newsfirstkannada.com

‘ಮುಂದಿನ ತಿಂಗಳಿಂದ 10 ಕೆಜಿ ಅಕ್ಕಿ ನೀಡಲೇಬೇಕು, ಇಲ್ಲವಾದರೆ’ -ಸಿದ್ದರಾಮಯ್ಯ ಸರ್ಕಾರಕ್ಕೆ ಬೊಮ್ಮಾಯಿ ಸಲಹೆ

Share :

15-06-2023

    ಅಕ್ಕಿ ವಿಚಾರದಲ್ಲಿ ಕೇಂದ್ರದ ನಡೆ ಸಮರ್ಥಿಸಿದ ಬೊಮ್ಮಾಯಿ

    ಸಿದ್ದರಾಮಯ್ಯ ಆರೋಪಕ್ಕೆ ಬೊಮ್ಮಾಯಿ ಸಿಡಿಮಿಡಿ..!

    ಸಿದ್ದು ಸರ್ಕಾರ ಬಡವರಿಗೆ ಮೋಸ ಮಾಡ್ತಿದೆ- ಬೊಮ್ಮಾಯಿ

ನಿನ್ನೆ ದಿಢೀರ್ ಸುದ್ದಿಗೋಷ್ಟಿ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನಮ್ಮ ಅನ್ನ ಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ನೀಡ್ತೀನಿ ಎಂದು, ಕೊನೆ ಗಳಿಗೆಯಲ್ಲಿ ಕೊಡಲು ನಿರಾಕರಿಸಿದೆ’ ಎಂದು ಗಂಭೀರ ಆರೋಪ ಮಾಡಿದ್ದರು. ಈ ಆರೋಪಕ್ಕೆ ಇಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸುದ್ದಿಗೋಷ್ಟಿ ನಡೆಸಿ ವಾಗ್ದಾಳಿ ಮಾಡಿದ್ದಾರೆ.

ಸಿದ್ದರಾಮಯ್ಯ ಏನ್ ಹೇಳಿದ್ದರು?

ನಾವು ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿದ್ದೆವು. ಅಕ್ಕಿ ಸಂಗ್ರಹ ಇಲ್ಲದ ಕಾರಣ ಮುಂದಿನ ತಿಂಗಳಿನಿಂದ ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್, ಅಂತ್ಯೋದಯ ಕಾರ್ಡ್​​ದಾರರಿಗೆ ತಲಾ 10 ಕೆಜಿ ಆಹಾರ ಧಾನ್ಯ ವಿತರಿಸಲು ಸರ್ಕಾರ ಮಾಡಿದ್ದೆವು. ಈಗಾಗಲೇ ರಾಜ್ಯ ಸರ್ಕಾರ ಐದು ಕೆಜಿ ಅಕ್ಕಿ ಕೊಡುತ್ತಿದೆ. ಅದಕ್ಕೆ ಹೆಚ್ಚುವರಿಯಾಗಿ ಇನ್ನೂ ಐದು ಕೆಜಿ ಎಂದರೆ ಒಟ್ಟು 10 ಕೆಜಿ ನೀಡುವ ಭರವಸೆ ಕೊಟ್ಟಿದ್ದೇವೆ. ಹೀಗಾಗಿ ನಮಗೆ ತಿಂಗಳಿಗೆ 2,28,000 ಮೆಟ್ರಿಕ್​​ ಟನ್​​​ ಬೇಕಾಗುತ್ತದೆ. 5ಕ್ಕೆ ಐದು ಕೆಜಿ ಸೇರಿಸಿ ಒಟ್ಟು 10 ಕೆಜಿ ಕೊಡಬೇಕಾದರೆ ನಮಗೆ ಇಷ್ಟು ಅಕ್ಕಿ ಅಗತ್ಯ ಇದೆ. ಇದಕ್ಕೆ ತಿಂಗಳಿಗೆ 840 ಕೋಟಿ, ವರ್ಷಕ್ಕೆ 10,092 ಕೋಟಿ ಖರ್ಚು ಆಗಲಿದೆ. ಇದಕ್ಕೆ ಸಂಪುಟದಲ್ಲಿ ತೀರ್ಮಾನವು ಆಗಿದೆ. ನಾವು ಕೇಳಿದಷ್ಟು ಅಕ್ಕಿಯನ್ನು ಕೇಂದ್ರೀಯ ಆಹಾರ ನಿಗಮದ ಡೆಪ್ಯುಟಿ ಜನರಲ್ ಮ್ಯಾನೇಜರ್ ಒಪ್ಪಿಕೊಂಡಿದ್ದರು. ಈಗ ಅಕ್ಕಿ ಕೊಡಕ್ಕೆ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಗಂಭೀರ ಆರೋಪಿಸಿದ್ದರು.

ಸುದ್ದಿಗೋಷ್ಟಿಯಲ್ಲಿ ಬೊಮ್ಮಾಯಿ ವಾದ ಏನು..?

  • ನಿನ್ನೆ ಮುಖ್ಯಮಂತ್ರಿಗಳ ಪತ್ರಿಕಾಗೋಷ್ಠಿ ನೋಡಿದ್ದೇನೆ. ಅದನ್ನು ನೋಡಿದಾಗ, ರಾಜ್ಯ ಸರ್ಕಾರ, ರಾಜ್ಯದ ಬಡ ಜನತೆಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ನಂಬಿಸಿ ಮೋಸ ಮಾಡುತ್ತಿದೆ. ಇನ್ನೊಂದು ಕಡೆ, ಮಾತು ತಪ್ಪಿ ತಮ್ಮ ದೋಖಾ ಕಾರ್ಯಕ್ರಮವನ್ನು ಮುಂದುವರೆಸಿದ್ದಾರೆ –ಬೊಮ್ಮಾಯಿ
  • ಮೊದಲನೆಯದು ಕೇಂದ್ರ ಸರ್ಕಾರ FSA ( Food Security Act) ಪ್ರಕಾರ, ಎಲ್ಲಾ ರಾಜ್ಯಗಳಿಗೂ ಬಿಪಿಎಲ್ ಕಾರ್ಡ್​ ಹೊಂದಿರೋರಿಗೆ ತಲಾ 5 ಕೆಜಿ ಕೊಡುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ಯೋಜನೆಗೆ ಕೆಲವು ಮಾರ್ಪಾಡು ಮಾಡಿದೆ –ಬೊಮ್ಮಾಯಿ
  • ಡಿಸೆಂಬರ್‌ವರೆಗೂ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ 10 ಕೆಜಿ ಅಕ್ಕಿಯನ್ನು ಎಲ್ಲಾ ರಾಜ್ಯಗಳಿಗೂ ನೀಡಿತ್ತು. ನಾನು ಮುಖ್ಯಮಂತ್ರಿಯಾಗಿದ್ದಾಗ 1 ರೂಪಾಯಿಗೆ 1 ಕೆಜಿ ಅಕ್ಕಿ ಖರೀದಿಸಿ ಕೊಟ್ಟಿದ್ದೇವೆ. FCA ಮೇಲೆ ಅವಲಂಬಿತ ಆಗಬಾರದು ಎಂದು ನಾನೇ ಕಡತದಲ್ಲಿ ಬರೆದಿದ್ದೆ- ಬೊಮ್ಮಾಯಿ
  • ಸಿದ್ದರಾಮಯ್ಯ ನೇತೃತ್ವದಲ್ಲಿ ಮೊದಲ ಕ್ಯಾಬಿನೆಟ್ ಸಭೆ ನಡೆದಿತ್ತು. ಅಲ್ಲಿ ಏನು ಮಾಡಿದ್ದಾರೋ ಗೊತ್ತಿಲ್ಲ. ಮೊದಲ ಕ್ಯಾಬಿನೆಟ್‌ನಲ್ಲಿ ತಾತ್ವಿಕ ಒಪ್ಪಿಗೆ ಅಂದರು. ಅದಾದ ಬಳಿಕ ಸರಣಿ ಸಭೆಗಳನ್ನು ಮಾಡಿದ್ದರು. ಇದೀಗ ಕುಂಟು ನೆಪ ಹೇಳುತ್ತಿದ್ದಾರೆ –ಬೊಮ್ಮಾಯಿ
  • ನಿಮಗೆ ಹಣ ಹೊಂದಿಸಿ, ಅಕ್ಕಿ ಖರೀದಿಸಲು ಆಗಲಿಲ್ಲ ಅಂದರೆ ಏನರ್ಥ? ನಿಮ್ಮ ಅತ್ಯಂತ ಪ್ರಮುಖ ಯೋಜನೆ ಇದು. ನೀವು ಮೊದಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕಿತ್ತು. ನಿಮ್ಮ ಆಹಾರ ಸಚಿವರನ್ನು ಕಳುಹಿಸಬೇಕಾಗಿತ್ತು. ಇಲ್ಲವಾದ್ರೆ ಕೇಂದ್ರದ ಬಳಿ ಮೂರ್ನಾಲ್ಕು ತಿಂಗಳು ಕೊಡಿ‌‌ ಎಂದು ಹೇಳಬೇಕಿತ್ತು –ಬೊಮ್ಮಾಯಿ
  • ಇದ್ಯಾವುದನ್ನೂ ನೀವು ಮಾಡಿಲ್ಲ. ನೀವೇ ದೂರವಾಣಿ ಕರೆ ಮಾಡಿ ಮಾತಾಡಬೇಕಿತ್ತು. ಟೆಂಡರ್ ಕರೆಯಬೇಕಿತ್ತು. ಇದ್ಯಾವುದನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿಲ್ಲ. ಕೊನೆ ಪಕ್ಷ ಓಪನ್ ಮಾರುಕಟ್ಟೆಯಲ್ಲಾದ್ರೂ ಖರೀದಿಸಬೇಕಿತ್ತು. ಅದನ್ನೂ ಮಾಡಿಲ್ಲ –ಬೊಮ್ಮಾಯಿ
  • ಮುಂದಿನ ತಿಂಗಳಿಂದ 10 ಕೆಜಿ ಅಕ್ಕಿ ನೀಡಬೇಕು. ಇಲ್ಲವಾದರೆ ಅವರವರ ಆಕೌಂಟ್‌ಗೆ ಡೆಬಿಟ್ ಮೂಲಕ ಹಣ ಸಂದಾಯ ಮಾಡಿ. ಇಲ್ಲವಾದ್ರೆ ನಾವು ಹೋರಾಟದ ಹಾದಿ ಹಿಡಿಯುತ್ತೇವೆ- ಬೊಮ್ಮಾಯಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಮುಂದಿನ ತಿಂಗಳಿಂದ 10 ಕೆಜಿ ಅಕ್ಕಿ ನೀಡಲೇಬೇಕು, ಇಲ್ಲವಾದರೆ’ -ಸಿದ್ದರಾಮಯ್ಯ ಸರ್ಕಾರಕ್ಕೆ ಬೊಮ್ಮಾಯಿ ಸಲಹೆ

https://newsfirstlive.com/wp-content/uploads/2023/06/BASAVARAJ_BOMMAI.jpg

Load More