newsfirstkannada.com

ಶಂಕಿತ ಉಗ್ರರಿಗೆ ಗ್ರೆನೇಡ್‌ಗಳು ಸಿಕ್ಕಿದ್ದು ಹೇಗೆ..? ರೈಲಿನಲ್ಲೇ ಸ್ಫೋಟಕಗಳು ಈ ದೇಶದಿಂದ ಸಾಗಾಟ.!

Share :

23-07-2023

    ದೇಶದಲ್ಲಿ ಈ ಗ್ರೆನೇಡ್ ಬಳಕೆಯಾಗಿದ್ಯಾ ಅಂತ ಪರಿಶೀಲನೆ!

    ಗ್ರೆನೇಡ್ ಎಲ್ಲಿಯದ್ದು? ಹೇಗೆ ತಯಾರಾಗಿದೆ ಎಂಬ ತನಿಖೆ

    ಪಾಕ್‌ನಿಂದ ಕರ್ನಾಟಕಕ್ಕೆ ಬಂದಿತ್ತಾ ಹ್ಯಾಂಡ್‌ ಗ್ರೆನೇಡ್..?

ಶಂಕಿತ ಉಗ್ರರ ಬಂಧನದ ಬಳಿಕ ಸಿಸಿಬಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ರಕ್ತಹೀರುವ ನರಕಕ್ಕಸರ ಸ್ಕೆಚ್‌ಗಳನ್ನ ಬಯಲು ಮಾಡಲು ಮುಂದಾಗಿದ್ದಾರೆ. ಜೊತೆಗೆ ನರಹಂತಕರ ಸ್ಫೋಟಕ ಜಾಲದ ಬೆನ್ನು ಬಿದ್ದಿದೆ. ಕರುನಾಡನ್ನ ಸ್ಮಶಾನ ಮಾಡಲು ತಂದಿಟ್ಟಿದ್ದ ಸ್ಫೋಟಕಗಳ ಬಗ್ಗೆ ತನಿಖೆಗೆ ಮುಂದಾಗಿದೆ. ಜೊತೆಗೆ ಎಸ್ಕೇಪ್‌ ಆಗಿರೋ ಟೆರರಿಸ್ಟ್ ಗುಂಪಿನ ಪ್ರಮುಖ ಆರೋಪಿಗಾಗಿ ಬಲೆ ಬೀಸಿದೆ.

ಸರ್ವಜನಾಂಗದ ಶಾಂತಿಯ ತೋಟದ ಬಿಲಗಳಲ್ಲಿ ಅಡಗಿ ನಾಡನ್ನೇ ಸ್ಮಶಾನ ಮಾಡಲು ಸ್ಕೆಚ್‌ ಹಾಕಿದ್ದ ಉಗ್ರ ಕುಲದ ಬೇರಿಗೆ ಸಿಸಿಬಿ ಕೈ ಹಾಕಿದೆ. ಉದ್ಯಾನನಗರಿಯೊಳಗೆ ನುಸುಳಿದ್ದ ಐವರು ಶಂಕಿತ ಉಗ್ರರನ್ನ ಸಿಸಿಬಿ ಹೆಡೆಮುರಿ ಕಟ್ಟಿದೆ. ಇದೀಗ ನರಮೇಧಕ್ಕೆ ಶಂಕಿತ ಉಗ್ರರು ನಡೆಸಿದ್ದ ಭಯಾನಕ ಸ್ಕೆಚ್‌ಗಳು ಒಂದೊಂದಾಗೇ ಹೊರ ಬೀಳ್ತಿವೆ. ಅವರ ಬಳಿ ಇದ್ದ ಸ್ಫೋಟಕಗಳ ಜಾಲವನ್ನ ಭೇದಿಸಲು ಸಿಸಿಬಿ ಮುಂದಾಗಿದೆ.

ಪಾಕ್‌ನಿಂದ ಕರ್ನಾಟಕಕ್ಕೆ ಬಂದಿತ್ತಾ ಹ್ಯಾಂಡ್‌ ಗ್ರೆನೇಡ್?

ಐವರು ಶಂಕಿತ ಉಗ್ರರನ್ನ ಬಂಧಿಸಿದ್ದ ಸಿಸಿಬಿ ಪೊಲೀಸರು ಅವರನ್ನ ತಮ್ಮ ಕಸ್ಟಡಿಗೆ ಪಡೆದಿದ್ದರು. ಬಳಿಕ ಉಗ್ರ ಹಣೆಪಟ್ಟಿ ಕಟ್ಟಿಕೊಂಡಿರೋ ಶಂಕಿತ ನರಹಂತಕರ ಉಗ್ರ ಸ್ಕೆಚ್‌ ಬಗ್ಗೆ ಬಾಯ್ಬಿಡಿಸಲು ಮುಂದಾಗಿದ್ರು. ಹೀಗೆ ವಿಚಾರಣೆ ವೇಳೆ ಓರ್ವ ಶಂಕಿತ ಉಗ್ರ ಜಾಹಿದ್ ತಬ್ರೇಜ್ ಸ್ಫೋಟಕ್ಕೆ ಬಳಸೋ ಹ್ಯಾಂಡ್‌ ಗ್ರೆನೇಡ್‌ಗಳ ಬಗ್ಗೆ ಮಾಹಿತಿ ಬಾಯ್ಬಿಟ್ಟಿದ್ದ. ಅವನ ಮನೆಯ ಅಲ್ಮೇರಾದಲ್ಲಿ ಜೀವಂತ ಗ್ರೆನೇಡ್ ಇರೋ ಬಗ್ಗೆ ತಿಳಿಸಿದ್ದ. ಬಳಿಕ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ 4 ಜೀವಂತ ಗ್ರೆನೇಡ್‌ಗಳನ್ನ ಸಿಸಿಬಿ ಸೀಜ್ ಮಾಡಿತ್ತು. ಇದೀಗ ಶಂಕಿತ ಉಗ್ರರ ಬಳಿ ಈ ಸ್ಫೋಟಕಗಳು ಬಂದಿದ್ಹೇಗೆ? ಎಂಬ ಜಾಲವನ್ನ ಸಿಸಿಬಿ ಭೇದಿಸಿದೆ.

ಮೊದಲಿಗೆ ಸಿಕ್ಕಿರುವ ಎಲ್ಲ ಗ್ರೆನೇಡ್‌ಗಳನ್ನ ಡಿಫ್ಯೂಸ್ ಮಾಡಲಾಗುತ್ತೆ. ಬಳಿಕ ಗ್ರೆನೇಡ್​ಗಳ ರಾ ಮೆಟಿರಿಯಲ್‌ಗಳ ವಿಂಗಡಣೆ ಮಾಡಿ, ಮೆಟೀರಿಯಲ್ ಎಲ್ಲಿ ತಯಾರಾಗಿದೆ ಎಂದು ಪರಿಶೀಲನೆ ನಡೆಸಲಾಗುತ್ತೆ. ಗ್ರೆನೇಡ್ ಮಾದರಿಯ ಬಗ್ಗೆ ಎನ್​ಬಿಡಿಸಿ ಡಾಟಾ ಅನಾಲಿಸಿಸ್ ಮಾಡಿದ ಬಳಿಕ ದೇಶದಲ್ಲಿ ಈ ಗ್ರೆನೇಡ್ ಬಳಕೆಯಾಗಿದ್ಯಾ ಅಂತ ಪರಿಶೀಲನೆ ಮಾಡಲಾಗುತ್ತೆ. ಪ್ರತಿ ಸ್ಫೋಟಕಗಳ ಡಾಟಾ ಸಂಗ್ರಹಿಸಿರುವ ಎನ್​ಬಿಡಿಸಿ, ಗ್ರೆನೇಡ್ ಎಲ್ಲಿಯದ್ದು? ಹೇಗೆ ತಯಾರಾಗಿದೆ ಎಂಬ ಪರಿಶೀಲನೆ ನಡೆಸಲಿದ್ದು, ಇವುಗಳ ಪರಿಣಾಮದ ವ್ಯಾಪ್ತಿಯ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ. ಇನ್ನೂ ಶಂಕಿತರ ಬಳಿ ಸಿಕ್ಕಿರೋ 4 ಗ್ರೆನೇಡ್‌ ರಾಜ್ಯಕ್ಕೆ ಬಂದಿದ್ದು ಹೇಗೆ ಅಂತಲೂ ಸಿಸಿಬಿ ತನಿಖೆಯಿಂದ ಮಾಹಿತಿ ಹೊರಬಿದ್ದಿದೆ. ಇದಕ್ಕೆಲ್ಲ ಜುನೈದ್ ಸೂತ್ರಧಾರ ಅನ್ನೋ ಸ್ಫೋಟಕ ಅಂಶ ಬಯಲಾಗಿದೆ.

8 ತಿಂಗಳ ಹಿಂದೆ ಪ್ರಕರಣದ 2ನೇ ಆರೋಪಿ ಜುನೈದ್ ಪಾಕಿಸ್ತಾನದಿಂದ ಬಾಂಗ್ಲಾದೇಶಕ್ಕೆ ಹೋಗಿದ್ದ. ಈ ವೇಳೆ ಜುನೈದ್ ತನ್ನ ಕ್ರೈಂ‌ ಪಾರ್ಟ್ನರ್​ ಫೈಜರ್​ನ ಬಾಂಗ್ಲಾದೇಶಕ್ಕೆ ಕರೆಸಿಕೊಂಡಿದ್ದ. ರೈಲಿನಲ್ಲಿ ತ್ರಿಪುರ ತಲುಪಿ ಬಳಿಕ ಅಗರ್ತಲ್ ಸಿಟಿಯ ಮುಖಾಂತರ ಫೈಜರ್‌ ಬಾಂಗ್ಲಾ ಪ್ರವೇಶಿಸಿದ್ದ. ಬಾಂಗ್ಲಾ, ಭಾರತದ ಬಾರ್ಡರ್ ಅಗರ್ತಲ್ ಹಳ್ಳಿಯಲ್ಲಿ ಡಿವೈಡ್ ಆಗುತ್ತೆ. ಅದೇ ಮಾರ್ಗವಾಗಿ ಶಂಕಿತ ಫೈಜರ್ 4 ಗ್ರೆನೇಡ್​ಗಳನ್ನ ತಂದಿದ್ದ. ಅಲ್ಲಿಂದ ಮತ್ತೆ ಟ್ರೈನ್ ಏರಿ ಗ್ರೆನೇಡ್​ಗಳನ್ನ ತಂದು ಮನೆಯಲ್ಲಿಟ್ಟಿದ್ದ ಎಂಬ ಮಾಹಿತಿ ಸಿಸಿಬಿ ತನಿಖೆಯಲ್ಲಿ ಗೊತ್ತಾಗಿದೆ.

ಇದೀಗ ರಾಜ್ಯಕ್ಕೆ ಹ್ಯಾಂಡ್ ಗ್ರೆನೇಡ್ ಕಳುಹಿಸಿದ್ದ A2 ಆರೋಪಿ ಜುನೈದ್ ಅಹಮದ್‌ಗೆ ಸಿಸಿಬಿ ಬಲೆ ಬೀಸಿದೆ. ಬೆಂಗಳೂರಿನಲ್ಲಿ 5 ಪ್ರಕರಣವಿದ್ದರೂ ವಿದೇಶಕ್ಕೆ ಹಾರಿದ್ಹೇಗೆ? ಬೇರೆಯವರ ಹೆಸರಲ್ಲಿ ಪಾಸ್ ಪೋರ್ಟ್ ಮಾಡಿಸಿಕೊಂಡು ವಿದೇಶಕ್ಕೆ ತೆರಳಿದ್ನಾ ಎಂಬ ಶಂಕೆ ವ್ಯಕ್ತವಾಗಿದೆ. ಇದರ ಜೊತೆ ಸಿಸಿಬಿ ಅಧಿಕಾರಿಗಳು ಶಂಕಿತ ಉಗ್ರರ ಫೋನ್ ಕರೆಗಳ ಬೆನ್ನು ಬಿದ್ದಿದೆ. ನರಹಂತಕರ ಜಾಲದ ಜಾಡನ್ನ ಹಿಡಿದು ಸಿಸಿಬಿ ಹೊರಟಿದೆ. ಇದೀಗ ಶಂಕಿತರ ವಿಚಾರಣೆಯಲ್ಲಿ ಮತ್ತೇನೆಲ್ಲ ಸ್ಫೋಟಕ ಮಾಹಿತಿ ಹೊರಬೀಳುತ್ತೋ ಸಿಸಿಬಿ ತನಿಖೆ ಬಳಿಕ ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಂಕಿತ ಉಗ್ರರಿಗೆ ಗ್ರೆನೇಡ್‌ಗಳು ಸಿಕ್ಕಿದ್ದು ಹೇಗೆ..? ರೈಲಿನಲ್ಲೇ ಸ್ಫೋಟಕಗಳು ಈ ದೇಶದಿಂದ ಸಾಗಾಟ.!

https://newsfirstlive.com/wp-content/uploads/2023/07/Nazir-3.jpg

Load More