ಸದ್ಯದಲ್ಲೇ ನಡೆಯಲಿದೆ ಏಷ್ಯಾಕಪ್ 16ನೇ ಸೀಸನ್
ಭಾರತ ಸೇರಿ ಎಲ್ಲಾ ತಂಡಗಳು ಭರ್ಜರಿ ತಯಾರಿ..!
ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟರ್ ವಿಚಿತ್ರ ಪ್ರಾಕ್ಟೀಸ್
ಆಗಸ್ಟ್ 30ನೇ ತಾರೀಕಿನಿಂದ ಏಷ್ಯಾಕಪ್ 16ನೇ ಸೀಸನ್ ಶುರುವಾಗಲಿದೆ. ಟೂರ್ನಿಗೆ ಇನ್ನೇನು ಕೇವಲ ಎರಡೇ ವಾರಗಳು ಬಾಕಿ ಇದ್ದು, ಟೀಂ ಇಂಡಿಯಾ ಸೇರಿದಂತೆ ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸಿಕೊಂಡಿವೆ. ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಕ್ಯಾಪ್ಟನ್ ರೋಹಿತ್ ಶರ್ಮಾ, ಪಾಕ್ ತಂಡದ ನಾಯಕ ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್ ಸೇರಿದಂತೆ ಹಲವರು ತಯಾರಿಯಲ್ಲಿ ತೊಡಗಿದ್ದಾರೆ.
ಎಲ್ಲಾ ತಂಡದ ಆಟಗಾರರು ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ. ಈ ಮಧ್ಯೆ ಬಾಂಗ್ಲಾದ ಸ್ಟಾರ್ ಕ್ರಿಕೆಟರ್ ಓರ್ವ ಏಷ್ಯಾಕಪ್ ಟೂರ್ನಿಗಾಗಿ ಕೆಂಡದ ರಾಶಿ ಮೇಲೆ ನಡೆಯುವ ಮೂಲಕ ವಿಚಿತ್ರವಾಗಿ ತಯಾರಿ ನಡೆಸುತ್ತಿದ್ದಾರೆ. ಈ ಘಟನೆ ಅಭಿಮಾನಿಗಳನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಈ ರೀತಿ ತಯಾರಿ ನಡೆಸಿ ಬೆಚ್ಚಿಬೀಳಿಸಿದ್ದು ಮತ್ಯಾರು ಅಲ್ಲ, ಬಾಂಗ್ಲಾದ ಆರಂಭಿಕ ಆಟಗಾರ ಮೊಹಮ್ಮದ್ ನಯೀಮ್ ಶೇಕ್.
Naim Sheikh working with a mind trainer ahead of Asia Cup. pic.twitter.com/mkykegJ06p
— Saif Ahmed 🇧🇩 (@saifahmed75) August 18, 2023
ಈ ಸಂಬಂಧ ಮಾಹಿತಿ ಹಂಚಿಕೊಂಡಿರೋ ಸೈಫ್ ಅಹ್ಮದ್ ಎಂಬವರು ಸೋಷಿಯಲ್ ಮೀಡಿಯಾದಲ್ಲಿ ತಯಾರಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಮೈದಾನದ ಮಧ್ಯ ಭಾಗದಲ್ಲಿ ಉರಿಯುತ್ತಿರುವ ಕೆಂಡದ ರಾಶಿ ಮೇಲೆ ಮೊಹಮ್ಮದ್ ನಯೀಮ್ ನಡೆದು ತಯಾರಿ ನಡೆಸುತ್ತಿದ್ದಾರೆ. ಇದಕ್ಕೆ ಏಷ್ಯಾಕಪ್ ಟೂರ್ನಿಗಾಗಿ ನಯೀಮ್ ಶೇಕ್ ಮೈಂಡ್ ಟ್ರೈನರ್ ಜತೆ ಅಭ್ಯಾಸ ಮಾಡುತ್ತಿದ್ದಾರೆ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ಏಷ್ಯಾಕಪ್ ಟೂರ್ನಿ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ, ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಎಲ್ಲಾ ತಂಡಗಳು ಈಗ ಕೊನೆಯ ಹಂತದ ಸಿದ್ಧತೆಯನ್ನು ನಡೆಸುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ