newsfirstkannada.com

×

ಜನಪ್ರಿಯ ನೀಲಿಚಿತ್ರ ತಾರೆ ಬಂಧನ; ಈಕೆ ಮಾಡಿದ್ದು ಅಂತಿಂಥ ತಪ್ಪು ಅಲ್ಲ..!

Share :

Published September 27, 2024 at 2:37pm

    ಬಾಂಗ್ಲಾದೇಶಿ ನೀಲಿಚಿತ್ರ ತಾರೆ ಮುಂಬೈನಲ್ಲಿ ಅರೆಸ್ಟ್ ಆಗಿದ್ದೇಕೆ?

    ಪೊಲೀಸರು ದಾಳಿ ವೇಳೆ ಸಿಕ್ಕ ವಸ್ತುಗಳು ಏನೇನು..?

    ನಾಲ್ವರು ಪರಾರಿ, ಆರೋಪಿಗಳಿಗಾಗಲಿ ಪೊಲೀಸರು ಹುಡುಕಾಟ

ಭಾರತದಲ್ಲಿ ವಾಸಿಸಲು ನಕಲಿ ಭಾರತದ ಪಾಸ್​ಪೋರ್ಟ್ ಬಳಸಿದ ಆರೋಪದ ಮೇಲೆ ಬಾಂಗ್ಲಾದೇಶಿ ನೀಲಿಚಿತ್ರ ತಾರೆ ಅರೆಸ್ಟ್ ಆಗಿದ್ದಾಳೆ. ರಿಯಾ ಬರ್ದೆ (Riya Barde) ಬಂಧಿತ ನೀಲಿ ಚಿತ್ರತಾರೆ.

ಇವರು ಆರೋಹಿ ಬರ್ದೆ ಅಂತಲೂ ಜನಪ್ರಿಯತೆ ಪಡೆದುಕೊಂಡಿದ್ದಳು. ಮಹಾರಾಷ್ಟ್ರದ ಉಲ್ಹಾಸನಗರ ಪೊಲೀಸರು ರಿಯಾಳನ್ನು ಬಂಧಿಸಿದ್ದು, ವಿಚಾರಣೆಗೆ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಅಂಬೇರ್​ನಾಥ್​​ದಲ್ಲಿ ಬಾಂಗ್ಲಾದೇಶ ಕುಟುಂಬವೊಂದು ವಾಸವಿದ್ದ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು.

ನಕಲಿ ದಾಖಲೆಗಳನ್ನು ಹೊಂದಿ ಅಕ್ರಮವಾಗಿ ಇಲ್ಲಿರುವ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ದಾಳಿ ನಡೆಸಿದ್ದರು. ನಂತರ ಅಲ್ಲಿದ್ದ ಕುಟುಂಬದಿಂದ ಮೋಸದ ಚಟುವಟಿಕೆ ನಡೆಯುತ್ತಿರೋದು ಗೊತ್ತಾಗಿದೆ. ತನಿಖೆ ವೇಳೆ ರಿಯಾ ಮತ್ತು ಆಕೆಯ ಮೂವರು ಸಹಾಯಕರು ನಕಲಿ ದಾಖಲೆಗಳನ್ನು ಹೊಂದಿರೋದು ದೃಢಪಟ್ಟಿದೆ. ರಿಯಾ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಫಾರಿನರ್ಸ್ ಆ್ಯಕ್ಟ್ 1946 ಅಡಿಯಲ್ಲಿ ಹಾಗೂ ಸೆಕ್ಷನ್ 14(A) ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ. ಇನ್ನು ನಾಲ್ವರು ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬಂಧಿತ ಆರೋಪಿ ಪೋಷಕರು ಸದ್ಯ ಕತಾರ್​ನಲ್ಲಿ ವಾಸವಿದ್ದಾರೆ.

ಇದನ್ನೂ ಓದಿ:‘ನಿಮ್ಮ ಗಡ್ಡದಲ್ಲಿ ಏನಿದೆ?’ ನಂಬಲಾಗದ ಬದಲಾವಣೆಯ ಇಂಟ್ರೆಸ್ಟಿಂಗ್ ಸ್ಟೋರಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜನಪ್ರಿಯ ನೀಲಿಚಿತ್ರ ತಾರೆ ಬಂಧನ; ಈಕೆ ಮಾಡಿದ್ದು ಅಂತಿಂಥ ತಪ್ಪು ಅಲ್ಲ..!

https://newsfirstlive.com/wp-content/uploads/2024/09/Bangladeshi-Star.jpg

Load More