ಐದನೇ ವಾರ ಬಿಗ್‌ಬಾಸ್ ಮನೆಯಲ್ಲಿ ನೋ ಎಲಿಮಿನೇಶನ್ ಆದ್ರೆ..
ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗೋ ಸ್ಪರ್ಧಿ ಇವರೇನಾ?
ಈ ವಾರ ವರ್ತೂರು ಸಂತೋಷ್‌ರಿಂದ ಎಲಿಮಿನೇಶನ್ ಪ್ರಕ್ರಿಯೆ ನಡೆದಿಲ್ಲ
ಬಿಗ್‌ಬಾಸ್ ಸೀಸನ್ 10 ರಿಯಾಲಿಟಿ ಶೋ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಒಂದಲ್ಲಾ ಒಂದು ವಿಚಾರಕ್ಕೆ ಬಿಗ್‌ಬಾಸ್ ಸ್ಪರ್ಧಿಗಳು ಸಖತ್ ಸುದ್ದಿಯಲ್ಲಿದ್ದಾರೆ. ಎಂದಿನಂತೆ ಭಾನುವಾರ ಬಿಗ್‌ಬಾಸ್ ಮನೆಯಿಂದ ಓರ್ವ ಸ್ಪರ್ಧಿ ಎಲಿಮಿನೇಷನ್ ಆಗಿ ಹೊರ ಬರಬೇಕಾಗಿತ್ತು. ಆದರೆ 5ನೇ ವಾರ ಎಲಿಮಿನೇಶನ್ ನಡೆದಿಲ್ಲ. ಇದಕ್ಕೆ ಮುಖ್ಯ ಕಾರಣವೇ ವರ್ತೂರು ಸಂತೋಷ್.
ಹೌದು ಬಿಗ್‌ಬಾಸ್ ಮನೆಯಲ್ಲಿ ನನಗೆ ಇರಲು ಆಗುತ್ತಿಲ್ಲ. ನನ್ನನ್ನು ಹೊರಗಡೆ ಕಳುಹಿಸಿ ಎಂದು ಕಿಚ್ಚ ಸುದೀಪ್ ಮುಂದೆ ವರ್ತೂರು ಸಂತೋಷ್ ಅವರು ಕೇಳಿಕೊಂಡಿದ್ದರು. ಆದರೆ ಸಂತೋಷ್ ಅವರ ಮನವೊಲಿಸಲು ಕಿಚ್ಚ ಸುದೀಪ್ ಅವರು ಸಾಕಷ್ಟು ಪಯತ್ನ ನಡೆಸಿ ವೇದಿಕೆ ಮೇಲಿಂದ ಹೊರಟು ಹೋದರು. ಇದೇ ಕಾರಣಕ್ಕೆ ಬಿಗ್‌ಬಾಸ್ ಸೀಸನ್ 10ರಲ್ಲಿ ಐದನೇ ವಾರ ಯಾವೊಂದು ಸ್ಪರ್ಧಿ ಹೊರಗಡೆ ಬಂದಿರಲಿಲ್ಲ.
ಆದರೆ ಈಗಾಗಲೇ ಶೋ ಶುರುವಾಗಿ 5 ವಾರಗಳು ಕಳೆದಿವೆ. ಸ್ನೇಕ್ ಶ್ಯಾಮ್, ಗೌರೀಶ್ ಅಕ್ಕಿ, ಬುಲೆಟ್ ರಕ್ಷಕ್ ಅವರು ಹೊರಗಡೆ ಬಂದಿದ್ದಾರೆ. 5ನೇ ವಾರ ಎಲಿಮಿನೇಷನ್ ಆಗಿಲ್ಲ. ಆದರೆ ಇದೇ ವಾರದಲ್ಲಿ ಡಬಲ್ ಎಲಿಮಿನೇಷನ್ ಇರಲಿದೆ ಎಂದು ಹೇಳಲಾಗುತ್ತಿದೆ. ಇಶಾನಿ ಹಾಗೂ ನೀತು ವನಜಾಕ್ಷಿ ಈ ಇಬ್ಬರ ನಡುವೆ ಒಬ್ಬರು ಎಲಿಮಿನೇಟ್ ಆಗಿ ಮನೆಯಿಂದ ಹೊರಗಡೆ ಹೋಗುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ