newsfirstkannada.com

ಕಂಡಕ್ಟರ್ ಜತೆ ಡ್ರೈವರ್​ ಮಾತು ತಂದ ಆಪತ್ತು; ಕೆರೆಗೆ ಉರುಳಿಬಿದ್ದ ಬಸ್‌; ಮಕ್ಕಳು ಸೇರಿ 17 ಮಂದಿ ದಾರುಣ ಸಾವು

Share :

23-07-2023

    ಪಿರೋಜ್‌ಪುರದ ಭಂಡಾರಿಯಾದಿಂದ ಬಾರಿಶಾಲ್​ಗೆ ತೆರಳುತ್ತಿತ್ತು

    ಡ್ರೈವರ್, ಕಂಡಕ್ಟರ್​ ಮಾತಿನಲ್ಲಿರುವಾಗ ಬಸ್​ ಉರುಳಿ ಬಿತ್ತು ಕೆರೆಗೆ

    ದಾರಿಯಲ್ಲೇ 17 ಜನರ ಪ್ರಾಣ ಹಾರಿ ಹೋಯಿತು, 35 ಜನ ಗಂಭೀರ

ಢಾಕಾ: ಚಾಲಕನ ನಿರ್ಲಕ್ಷ್ಯದಿಂದ ಬಸ್​ ಕೆರೆಗೆ ಬಿದ್ದು ಮೂವರು ಮಕ್ಕಳು ಸೇರಿದಂತೆ ಒಟ್ಟು 17 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಾಂಗ್ಲಾದೇಶದ ಛತ್ರಕಾಂಡ ಪ್ರದೇಶದ ಜಲಕತಿ ಸದರ್ ಬಳಿ ನಡೆದಿದೆ. ಬಸ್‌ ದುರಂತದಲ್ಲಿ 35ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಸ್​ ಪಿರೋಜ್‌ಪುರದ ಭಂಡಾರಿಯಾದಿಂದ ಬಾರಿಶಾಲ್ ನಗರಕ್ಕೆ ತೆರಳಬೇಕಿತ್ತು. ಆದರೆ ಹೋಗುವ ದಾರಿಯ ಮಧ್ಯದಲ್ಲಿ ಅಂದರೆ ಬಾರಿಶಾಲ್-ಖುಲ್ನಾ ಹೈವೇಯಲ್ಲಿನ ಛತ್ರಕಾಂಡದ ಬಳಿ ರಸ್ತೆ ಪಕ್ಕದಲ್ಲಿರುವ ಕೆರೆಗೆ ಬಿದ್ದಿದೆ. ಪರಿಣಾಮ ಮೂವರು ಮಕ್ಕಳು ಸೇರಿ 17 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ 35ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಲಾಗಿದೆ.

ಬಸ್​ನಲ್ಲಿ 60ಕ್ಕೂ ಹೆಚ್ಚು ಪ್ರಯಾಣಿರನ್ನು ಹತ್ತಿಸಿಕೊಂಡಿದ್ದ ಸಿಬ್ಬಂದಿ 

ಬಸ್​ನಲ್ಲಿ 52 ಜನರು ಮಾತ್ರ ಪ್ರಯಾಣಿಸುವುದಕ್ಕೆ ಅವಕಾಶವಿದೆ. ಆದರೆ ಬಸ್​ ಸಿಬ್ಬಂದಿ 60ಕ್ಕೂ ಹೆಚ್ಚು ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದರು. ಹೀಗಾಗಿ ಬಸ್ ಓವರ್​ಲೋಡ್ ಆಗಿ ಫುಲ್​ ರಶ್ ಆಗಿತ್ತು. ಘಟನೆಯಲ್ಲಿ ಬದುಕುಳಿದಿರುವ ಪ್ರಯಾಣಿಕರು ಬಸ್​ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಂಡಕ್ಟರ್​ ಜೊತೆ ಡ್ರೈವರ್​ ಮಾತಾಡುತ್ತ ಬಸ್​ ಓಡಿಸುತ್ತಿದ್ದ. ಈ ವೇಳೆ ವೇಗದಲ್ಲಿದ್ದ ಬಸ್ ನೇರ ಕೆರೆಗೆ ಬಿದ್ದು ಈ ದುರ್ಘಟನೆಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

ಕ್ರೇನ್​ ಮೂಲಕ ಬಸ್​ ಎನ್ನು ಮೇಲೆತ್ತುವ ಕೆಲಸ

ಇನ್ನು ಘಟನೆ ಬಗ್ಗೆ ಮಾತನಾಡಿರುವ ಬಾರಿಶಾಲ್ ವಿಭಾಗೀಯ ಆಯುಕ್ತ ಎಂಡಿ ಶೌಕತ್ ಅಲಿ, ಅಪಘಾತದಲ್ಲಿ 17 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವುದನ್ನು ಖಚಿತ ಪಡಿಸಿದ್ದಾರೆ. ಮೃತಪಟ್ಟವರ ಪೈಕಿ ಹೆಚ್ಚಿನವರು ಪಿರೋಜ್‌ಪುರದ ಭಂಡಾರಿಯಾ ಮತ್ತು ಜಲ್ಕತಿಯ ರಾಜಾಪುರ ಪ್ರದೇಶದ ನಿವಾಸಿಗಳು. ಸ್ಥಳದಲ್ಲಿ ಸಾಕಷ್ಟು ಸ್ಥಳೀಯ ಜನರು ಸೇರಿ ರಕ್ಷಣಾ ಕಾರ್ಯ ಮಾಡಿದರು. ಕ್ರೇನ್​ ಮೂಲಕ ಬಸ್​ ಎನ್ನು ಮೇಲೆತ್ತುವ ಕೆಲಸ ಮಾಡಲಾಗಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಂಡಕ್ಟರ್ ಜತೆ ಡ್ರೈವರ್​ ಮಾತು ತಂದ ಆಪತ್ತು; ಕೆರೆಗೆ ಉರುಳಿಬಿದ್ದ ಬಸ್‌; ಮಕ್ಕಳು ಸೇರಿ 17 ಮಂದಿ ದಾರುಣ ಸಾವು

https://newsfirstlive.com/wp-content/uploads/2023/07/BANGLA_BUS_FALL_2.jpg

Load More