73 ವರ್ಷ ವಯಸ್ಸಿನ ಮಾಜಿ ಶಾಸಕ ಸಿ.ವೆಂಕಟೇಶಪ್ಪ
ಬಂಗಾರಪೇಟೆ ತಾಲ್ಲೂಕು ಬುವನಹಳ್ಳಿ ಗ್ರಾಮದವರು
1978, 1983, 1999 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆ
ಕೋಲಾರ: ಬಂಗಾರಪೇಟೆ ಮಾಜಿ ಶಾಸಕ ಸಿ.ವೆಂಕಟೇಶಪ್ಪ ಸಾವನ್ನಪ್ಪಿದ್ದಾರೆ. 73 ವರ್ಷ ವಯಸ್ಸಿನ ಅವರಿಗೆ ಕಳೆದ ರಾತ್ರಿ ಹೃದಯಾಘಾತ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರು, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಸಿ.ವೆಂಕಟೇಶಪ್ಪ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಬುವನಹಳ್ಳಿ ಗ್ರಾಮದವರಾಗಿದ್ದು, ಮೂರು ಬಾರಿ ಶಾಸಕರಾಗಿದ್ದರು. ಎದೆನೋವು ಕಾಣಿಸಿಕೊಂಡ ಹಿನ್ನಲೆ ಅವರನ್ನು ಕೋಲಾರ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಮಾಜಿ ಶಾಸಕ ಕೊನೆಯುಸಿರೆಳೆದಿದ್ದಾರೆ. ಮೃತ ಶಾಸಕರ ಪಾರ್ಥಿವ ಶರೀರ ಶಾಸಕರ ಸ್ವಗ್ರಾಮ ತರಲಾಗಿದೆ.
ಹಿಂದಿನ ಬೇತಮಂಗಲ ವಿಧಾನಸಭಾ ಕ್ಷೇತ್ರದಿಂದ ವೆಂಕಟೇಶಪ್ಪ ಶಾಸಕರಾಗಿದ್ದರು. 1978, 1983, 1999 ರಲ್ಲಿ ಶಾಸಕರಾಗಿ ಕಾಂಗ್ರೆಸ್ ಪಕ್ಷದಿಂದಲೇ ಆಯ್ಕೆಯಾಗಿದ್ದರು. ನವೆಂಬರ್ -9 ರಂದು ಅವರ ಹುಟ್ಟು ಹಬ್ಬ ಆಚರಣೆ ಮಾಡಲಾಗಿತ್ತು. ಕೊನೆಯುಸಿರೆಳೆದ ಮಾಜಿ ಶಾಸಕ ಅಪಾರ ಅಭಿಮಾನಿಗಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ