newsfirstkannada.com

ಮತ್ತೆ ಬೆಲೆ ಏರಿಸಿಕೊಂಡ ಕೆಂಪು ರಾಣಿ! ಇನ್ಮುಂದೆ ಟೊಮ್ಯಾಟೋ ಬಾತ್​ ಮಾಡೋದು ಕನಸಿನ ಮಾತು

Share :

Published July 31, 2023 at 9:07am

Update July 31, 2023 at 9:14am

    ಟೊಮ್ಯಾಟೋ ಪ್ರಿಯರಿಗೆ ವಕ್ರದೆಸೆ ಶುರು

    ಕೆಂಪು ರಾಣಿಯ ರೇಟ್​ ಕಂಡು ಕಂಗಾಲಾದ ಗೃಹಿಣಿಯರು

    ಹೊರ ರಾಜ್ಯದಿಂದ ಬೆಂಗಳೂರಿಗೆ ಬರುತ್ತಿರೋ ಟೊಮ್ಯಾಟೋ

ಒಂದೆಡೆ ಟೊಮ್ಯಾಟೋ ಮಾರಾಟಗಾರರಿಗೆ ಶುಕ್ರದೆಸೆಯಾದರೆ, ಟೊಮ್ಯಾಟೋ ಪ್ರಿಯರಿಗೆ ವಕ್ರದೆಸೆ. ಇದಕ್ಕೆ ಕಾರಣ ಬೇರೇನಿಲ್ಲ ದರ ಏರಿಕೆಯ ಶಾಕ್.

ಹೌದು. ಟೊಮ್ಯಾಟೋ ಬೆಲೆ ಏರಿಕೆಯಿಂದ ಗ್ರಾಹಕರು ಕೈ ಸುಟ್ಟುಕೊಂಡಿದ್ದಾರೆ. ಖರೀದಿಸಲು ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿದೆ. ಕೆ.ಜಿಗೆ 150 ರೂಪಾಯಿವರೆಗೆ ಬೆಲೆ ಏರಿಸಿಕೊಂಡ ಕೆಂಪು ರಾಣಿಯನ್ನು ಕಂಡು ಗೃಹಿಣಿಯರೇ ಕಂಗೆಟ್ಟಿದ್ದಾರೆ.

ಕಳೆದ ಒಂದು ವಾರದಿಂದ ಟೊಮ್ಯಾಟೋ ಬೆಲೆ 80/ 90 ಇತ್ತು. 100ರ  ಗಡಿಯಲ್ಲೇ ಸುತ್ತುತ್ತಿತ್ತು. ಆದರೀಗ ದಿಢೀರ್ ಏರಿಕೆಯಿಂದ ಗ್ರಾಹಕರು ಟೊಮ್ಯಾಟೋ ಬೆಲೆ ಕಂಡು ಕಂಗಾಲಾಗಿದ್ದಾರೆ.

ಹೊರ ರಾಜ್ಯಗಳಿಂದ ಆಮದು

ಇನ್ನು ದಿಢೀರ್​ ಆಗಿ ಇಷ್ಟೊಂದು ಬೆಲೆ ಏರಿಕೆಗೆ ಕಾರಣವೇ ಪೂರೈಕೆ ಕಡಿಮೆ ಆಗಿರುವ ಹಿನ್ನಲೆ. ಈ ಕಾರಣಕ್ಕೆ ಮತ್ತೆ ಟೊಮ್ಯಾಟೋ ದರ ಏರಿಕೆಯಾಗಿದೆ. ಹಾಗಾಗಿ ಬೆಂಗಳೂರಿಗೆ ಹೊರ ರಾಜ್ಯಗಳಿಂದ ಟೊಮ್ಯಾಟೋ ಬರುತ್ತಿದೆ.

ನಾಸಿಕ್​ನಿಂದ ಬಂದು ಟೊಮ್ಯಾಟೋ

ಮಾಹಿತಿಯಂತೆಯೇ ನಾಸಿಕ್ ನಿಂದ ಬೆಂಗಳೂರಿಗೆ ಟೊಮ್ಯಾಟೋ ಬಂದಿದೆ.  ರಾಜ್ಯದಲ್ಲಿ ಇಳುವರಿ ಕಮ್ಮಿಯಾದ ಕಾರಣ ಪೂರೈಕೆ ಆಗದೆ ಇದ್ದರಿಂದ ಹೊರ ರಾಜ್ಯಗಳಿಂದ ಟೊಮ್ಯಾಟೋ ಬಂದಿದೆ. ಪ್ರತಿ ಎಕರೆಗೆ ಕೇವಲ 30 ರಿಂದ‌ 35 ಟನ್ ಮಾತ್ರ ಇಳುವರಿ ಬರ್ತಿದೆ. ನಿನ್ನೆ ಬರೊಬ್ಬರಿ 150 ರೂಪಾಯಿ ಟೊಮ್ಯಾಟೋ ದರ ಏರಿದ್ದರಿಂದ ರೈತರು ಸಂತೋಷಗೊಂಡಿದ್ದಾರೆ. ಆದರೆ ಈ ಏಕಾಏಕಿ ದರ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ಬೆಲೆ ಏರಿಸಿಕೊಂಡ ಕೆಂಪು ರಾಣಿ! ಇನ್ಮುಂದೆ ಟೊಮ್ಯಾಟೋ ಬಾತ್​ ಮಾಡೋದು ಕನಸಿನ ಮಾತು

https://newsfirstlive.com/wp-content/uploads/2023/07/Tomato-3.jpg

Load More