newsfirstkannada.com

ವರ್ತೂರು ಸಂತೋಷ್ ಅವರ ನಿರ್ಧಾರಕ್ಕೆ ಕಿಚ್ಚ ಬೇಸರ! ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ ಫ್ಯಾನ್ಸ್!

Share :

12-11-2023

    ಕಳೆದ ವಾರ ನಾಮಿನೇಟ್ ಆದ ಸಂತೋಷ್ ಕೈಹಿಡಿದದ್ದೇ ಫ್ಯಾನ್ಸ್

    ಜನರ ತೀರ್ಪಿನ ವಿರುದ್ಧ ಹೋಗೋದಿಲ್ಲ ಎಂದ ಕಿಚ್ಚ ಸುದೀಪ್

    ವರ್ತೂರು ಶೋನಾ ಕ್ವಿಟ್ ಮಾಡಲಿರೋದು ನಿಜಾನಾ?

ಬಿಗ್​ಬಾಸ್​ ಸೀಸನ್ 10 ವಾರದಿಂದ ವಾರಕ್ಕೆ ವೀಕ್ಷಕರನ್ನ ಹೆಚ್ಚಿನ ಸಂಖ್ಯೆಯಲ್ಲಿ ತಲುಪುತ್ತಲೆ ಇದೆ. ವೀಕ್ಷಕರು ಕೂಡ ಈ ಸೀಸನ್​ನ ತುಂಬಾ ಕೂತುಹಲದಿಂದ ನೋಡ್ತಿದ್ದಾರೆ. ಆದರೆ ಇವತ್ತಿನ ಎಪಿಸೋಡ್​ನಲ್ಲಿ ವರ್ತೂರು ಸಂತೋಷ್ ಅವರ ಅಭಿಮಾನಿಗಳಿಗೆ ಶಾಕ್ ಆಗೋದು ಮಾತ್ರಾ ನಿಜ.

ಸತತ ಐದು ವಾರಗಳಲ್ಲಿ ಒಂದು ವಾರ ಬಿಟ್ಟರೂ ನಾಲ್ಕು ವಾರಗಳು ಬಿಗ್ ಮನೆಯ ಸ್ಪರ್ಧಿಯಾಗಿ ವರ್ತೂರು ಸಂತೋಷ್ ಅವರು ಕರುನಾಡ ವೀಕ್ಷಕರನ್ನ ರಂಜಿಸುತ್ತಾ ಬಂದಿದ್ಧಾರೆ. ದುರಾದೃಷ್ಟವಶಾತ್ ವರ್ತೂರು ಅವರಿಗೆ ವೈಯಕ್ತಿಕ ಕಾರಣಾಂತರಗಳಿಂದ ಮನೆಯಿಂದ ಒಂದು ವಾರ ಆಚೆ ಇರ್ಬೇಕಾಗಿ ಬಂದಿತ್ತು. ಇನ್ನು ಆಚೆಯ ಅಷ್ಟು ವೈಯಕ್ತಿಕ ಕೆಲಸಗಳು ಸಮಸ್ಯೆಗಳು ಮುಗಿದ ನಂತರದಲ್ಲಿ ಮತ್ತೆ ಬಿಗ್ ಮನೆಗೆ ರಿ ಎಂಟ್ರಿ ತಗೊಂಡ್ರು ವರ್ತೂರು. ಆದರೆ, ಮನೆಯೊಳಗೆ ಬಂದ ಎರಡೇ ದಿನದಲ್ಲೇ ಮುಖದಲ್ಲಿ ಮಂದಹಾಸವಿರಲಿಲ್ಲ. ಆಚೆ ನಡೆದಿದ್ದರ ಬಗ್ಗೆ ಬಹಳಷ್ಟು ಯೋಚನೆಗಳು ಸಂತೋಷ್ ಕಾಡಿದ್ದು ಸುಳ್ಳಲ್ಲ.

ವರ್ತೂರು ಸಂತೋಷ್
ವರ್ತೂರು ಸಂತೋಷ್

ಕಳೆದ ವಾರ ನಾಮಿನೇಟ್ ಆದ ಸಂತೋಷ್, ವೀಕ್ಷಕರನ್ನು ಬಹು ಮತಗಳಿಂದ ಮನೆಯಲ್ಲಿ ಉಳಿದುಕೊಂಡ್ರು. ಇನ್ನು ಈ ವಾರವೂ ಕೂಡ ವರ್ತೂರು ಸಂತೋಷ್ ಅವ್ರು ನಾಮಿನೇಟ್ ಆಗಿದ್ದಾರೆ. ಜೊತೆಗೆ ಸೇಫ್ ಕೂಡ ಆಗಿದ್ದಾರೆ. ಆದರೆ, ವೈಯಕ್ತಿಕ ಕಾರಣಗಳಿಂದಾಗಿ ವರ್ತೂರು ಶೋನಾ ಕ್ವಿಟ್ ಮಾಡಲಿದ್ದಾರೆ. ಇದನ್ನ ಕೇಳಿ ಬೇಸರಗೊಂಡ ಕಿಚ್ಚ, ನಾನು ಜನರ ತೀರ್ಪಿನ ವಿರುದ್ಧ ಹೋಗೋದಿಲ್ಲ. ನಿಮಗೆ ಬರೋಬ್ಬರಿ 34, 15, 472 ಮತಗಳು ಬಿದ್ದಿವೆ. ಜನ ಇಷ್ಟೊಂದು ಪ್ರೀತಿಸುವಾಗ ನೀವು ಈ ರೀತಿಯ ನಿರ್ಧಾರ ತಗೊಳೋದು ತಪ್ಪು ಎಂದಿದ್ಧಾರೆ. ಜೊತೆಗೆ ಈ ನಿರ್ಧಾರ ಕೇಳಿ ನಾನು ಕೂಡ ಡಿಸಪಾಯಿಂಟ್ ಆಗಿದ್ದೀನಿ ಅಂತ ಕಿಚ್ಚ ವೇದಿಕೆಯಿಂದ ಹೊರ ಹೋಗಿದ್ದಾರೆ.

ಇನ್ನು ಹೊರಗಡೆ ಇವತ್ತಿನ ಪ್ರೋಮೋಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ವರ್ತೂರು ಅಭಿಮಾನಿಗಳಿಗೆ ಇದು ನಿಜಕ್ಕೂ ಶಾಕಿಂಗ್ ಸುದ್ದಿ. ಅವರ ಅಭಿಮಾನಿಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅವರ ಈ ನಿರ್ಧಾರಕ್ಕೆ ಯಾರಿಗೂ ಒಪ್ಪಿಗೆಯಿಲ್ಲ. ಬದಲಿಗೆ ಎಲ್ಲರು ಬಹಳ ಬೇಸರ ಪಟ್ಟುಕೊಳ್ತಿದ್ದಾರೆ.

ವೀಕ್ಷಕರ ಮತಗಳಿಗೆ, ಅವರ ಬೆಂಬಲಕ್ಕೆ ವರ್ತೂರು ತಲೆ ಬಾಗ್ತಾರ ಅಥವಾ ಅಂತಿಮ ನಿರ್ಧಾರ ಮಾಡಿ ಶೋನಾ ಕ್ವಿಟ್ ಮಾಡಿ ಹೊರ ಬರ್ತಾರ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರ್ತೂರು ಸಂತೋಷ್ ಅವರ ನಿರ್ಧಾರಕ್ಕೆ ಕಿಚ್ಚ ಬೇಸರ! ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ ಫ್ಯಾನ್ಸ್!

https://newsfirstlive.com/wp-content/uploads/2023/10/VARTUR-SANTOSH.jpg

Load More