ಸಲ್ಟೆನ್ಸಿ ಕಂಪನಿಗಳಿಂದ ವಿಮಾನ ನಿಲ್ದಾಣದ ಸ್ಥಳ ಆಯ್ಕೆ ಬಗ್ಗೆ ಸರ್ಕಾರಕ್ಕೆ ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಲಾಗಿದೆ. ಬೆಟ್ಟಗುಡ್ಡ, ನದಿ, ಸಮುದ್ರ ಇಲ್ಲದ ಹೆದ್ದಾರಿ ಸಂಪರ್ಕ, ಮೆಟ್ರೋ ಸಂಪರ್ಕ ಇರುವ ನೆಲಮಂಗಲದ ಸ್ಥಳವನ್ನೇ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಗೆಳತಿಗೆ ಟಾಟಾ ಮಾಡಲು ಖತರ್ನಾಕ್ ಐಡಿಯಾ! ಕೆಂಪೇಗೌಡ ಏರ್‌ಪೋರ್ಟ್ ಪ್ರವೇಶಿಸಿದ ಪ್ರಿಯಕರ.. ಮುಂದೇನಾಯ್ತು?
ನೆಲಮಂಗಲ ಏರ್‌ಪೋರ್ಟ್ ಪ್ಲಾನ್ ಏನು?
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ 2ನೇ ಏರ್‌ಪೋರ್ಟ್‌ಗಾಗಿ ಬೆಂಗಳೂರು ಸುತ್ತಲಿನ 6-7 ಸ್ಥಳಗಳು ಚರ್ಚೆಯಲ್ಲಿದ್ದವು. ಇವುಗಳಲ್ಲಿ ನೆಲಮಂಗಲವೇ ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಆಯ್ಕೆ ಮಾಡಲಾಗಿದೆ. ನೆಲಮಂಗಲ-ಮಂಗಳೂರು ಹೆದ್ದಾರಿ ಪಕ್ಕದಲ್ಲಿ ಹೊಸ ಏರ್‌ಪೋರ್ಟ್ ನಿರ್ಮಾಣ ಮಾಡಲು ಯೋಜಿಸಲಾಗಿದೆ.
ನೆಲಮಂಗಲದ ಹೊಸ ಏರ್‌ಪೋರ್ಟ್‌ಗೂ ಸದ್ಯ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಲಿಂಕ್ ಮಾಡಬಹುದು. ನೆಲಮಂಗಲಕ್ಕೆ ಮಾದಾವರದಿಂದ ಮೆಟ್ರೋ ಟ್ರೇನ್ ಲಿಂಕ್ ಮಾಡಬಹುದು. ರಾಷ್ಚ್ರೀಯ ಹೆದ್ದಾರಿ 75ರ ಬೆಂಗಳೂರು-ಮಂಗಳೂರು ಹೆದ್ದಾರಿ ಪಕ್ಕ ಹೊಸ ಏರ್‌ಪೋರ್ಟ್ ನಿರ್ಮಾಣ ಮಾಡಿದ್ರೆ ಹೆಚ್ಚು ಅನುಕೂಲವಿದೆ.
ನೆಲಮಂಗಲದಿಂದ ಏರ್‌ಪೋರ್ಟ್‌ಗೆ 11 ಲಾಭ!
ನೆಲಮಂಗಲದಲ್ಲೇ ಯಾಕೆ?
ನೆಲಮಂಗಲ ಏರ್‌ಪೋರ್ಟ್ ನಿರ್ಮಾಣಕ್ಕೆ ಅಗತ್ಯವಾದ 15 ಮಾನದಂಡಗಳನ್ನು ಪೂರೈಸಿರೋದು ವಿಶೇಷವಾಗಿದೆ. ಬೆಂಗಳೂರು ಹೊರವಲಯದ ಹಾರೋಹಳ್ಳಿ, ಬಿಡದಿ, ಕನಕಪುರ ರಸ್ತೆಯಲ್ಲಿ ಏರ್‌ಪೋರ್ಟ್ ನಿರ್ಮಾಣದಿಂದ ಭವಿಷ್ಯದ ಬೆಳವಣಿಗೆಗೆ ಅನುಕೂಲವಿಲ್ಲ. ಹೀಗಾಗಿ ನೆಲಮಂಗಲವೇ ಏರ್‌ಪೋರ್ಟ್ ಸ್ಥಾಪನೆಗೆ ಸೂಕ್ತ ಎಂಬ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ.
2ನೇ ಏರ್‌ಪೋರ್ಟ್ ನಿರ್ಮಾಣ ಯಾವಾಗ?
ಈಗಾಗಲೇ ಗೋವಾ, ಮುಂಬೈನಲ್ಲಿ ಎರಡೆರೆಡು ಏರ್‌ಪೋರ್ಟ್‌ಗಳಿವೆ. ಹೀಗಾಗಿ ಬೆಂಗಳೂರಿನ ಕೆಐಎಎಲ್ ನಲ್ಲೂ ಪ್ರಯಾಣಿಕರ ದಟ್ಟಣೆ, ಸರಕು ಸಾಗಣೆ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ ಭವಿಷ್ಯದ ಬೇಡಿಕೆ, ಅಗತ್ಯತೆ ಗಮನದಲ್ಲಿಟ್ಟುಕೊಂಡು ಹೊಸ ಏರ್‌ಪೋರ್ಟ್ ನಿರ್ಮಾಣಕ್ಕೆ ಈಗಿನಿಂದಲೇ ಪ್ಲ್ಯಾನ್ ಮಾಡಲಾಗುತ್ತಿದೆ. 2033ಕ್ಕೆ ಕೆಐಎಲ್‌ನಿಂದ 150 ಕಿಮೀ ವ್ಯಾಪ್ತಿಯಲ್ಲಿ ಹೊಸ ಏರ್ ಪೋರ್ಟ್ ನಿರ್ಮಿಸಬಾರದೆಂಬ ಒಪ್ಪಂದ ಅಂತ್ಯವಾಗುತ್ತಿದೆ. ಬಳಿಕ ಕೆಐಎಎಲ್‌ಗೆ 45 ಕಿ.ಮೀ ದೂರದಲ್ಲಿ ನೆಲಮಂಗಲ ಬಳಿ ಹೊಸ ಏರ್ ಪೋರ್ಟ್ ನಿರ್ಮಾಣ ಮಾಡಲಾಗುತ್ತೆ.
ನೆಲಮಂಗಲದಲ್ಲೇ ಏರ್‌ಪೋರ್ಟ್ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸಿಎಂ ಜೊತೆಗೆ ಚರ್ಚಿಸಿ ಕೇಂದ್ರದ ನಾಗರಿಕ ವಿಮಾನಯಾನ ಇಲಾಖೆಗೆ ಪ್ರಸ್ತಾವನೆ ರವಾನೆ ಮಾಡಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ