newsfirstkannada.com

ಬಿಗ್‌ಬಾಸ್ ಮನೆಯಲ್ಲಿ ‘ಬಳೆ’ ಜಗಳ.. ವಿನಯ್‌, ಸಂಗೀತಾ ಯುದ್ಧ ಏನಾಗುತ್ತೆ? ಕಿಚ್ಚನ ಪಂಚಾಯ್ತಿ ಮೇಲೆ ಎಲ್ಲರ ಕಾತರ

Share :

04-11-2023

  ಬಳೆ ಬಲಹೀನತೆಯ ಸಂಕೇತನಾ? ಬಳೆ ಬಲಶಾಲಿಗಳ ಸಂಕೇತನಾ?

  ವಿನಯ್, ಸಂಗೀತಾ ಮನಸ್ತಾಪದ ಯುದ್ಧಕ್ಕೆ ಬ್ರೇಕ್ ಹಾಕ್ತಾರಾ ಕಿಚ್ಚ

  ಇವತ್ತಿನ ಪಂಚಾಯ್ತಿಯಲ್ಲಿ ಮನವರಿಕೆ ಮಾಡೋದು ಸಿಕ್ಕಾಪಟ್ಟೆ ಇದೆ

ಕನ್ನಡ ಬಿಗ್‌ಬಾಸ್ ರಿಯಾಲಿಟಿ ಶೋ ದಿನ ಕಳೆದಂತೆ ರಂಗೇರಿದ್ದು, ಈ ವಾರ ಬಳೆಗಳ ಶಬ್ದ ಜೋರಾಗಿಯೇ ಮಾರ್ದನಿಸಿದೆ. ಎಲಿಮಿನೇಷನ್‌ಗೂ ಮುನ್ನ ವಿನಯ್, ಸಂಗೀತಾ, ಕಾರ್ತಿಕ್ ಮಧ್ಯೆ ಬಳೆಗಳ ವಿಚಾರಕ್ಕೆ ಜೋರು ಜಗಳ ನಡೆದಿದೆ. ಇದರಿಂದ ಬಳೆ ಬಲಹೀನತೆಯ ಸಂಕೇತನಾ? ಬಳೆ ಬಲಶಾಲಿಗಳ ಸಂಕೇತನಾ ಅನ್ನೋ ಚರ್ಚೆ ಜೋರಾಗಿದೆ.

ವಿನಯ್‌, ಸಂಗೀತಾ ಮಧ್ಯೆ ನಡೆದ ಜಗಳದ ಮಧ್ಯೆ ಬಳೆಯ ಬಲ ಪ್ರದರ್ಶನವಾಗಿದೆ. ಕ್ಯಾಪ್ಟನ್‌ ವಿನಯ್‌ಗೆ ಸೆಡ್ಡು ಹೊಡೆದಿರುವ ಸಂಗೀತಾ ಬಳೆ.. ಬಳೆ ಹಾಕೊಂಡಿದ್ದೀನಿ ನೋಡು ಎಂದು ಸವಾಲು ಹಾಕಿದ್ದಾರೆ. ನೂಕಾಟ, ತಳ್ಳಾಟ, ವಾಗ್ಯುದ್ಧದ ಮಧ್ಯೆ ಬಳೆಗಳನ್ನ ಹಾಕೊಂಡು ಹೆಂಗಸಿನ ತರಹ ಆಡಬೇಡ ಎಂದು ವಿನಯ್ ಹೊಸ ಕಿಚ್ಚು ಹಚ್ಚಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿ ನಡೆದಿರೋ ಬಳೆಗಳ ಜಗಳ, ಏಕವಚನದ ಬೈಗುಳಕ್ಕೆ ಇವತ್ತು ಮೆಗಾ ಕ್ಲೈಮ್ಯಾಕ್ಸ್ ಫಿಕ್ಸ್ ಆಗಿದೆ. ಇಂದು ಶನಿವಾರ ಸ್ಪರ್ಧಿಗಳ ಮಧ್ಯೆ ಕಿಚ್ಚ ಸುದೀಪ್ ಪಂಚಾಯ್ತಿಗೆ ಬರುತ್ತಿದ್ದಾರೆ. ಇಂದು ಕಿಚ್ಚ ಸುದೀಪ್ ಹೇಗೆಲ್ಲಾ ಪಂಚಾಯ್ತಿ ಮಾಡ್ತಾರೆ ಅನ್ನೋದು ಬಿಗ್‌ಬಾಸ್‌ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದೆ.

ವಾರದ ಪಂಚಾಯ್ತಿಗೆ ಇಡೀ ಕರ್ನಾಟಕವೇ ಕಾತರ

ಸದ್ಯ ಕಲರ್ಸ್‌ ಕನ್ನಡ ವಾಹಿನಿ ಪ್ರೋಮೋದಲ್ಲಿ ಮಹತ್ವದ ಸುಳಿವು ಬಿಟ್ಟುಕೊಡಲಾಗಿದೆ. ಇಂದಿನ ಕಿಚ್ಚನ ಪಂಚಾಯ್ತಿಯಲ್ಲಿ ಬಳೆ ಜಗಳವೇ ಪ್ರಮುಖವಾಗಿ ಚರ್ಚೆಯಾಗಲಿದೆ. ಬಳೆ ಅಂದ್ರೇನು? ಹಿರಿಯರು ಸಂಸ್ಕೃತಿ ಅಂದ್ರು. ಕಿರಿಯರು ಶಕ್ತಿ ಅಂದ್ರು ಅಂತಾ ಕಿಚ್ಚ ಸುದೀಪ್ ಹೇಳಿದ್ದಾರೆ. ಈ ಎಲ್ಲಾ ವಿಷಯಗಳ ಜೊತೆಗೆ ಮತ್ತೊಂದಷ್ಟು ವಿಷಯಗಳು ಸ್ಪರ್ಧಿಗಳಿಗೆ ಮನವರಿಕೆ ಮಾಡಿಕೊಡಲು ಕಿಚ್ಚ ಸುದೀಪ್ ಮುಂದಾಗಿದ್ದಾರೆ.
ವಿನಯ್, ಸಂಗೀತಾ ಮಧ್ಯೆ ಬೆಳೆದಿರೋ ಮನಸ್ತಾಪಕ್ಕೆ ಬ್ರೇಕ್ ಹಾಕ್ತಾರಾ? ವಿನಯ್ ಕಾರ್ತಿಕ್‌ ಅವರ ಸ್ನೇಹದ ಮಧ್ಯೆ ಆಗಿರೋ ಬಿರುಕನ್ನ ಸರಿಪಡಿಸ್ತಾರಾ. ಹೀಗೆ ಬೇರೆ ಬೇರೆ ವಿಷಯಗಳನ್ನಿಟ್ಟುಕೊಂಡು ಕಿಚ್ಚ ಇವತ್ತಿನ ಪಂಚಾಯ್ತಿಗೆ ಸಜ್ಜಾಗಿದ್ದಾರೆ.

ಬಳೆ ಬಲಹೀನತೆಯ ಸಂಕೇತನಾ? ಬಳೆ ಬಲಶಾಲಿಗಳ ಸಂಕೇತನಾ ಅನ್ನೋದು ಡಿಸೈಡ್ ಆಗಬೇಕಿದೆ. ಇವತ್ತಿನ ಪಂಚಾಯ್ತಿಯಲ್ಲಿ ಮನವರಿಕೆ ಮಾಡೋದು ಸಿಕ್ಕಾಪಟ್ಟೆ ಇದೆ ಎಂದು ಸುದೀಪ್‌ ಹೇಳಿದ್ದಾರೆ. ಇವತ್ತಿನ ಕಿಚ್ಚನ ಪಂಚಾಯ್ತಿ ಇಡೀ ಕರುನಾಡಲ್ಲೇ ಭಾರಿ ಕುತೂಹಲ ಸೃಷ್ಟಿಸಿದೆ. ವೀಕ್ಷಕರ ಆಸೆಯಂತೆ ಪಂಚಾಯ್ತಿ ನಡೆಯುತ್ತಾ ಕಾದು ನೋಡ್ಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್‌ಬಾಸ್ ಮನೆಯಲ್ಲಿ ‘ಬಳೆ’ ಜಗಳ.. ವಿನಯ್‌, ಸಂಗೀತಾ ಯುದ್ಧ ಏನಾಗುತ್ತೆ? ಕಿಚ್ಚನ ಪಂಚಾಯ್ತಿ ಮೇಲೆ ಎಲ್ಲರ ಕಾತರ

https://newsfirstlive.com/wp-content/uploads/2023/11/Bigg-Boss-Kannada.jpg

Load More