/newsfirstlive-kannada/media/post_attachments/wp-content/uploads/2024/12/GOWTHAMI-1.jpg)
ಬಿಗ್​​ಬಾಸ್​ ಗೇಮ್​​ನಲ್ಲಿ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಂಗಡಿಸಿ, ಎರಡು ಟಿವಿ ಚಾನೆಲ್​​ಗಳನ್ನ ಮುನ್ನಡೆಸುವ ಜವಾಬ್ದಾರಿ ನೀಡಲಾಗಿದೆ. ನಿನ್ನೆಯಿಂದ ಬಿಗ್​ಬಾಸ್ ಮನೆ ಎರಡು ಟಿವಿ ವಾಹಿನಿಯಾಗಿ ಪರಿವರ್ತನೆಗೊಂಡಿದೆ.
ಅಂತೆಯೇ ಟಿವಿ ವಾಹಿನಿಯ ಎದುರಾಳಿ ಸ್ಪರ್ಧಿಗಳಿಗೆ ಟಾಸ್ಕ್ ನೀಡಲಾಗುತ್ತಿದೆ. ಇಂದು ರಾತ್ರಿ ಪ್ರಸಾರವಾಗಲಿರುವ ಎಪಿಸೋಡ್​ಗೆ ಸಂಬಂಧಿಸಿದಂತೆ ಪ್ರೊಮೋವನ್ನು ಕಲರ್ಸ್ ಕನ್ನಡ ಶೇರ್​ ಮಾಡಿದೆ. ಅದರಲ್ಲಿ ಶಿಶಿರ್ ಅವರು, ಐಶ್ವರ್ಯರಿಗೆ ಮೂರು ಹಾಗಲಕಾಯಿ ತಿನ್ನುವಂತೆ ಕೇಳಿಕೊಂಡಿದ್ದಾರೆ. ಅದೇ ರೀತಿ ಗೌತಮಿಗೆ ಎರಡು ಹಸಿ ಮೆಣಸಿನಕಾಯಿ ತಿನ್ನುವ ಟಾಸ್ಕ್​ ನೀಡಲಾಗಿದೆ. ಮೆಣಸಿನಕಾಯಿ ತಿಂದ ಗೌತಮಿ ನೆಲಕ್ಕೆ ಬಿದ್ದು ಹೊರಳಾಡಿ ಕಣ್ಣೀರು ಇಟ್ಟಿದ್ದಾರೆ. ಉಳಿದ ಸ್ಪರ್ಧಿಗಳು ಅವರಿಗೆ ನೀರು ಕೊಟ್ಟು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ:Pushpa 2 The Rule ಸಿನಿಮಾದ ಟಿಕೆಟ್ ಬೆಲೆ ಭಾರೀ ಏರಿಕೆ.. ಅಲ್ಲು ಅರ್ಜುನ್ ಫ್ಯಾನ್ಸ್​ ಬೇಸರ
/newsfirstlive-kannada/media/post_attachments/wp-content/uploads/2024/12/GOWTHAMI-1.jpg)
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರೋ ಮಂಜು, ಇಲ್ಲಿ ಟ್ರಿಮ್ಮರ್ ಇದೆ. ರಜತ್ ಅವರು ತಲೆ ಬೋಳಿಸಿಕೊಳ್ಳಬೇಕು ಎಂದು ಸವಾಲ್ ಹಾಕ್ತೇನೆ ಎಂದಿದ್ದಾರೆ. ಅದಕ್ಕೆ ರಜತ್ ಓಕೆ ಎಂದಿದ್ದು, ಮಂಜು ಬಳಿ ಕೂತಿದ್ದಾರೆ. ಮಂಜು ಟ್ರಿಮ್ ಮಾಡ್ತಿದ್ದಾರೆ. ಇನ್ನು, ಚೈತ್ರ ಹಾಗೂ ತ್ರಿವಿಕ್ರಮ್ ಮಧ್ಯೆ ಗಲಾಟೆ ಆಗಿದೆ. ಮಾತಿನ ಬರದಲ್ಲಿ ಚೈತ್ರಾ ಮುಚ್ಚಿಕೊಂಡು ಕೂತ್ಕೋಬೇಕು. ಅದಕ್ಕೆ ಸಿಟ್ಟಿಗೆದ್ದ ತ್ರಿವಿಕ್ರಮ್ ಚೈತ್ರಾ ಜೊತೆ ಮಾತಿಗೆ ಇಳಿದಿದ್ದಾರೆ.
ಇದನ್ನೂ ಓದಿ:BBK11: ಕೊನೆಗೂ ಬಿಗ್ ಬಾಸ್ ಮನೆಯಿಂದ ಹೊರ ಬಂದ ಸ್ಪರ್ಧಿ; ಈ ವಾರ ಶಾಕಿಂಗ್ ಎಲಿಮಿನೇಷನ್!
ಹ್ಞೂಂ ಅಂತೀಯಾ? ಊಹ್ಞೂಂ ಅಂತೀಯಾ?
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30 #BiggBossKannada11#BBK11#HosaAdhyaya#ColorsKannada#BannaHosadaagideBandhaBigiyaagide#ಕಲರ್ಫುಲ್ಕತೆ#colorfulstory#Kicchasudeepa#BBKPromopic.twitter.com/FrcQkeZz4x— Colors Kannada (@ColorsKannada) December 3, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us