newsfirstkannada.com

ಮಹಿಳೆಯ ಅನುಮಾನಾಸ್ಪದ ಸಾವಿಗೆ ಬಿಗ್​ ಟ್ವಿಸ್ಟ್; ರೇಪ್ ಅಂಡ್ ಮರ್ಡರ್ ಆರೋಪಿ ಮೇಲೆ ಫೈರಿಂಗ್..!

Share :

19-08-2023

    ಬೆಂಗಳೂರು ಪೊಲೀಸರಿಂದ ಆರೋಪಿ ಮೇಲೆ ಫೈರಿಂಗ್

    ​ಬನ್ನೇರುಘಟ್ಟದ ಬ್ಯಾಟರಾಯನದೊಡ್ಡಿಯಲ್ಲಿ ನಡೆದಿದ್ದ ಕೇಸ್

    ಗಾಂಜಾ ಮತ್ತಿನಲ್ಲಿ ಮಹಿಳೆಯ ಬದುಕಿಗೆ ಕೊಳ್ಳಿಯಿಟ್ಟ ಕಿರಾತಕರು

ಬೆಂಗಳೂರು: ಬನ್ನೇರುಘಟ್ಟ ಸಮೀಪದ ಬ್ಯಾಟರಾಯನದೊಡ್ಡಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮಹಿಳೆ ಶವಪತ್ತೆಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ಮಹಿಳೆ ಮೇಲೆ ಅತ್ಯಾಚಾರ ಎಸಗಿ ಹತ್ಯೆಮಾಡಿದ್ದ ಹರೀಶ್, ಜಯಂತ್ ಹಾಗೂ ಸೋಮಶೇಖರ್ ಎಂಬ ಆರೋಪಿಗಳನ್ನ ಜಿಗಣಿ ಪೊಲೀಸರು ಬಂಧಿಸಿದ್ದಾರೆ.

ಈ ಮೂವರು ಗಾಂಜಾ ಮತ್ತಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ರು ಅನ್ನೋ ಸತ್ಯ ಬೆಳಕಿಗೆ ಬಂದಿದೆ. ಹತ್ಯೆ ಬಳಿಕ ಮೃತದೇಹ ಸಿಕ್ಕ ಸ್ಥಳದಲ್ಲೇ ಇದ್ದ ಈ ಮೂವರು ಪೊಲೀಸರಿಗೆ ಅನುಮಾನ ಬಾರದಂತೆ ಓಡಾಟ ನಡೆಸಿದ್ದರು. ಅಲ್ಲದೇ ಮೃತದೇಹ ಪತ್ತೆಯಾದ ದಿನದಂದು ಆರೋಪಿ ಹರೀಶ್‌ ಸ್ಥಳೀಯ ಅನ್ನೋ ಸೋಗಿನಲ್ಲಿ ಮಾಧ್ಯಮಗಳಿಗೆ ಬೈಟ್ ಸಹ ನೀಡಿದ್ದ ಎಂದು ತಿಳಿದುಬಂದಿದೆ.

ಆರೋಪಿಗಳನ್ನ ಸ್ಥಳ ಮಹಜರಿಗೆ ಪೊಲೀಸರು ಕರೆದೊಯ್ದಾಗ ತಪ್ಪಿಸಿಕೊಳ್ಳಲು ಯತ್ನಿಸಿದಕ್ಕೆ ಸೋಮಶೇಖರನ್ ಕಾಲಿಗೆ ಫೈರಿಂಗ್ ಸಹ​ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಿಳೆಯ ಅನುಮಾನಾಸ್ಪದ ಸಾವಿಗೆ ಬಿಗ್​ ಟ್ವಿಸ್ಟ್; ರೇಪ್ ಅಂಡ್ ಮರ್ಡರ್ ಆರೋಪಿ ಮೇಲೆ ಫೈರಿಂಗ್..!

https://newsfirstlive.com/wp-content/uploads/2023/08/BNG_FIRE.jpg

Load More