newsfirstkannada.com

ಲೋನ್​ ಮಾಡಿದ್ದು ಮನೆ ಮಾಲೀಕ.. ಮನೆಯೊಳಗೆ ಲಾಕ್ ಆಗಿದ್ದು ಬಾಡಿಗೆದಾರ.. ಬೆಂಗಳೂರಲ್ಲಿ ವಿಚಿತ್ರ ಪ್ರಸಂಗ..!

Share :

17-08-2023

    ಬೆಂಗಳೂರಲ್ಲಿ ಬ್ಯಾಂಕ್​ ಸಿಬ್ಬಂದಿಯಿಂದ ಮಹಾ ಯಡವಟ್ಟು

    ಬಾಡಿಗೆದಾರನ ಒಳಗೆ ಬಿಟ್ಟು ಮನೆ ಸೀಜ್ ಮಾಡಿದ ಸಿಬ್ಬಂದಿ

    ಕೋ-ಆಪರೇಟಿವ್ ಬ್ಯಾಂಕ್​ನ ಸಿಬ್ಬಂದಿಯಿಂದ ಮೊಂಡುತನ

ಬೆಂಗಳೂರಿನಲ್ಲಿ ಬ್ಯಾಂಕ್​ ಸಿಬ್ಬಂದಿಯಿಂದ ಮಹಾ ಯಡವಟ್ಟಾಗಿದ್ದು, ಬಾಡಿಗೆದಾರರನ್ನು ಒಳಗೆ ಬಿಟ್ಟು ಮನೆ ಸೀಜ್ ಮಾಡಿರೋ ಘಟನೆ ಕೆಂಗೇರಿ ಉಪನಗರದಲ್ಲಿ ನಡೆದಿದೆ.

ಮನೆ ಮಾಲೀಕ ತುಮಕೂರಿನ ಬ್ಯಾಂಕ್​ನಲ್ಲಿ 2 ಕೋಟಿ ಸಾಲ ಪಡೆದಿದ್ದರು. ಲೋನ್​ ಬಾಕಿ ಇದ್ದಿದ್ರಿಂದ ಕೋ-ಆಪರೇಟಿವ್ ಬ್ಯಾಂಕ್​ ಸಿಬ್ಬಂದಿ ಮನೆ ಸೀಜ್​ ಮಾಡಲು ಬಂದಿದ್ದರು. ಈ ವೇಳೆ ಬಾಡಿಗೆದಾರ ಮನೆಯಲ್ಲಿ ಮಲಗಿದ್ದರು. ಇದನ್ನ ಗಮನಿಸದ​ ಸಿಬ್ಬಂದಿ ಮನೆ ಲಾಕ್​​ ಮಾಡಿದ್ದಾರೆ. ಸದ್ಯ ಮನೆಯಲ್ಲಿದ್ದ ಮಗನನ್ನ ಪೋಷಕರು ಹೊರ ತಂದಿದ್ದು, ಠಾಣೆಗೆ ದೂರು ನೀಡಿದ್ದಾರೆ.

ಏನಿದು ಪ್ರಕರಣ..?
ಪುಟ್ಟೇಗೌಡ ಮತ್ತು ಗಾಯತ್ರಿ ಅನ್ನೋರಿಗೆ ಕೆಂಗೇರಿ ಉಪನಗರದಲ್ಲಿ ಮನೆಯೊಂದು ಇರುತ್ತದೆ. ಈ ಮನೆ ಮೇಲೆ ತುಮಕೂರು ವೀರಶೈವ ಕೋ-ಆಪರೇಟೀವ್ ಬ್ಯಾಂಕ್​ನಲ್ಲಿ 2 ಕೋಟಿ ರೂಪಾಯಿ ಸಾಲವನ್ನು ದಂಪತಿ ಪಡೆದಿತ್ತು. ಆದರೆ ಇಎಂಐ ಸರಿಯಾಗಿ ಕಟ್ಟದ ಹಿನ್ನೆಲೆಯಲ್ಲಿ 2021ರಲ್ಲಿ ಪ್ರಕರಣ ಕೋರ್ಟ್​ ಮೆಟ್ಟಿಲೇರುತ್ತದೆ.

2021 ಕೊರ್ಟ್​ ಆದೇಶ ಪ್ರಕಾರ ಬ್ಯಾಂಕ್ ಸಲ್ಲಿಸಿದ್ದ ಅರ್ಜಿಯು ವಜಾಗೊಂಡಿದೆ ಎಂದು ಮನೆಯ ಮಾಲೀಕರು ವಾದ ಮಾಡುತ್ತಿದ್ದಾರೆ. ಇತ್ತ ಬ್ಯಾಂಕ್ ಸಿಬ್ಬಂದಿ ಮನೆಯನ್ನು ಸೀಜ್ ಮಾಡುತ್ತೀವಿ ಎಂದು ವಾದಿಸುತ್ತ ಬಂದಿದ್ದರು. ನಿನ್ನೆ ಮಧ್ಯಾಹ್ನ ಏಕಾಏಕಿಯಾಗಿ ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿ, ಮನೆಯನ್ನು ಸೀಜ್ ಮಾಡಿದ್ದಾರೆ. ಮಾತ್ರವಲ್ಲ, ಮನೆಯಲ್ಲಿರುವ ವಸ್ತುಗಳನ್ನು ಹೊರಗೆ ಹಾಕಿದ್ದಾರೆ. ನಂತರ ಮನೆಗೆ ಬೀಗ ಹಾಕಿ ಹೋಗಿದ್ದಾರೆ. ಸೆಕೆಂಡ್​ ಫ್ಲೋರ್​ನಲ್ಲಿ ಬಾಡಿಗೆ ಮನೆಯಲ್ಲಿ ಸಂತೋಷ್ ಎಂಬ ವ್ಯಕ್ತಿಯಿದ್ದ. ಅವನನ್ನು ಒಳಗೆ ಬಿಟ್ಟು, ಹೊರಗಡೆಯಿಂದ ಲಾಕ್ ಮಾಡಿ ಹೋಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋನ್​ ಮಾಡಿದ್ದು ಮನೆ ಮಾಲೀಕ.. ಮನೆಯೊಳಗೆ ಲಾಕ್ ಆಗಿದ್ದು ಬಾಡಿಗೆದಾರ.. ಬೆಂಗಳೂರಲ್ಲಿ ವಿಚಿತ್ರ ಪ್ರಸಂಗ..!

https://newsfirstlive.com/wp-content/uploads/2023/08/House.jpg

Load More