ಸ್ವಪಕ್ಷೀಯ ಇಬ್ಬರು ನಾಯಕರ ನಡುವೆ ಹೀಗೇ ಆಗ್ತಿರೋದೇಕೆ..?
ಎಸ್.ಎಸ್. ಮಲ್ಲಿಕಾರ್ಜುನ್ ಮೇಲೆ ಮಾಡಿರೋ ಆರೋಪವೇನು?
100 ದಿನ ಪೂರೈಸಿದ ಕೆಲವೇ ದಿನಗಳಲ್ಲಿ ಶಾಸಕರ ರಾಜೀನಾಮೆ ಮಾತು!
ರಾಜಕೀಯ ಪಡಸಾಲೆಯಲ್ಲಿ ಯಾರೂ ಗುರುವೂ ಇಲ್ಲ, ಯಾರೂ ಶಿಷ್ಯರೂ ಇಲ್ಲ. ನನ್ನ ಪ್ರಕಾರ, ಕಾಲವೇ ಗುರು. ಕಾಲವೇ ಶಿಷ್ಯ. ಯಾರ ಟೈಮ್ ಚೆನ್ನಾಗಿರುತ್ತೋ ಅವ್ರೇ ಗುರು, ಯಾರದ್ದು ಬ್ಯಾಡ್‌ಲಕ್ ಆಗಿರುತ್ತೋ ಅವ್ರೇ ಶಿಷ್ಯ. ಇದು ಪರಮಾರ್ಥಿಕ ಸತ್ಯ. ಇಷ್ಟೊಂದು ಡೀಪ್ ಆಗಿ ಯಾವ ರಾಜಕಾರಣಿಯೂ ಥಿಂಕ್ ಮಾಡೋಲ್ಲ. ಇವತ್ತಿಗೂ ಗುರು-ಶಿಷ್ಯ ಅನ್ನೋ ಕ್ಯಾಟಗರಿ ಬಗ್ಗೆ ಒಲವು ಜಾಸ್ತಿ. ದಾವಣಗೆರೆಯಲ್ಲಿ ಗುರು ಮತ್ತು ಶಿಷ್ಯನ ನಡುವೆ ಒಂದು ಕಾಳಗ ಶುರುವಾಗಿದೆ. ಅದರ ಆಳ ಅಗಲ ತುಂಬಾ ದೊಡ್ಡದಿದೆ. ಇದು ಚನ್ನಗಿರಿ ಹಾಲಿ ಶಾಸಕರಾದ ಶಿವಗಂಗಾ, ತಮ್ಮ ರಾಜಕೀಯ ಗುರು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮೇಲೆ ಮಾಡಿರೋ ಆರೋಪ. ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪ ಕಾಮನ್. ಆದರೆ ಈ ಕೇಸ್‌ನಲ್ಲಿ ಕಹಾನಿ ಬೇರೆ ಇದೆ. ಬಸವರಾಜ್, ಎಸ್.ಎಸ್.ಮಲ್ಲಿಕಾರ್ಜುನ್ ಗರಡಿಯಲ್ಲಿ ಪಳಗಿದವರು. ಅರ್ಥಾತ್ ಮಲ್ಲಿಕಾರ್ಜುನ್ ಅವರ ಶಿಷ್ಯ.
ಚನ್ನಗಿರಿ ಕೈ ಹಾಲಿ ಶಾಸಕ ಬಸವರಾಜ್ ಶಿವಗಂಗಾ, ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅತ್ಯಾಪ್ತರು. ಸಚಿವ ಮಲ್ಲಿಕಾರ್ಜುನ್ ರಾಜಕೀಯಕ್ಕೆ ಬಂದು 30 ವರ್ಷಗಳು ಕಳೆದಿವೆ. ಕಳೆದ 10 ವರ್ಷಗಳಿಂದ ಸಚಿವ ಮಲ್ಲಿಕಾರ್ಜುನ್ ಜೊತೆ ಗುರುತಿಸಿಕೊಂಡ ಬಸವರಾಜ್ ಶಿವಗಂಗಾ, ಮಿನಿಸ್ಟರ್ ಅವ್ರನ್ನ ರಾಜಕೀಯ ಗುರುವಾಗಿ ಸ್ವೀಕರಿಸಿ ಅವರ ಚುನಾವಣೆಯಲ್ಲಿ ಓಡಾಡಲು ಆರಂಭಿಸಿದರು. ರಾಜಕೀಯದಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಜೊತೆ ಓಡಾಡಿದ ಶಿವಗಂಗಾ ಅವರಿಂದ ರಾಜಕೀಯ ಪಟ್ಟುಗಳನ್ನ ಕಲಿತು ಚುನಾವಣೆಗೆ ಧುಮುಕುವ ನಿರ್ಧಾರ ಮಾಡಿದ್ರು. ದಾವಣಗೆರೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದ ಶಿವಗಂಗಾ 2023ರ ಚುನಾವಣೆಗೆ ಚನ್ನಗಿರಿ ಕ್ಷೇತ್ರದಿಂದ ಕಣಕ್ಕಿಳಿಯುವ ನಿರ್ಧಾರ ಮಾಡಿದ್ರು. ಮೂಲತಃ ಚನ್ನಗಿರಿ ತಾಲೂಕಿನ ಹಿರೇಕೊಗಲೂರು ಗ್ರಾಮದವರಾಗಿದ್ದ ಶಿವಗಂಗಾ, ಚನ್ನಗಿರಿಯಲ್ಲಿ 5 ವರ್ಷದಿಂದ ಅನೇಕ ಸಾಮಾಜಿಕ ಕೆಲಸಗಳು, ಪಕ್ಷ ಸಂಘಟನೆ ಕೆಲಸ ಮಾಡಿದ್ದರು.
ಚನ್ನಗಿರಿ ಕ್ಷೇತ್ರದಿಂದ ಶಿವಗಂಗಾ ಕಣಕ್ಕಿಳಿಯುವುದು ಸಚಿವ ಮಲ್ಲಿಕಾರ್ಜುನ್‌ಗೆ ಸುತಾರಾಮ ಇಷ್ಟ ಇರಲಿಲ್ಲ. ಆದರೆ ಶಿವಗಂಗಾ ಜೊತೆಗಿರೋದ್ರಿಂದ ಪಕ್ಷಕ್ಕೆ ಯಾವ ವಿಚಾರ ತಿಳಿಸದೆ ಸುಮ್ಮನಿದ್ದರು. ಯಾವಾಗ ಬಸವರಾಜ್ ಶಿವಗಂಗಾ ರಾಜ್ಯ ಕಿಸಾನ್ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮಿಗಾ ಅವರ ಸಂಪರ್ಕ ಪಡೆದು ಟಿಕೆಟ್ ಪಡೆದ್ರೋ, ಇದು ಸಚಿವ ಮಲ್ಲಿಕಾರ್ಜುನ್ ಸಿಟ್ಟಿಗೆ ಕಾರಣವಾಗಿತ್ತು. ಇಲ್ಲಿಂದಲೇ ರಾಜಕೀಯ ಗುರು ಶಿಷ್ಯರ ಮಧ್ಯೆ ದೊಡ್ಡ ಬಿರುಕು ಉಂಟಾಗಿದ್ದು. 2023 ರ ವಿಧಾನಸಭಾ ಚುನಾವಣೆಯ ಚನ್ನಗಿರಿ ಕ್ಷೇತ್ರದ ಕೈ ಟಿಕೆಟ್ ಬೇರೆಯವರಿಗೆ ಸಿಗುತ್ತೆ ಅಂತ ಜಿಲ್ಲೆಯ ಜನರು ಸೇರಿ ಊಹಿಸಿದ್ದರು. ಆದರೆ ಅಚ್ಚರಿ ಎಂಬಂತೆ ಚುನಾವಣೆಯಲ್ಲಿ ಕೈ ಪಕ್ಷದ ಟಿಕೆಟ್ ಪಡೆದು ಬಸವರಾಜ್ ಶಿವಗಂಗಾ ಚುನಾವಣೆಯಲ್ಲಿ ಗೆದ್ದು ಬಂದರು. ನಂತರದಲ್ಲಿ ಕೈ ಸರ್ಕಾರ ರಚನೆಯಾಗಿ ಎರಡನೇ ಬಾರಿಗೆ ಮಲ್ಲಿಕಾರ್ಜುನ್‌ಗೆ ಸಚಿವ ಸ್ಥಾನ ಒಲಿದು ಬಂದಿತ್ತು. ಜೊತೆಗೆ ದಾವಣಗೆರೆ ಉಸ್ತುವಾರಿ ಸಚಿವರು ಕೂಡ ಆದರು.
5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದ ಕೈ ಸರ್ಕಾರ ಸದ್ಯಕ್ಕೆ ಶಾಸಕರಿಗೆ ಹೆಚ್ಚಿನ ಅನುದಾನ ಸಿಗೋಲ್ಲ ಅಂತಾ ಪರ್ಮಾನು ಹೊರಡಿಸಿತ್ತು. ಜೊತೆಗೆ ಸ್ಥಳೀಯ ಅಧಿಕಾರಿಗಳ ವರ್ಗಾವಣೆಯಲ್ಲೂ ಶಾಸಕರನ್ನ ನಗಣ್ಯ ಮಾಡಲಾಗ್ತಿದೆ ಅನ್ನೋ ಮಾತು ಕೂಡ ಇದೆ. ಈ ಸಮಯದಲ್ಲಿ ಚನ್ನಗಿರಿ ನೂತನ ಶಾಸಕ ಬಸವರಾಜ್ ಶಿವಗಂಗಾ ಅಭಿವೃದ್ಧಿಗೆ ಹಣ, ಮತ್ತು ಕೆಲ ಅಧಿಕಾರಿಗಳ ವರ್ಗಾವಣೆ ಇಲ್ಲದೆ ಬೇಸತ್ತು ಹೋಗಿದ್ದರು. ಇದನ್ನ ಗಮನಿಸಿ ರಾಜ್ಯದ 40 ಶಾಸಕರು ಸಿಎಂ ಸಿದ್ದರಾಮಯ್ಯ ವಿರುದ್ಧ ಪತ್ರ ಬರೆದಿದ್ದರು. ಅದರಲ್ಲಿ ಚನ್ನಗಿರಿ ಶಾಸಕ ಬಸವರಾಜ್ ವಿ ಶಿವಗಂಗಾ ಕೂಡ ಒಬ್ಬರು. ಸಿಎಂ ವಿರುದ್ಧ ಸಚಿವರ ವಿರುದ್ಧ ಸಚಿವರ ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆದಿದ್ದರು. ಇದು ರಾಜ್ಯ ಸರ್ಕಾರಕ್ಕೆ ಸಿಎಂ ಗೆ ತೀವ್ರ ಇರಿಸು ಮುರಿಸು ಉಂಟಾಗುವಂತೆ ಮಾಡಿತ್ತು.
ಶಿವಗಂಗಾ ಅವರ ಪತ್ರ ಬಿಜೆಪಿಯ ಸಾಮಾಜಿಕ ಜಾಲತಾಣದ ಆಫೀಶಿಯಲ್ ಗ್ರೂಪ್ ನಲ್ಲಿ ಕಾಣಿಸಿಕೊಂಡು ಪ್ರತಿಪಕ್ಷಕ್ಕೆ ಆಹಾರಕೂಡ ಆಗಿತ್ತು. ಇದೇ ವಿಚಾರದಿಂದ ಅಸಾಮಾಧಾನಿತರ ಮುನಿಸು ತಣಿಸಲು ಸಿಎಂ ಸಿದ್ದರಾಮಯ್ಯ ಸ್ಥಳೀಯ ಉಸ್ತುವಾರಿ ಸಚಿವರಿಗೆ ಸ್ಥಳೀಯ ಶಾಸಕರ ಸಮಸ್ಯೆ ಬಗೆ ಹರಿಸಲು ಸೂಚನೆ ನೀಡಿದ್ದರು. ಹೀಗಾಗಿ ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್ ಚನ್ನಗಿರಿ ಕ್ಷೇತ್ರದ ಸಮಸ್ಯೆ ಹಿಡಿದುಕೊಂಡು ತೆರಳಿದ್ದರು. ಆದರೆ ಸಚಿವರು ಶಾಸಕ ಶಿವಗಂಗಾ ಅವರಿಗೆ ಸಿಕ್ಕಿರಲಿಲ್ಲ. ಜೊತೆಗೆ ಅವರನ್ನ ಪೋನ್ ಮೂಲಕ ಸಂಪರ್ಕ ಮಾಡುವಂತ ಕೆಲಸವನ್ನ ಶಿವಗಂಗಾ ಮಾಡಿದ್ರೂ. ಆದರೆ ಸಚಿವ ಮಲ್ಲಿಕಾರ್ಜುನ್ ಅವರ ಕರೆ ಸ್ವೀಕರಿಸಲಿಲ್ಲ. ಇದರಿಂದ ರೊಚ್ವಿಗೆದ್ದ ಶಿವಗಂಗಾ ಸಚಿವ ಮಲ್ಲಿಕಾರ್ಜುನ್ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಶಿವಂಗಾ ವಿರುದ್ಧ ಚನ್ನಗಿರಿಯ ಹಿರೇಗಂಗೂರಿನಲ್ಲಿ ನಡೆದ ಕಾರ್ಯಕ್ರಮದ ವೇಳೆ ಸಚಿವ ಮಲ್ಲಿಕಾರ್ಜುನ್ ಕೂಡ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿದ್ದರು. ಶಾಸಕ ಶಿವಗಂಗಾ ನೂತನವಾಗಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಒಂದೊಂದೆ ಮೆಟ್ಟಿಲು ಹತ್ತಬೇಕು. ದಿಢೀರ್ ಅಂತ ಎಲ್ಲ ಮೆಟ್ಟಿಲು ಹತ್ತಬಾರದು ಅಂತ ಶಿಷ್ಯನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದೆಲ್ಲಾ ಮೇಲ್ನೋಟಕ್ಕೆ ಕಾಣಿಸೋದು. ಕಾಣಿಸದೇ ಇರೋ ಇನ್ನೊಂದು ವಿಚಾರವೂ ಇದೇ. ಯಾವಾಗ ನೂತನ ಶಾಸಕ ಶಿವಗಂಗಾ ಅಸಮಾಧಾನ ವ್ಯಕ್ತಪಡಿಸಿದ್ರೋ, ಸಚಿವ ಮಲ್ಲಿಕಾರ್ಜುನ್ ಸಹಜವಾಗಿಯೇ ಕುಪಿತಗೊಂಡರು. ಇಷ್ಟಕ್ಕೆ ಸುಮ್ಮನಾಗಲಿಲ್ಲ ಮಿನಿಸ್ಟರ್ ಸಾಹೇಬ್ರು. ನೂತನ ಶಾಸಕರ ಸಹೋದರನ ಲೇಔಟ್ ಪ್ಲಾನ್‌ಗೆ ಅಪ್ರೂವಲ್ ನೀಡಲಿಲ್ಲ. ಶಿವಗಂಗಾ ಅವರ ಹಿರಿಯ ಸಹೋದರ ಶ್ರೀನಿವಾಸ್ ಶಿವಗಂಗಾ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾರೆ. ಇವರು ದಾವಣಗೆರೆ ಹೊರವಲಯದ ಬೇತೂರು ಬಳಿ ಲೇಔಟ್ ಅಭಿವೃದ್ಧಿಗೊಳಿಸಿ ಎನ್‌ಓಸಿ ಕೇಳಿದ್ದರು. ಆದರೆ ಅವರಿಗೆ NOC ಸಿಗಲಿಲ್ಲ. ಶಾಸಕರ ಮೇಲಿನ ಸಿಟ್ಟಿನಿಂದಾಗಿ ಸಚಿವರು, ಸಹೋದರನ ಮೇಲೆ ಹಗೆತನ ಸಾಧಿಸ್ತಿದ್ದಾರೆ ಅಂತಾ ಜಿಲ್ಲೆಯಲ್ಲಿ ಚರ್ಚೆ ಜೋರಾಗಿದೆ.
ಈ ಮಧ್ಯೆ ಸಚಿವರ ಇಂತಹ ವರ್ತನೆಯಿಂದ ಶಾಸಕ ಬಸವರಾಜ್ ಶಿವಗಂಗಾ ರಾಜೀನಾಮೆ ಮಾತುಗಳನ್ನು ಆಡಿದ್ರು. ಇತ್ತೀಚೆಗೆ ನನಗೆ ರಾಜಕೀಯ ಬೇಡ ಅನಿಸಿದೆ. ನನಗೆ ರಾಜೀನಾಮೆ ಕೊಟ್ಟು ಹೋಗಬೇಕು ಅನಿಸಿದೆ ಅಂತ ಮಾಧ್ಯಮಗಳ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಸರ್ಕಾರ 100 ದಿನ ಪೂರೈಸಿದ ಕೆಲವೇ ದಿನಗಳಲ್ಲಿ ಶಾಸಕರ ರಾಜೀನಾಮೆ ಮಾತು ಸಚಿವರಿಗೆ ಸರ್ಕಾರಕ್ಕೆ ಬಾರೀ ಡ್ಯಾಮೇಜ್ ಉಂಟಾಗಿತ್ತು. ಇದಲ್ಲದೆ, ಚೆನ್ನಗಿರಿ ಶಾಸಕರು ಸಚಿವ ಮಲ್ಲಿಕಾರ್ಜುನ್ ವಿರುದ್ಧ ಅಪಪ್ರಚಾರ ಮಾಡ್ತಿದ್ದಾರೆ ಅನ್ನೋದು ಕೂಡ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿಕೆ ಶಿವಕುಮಾರ್‌ಗೆ ದೂರು ನೀಡಿದ್ದರು. ಆದರೆ ಡಿ.ಕೆ. ಶಿವಕುಮಾರ್ ಆಪ್ತರಾಗಿರೋ ಶಿವಗಂಗಾ ವಿರುದ್ಧ ಏನು ಮಾತನಾಡದೆ, ಹೊಸ ಹುಡುಗರಿದ್ದಾರೆ ನೋಡೋಣ ಎಂದಿದ್ದು ಸಚಿವ ಮಲ್ಲಿಕಾರ್ಜುನ್ ರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯಕ್ಕೆ ಇಬ್ಬರ ಮಧ್ಯೆ ಶೀತಲ ಸಮರ ಜೋರಾಗಿದ್ದು, ವೈಯಕ್ತಿಕ ದ್ವೇಷಕ್ಕೆ ತಿರುಗಿದೆ. ಸ್ವಪಕ್ಷೀಯ ಇಬ್ಬರು ನಾಯಕರ ನಡುವೆ ಹೀಗೇ ಆಗಿರೋದು, ದಾವಣಗೆರೆಯ ಕಾಂಗ್ರೆಸ್‌ನಲ್ಲಿ ಸಂಚಲನ ಸೃಷ್ಟಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ