ಬಿಗ್ಬಾಸ್ ಸೀಸನ್ 10 ಸ್ಪರ್ಧಿ ವರ್ತೂರು ಸಂತೋಷ್ ಅರೆಸ್ಟ್
ಒರಿಜಿನಲ್ಲೋ?, ಹುಲಿ ಉಗುರೋ? ನನಗೆ ಗೊತ್ತಿಲ್ಲ ಎಂದ ತಾಯಿ ಮಂಜುಳಾ
10 ವರ್ಷದಿಂದ ಯಾರು ಅದನ್ನ ಗಮನಿಸಿರಲಿಲ್ಲ ಎಂದ ಸಂತೋಷ್ ತಾಯಿ
ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಕಾರಣಕ್ಕೆ ಬಿಗ್ಬಾಸ್ ಸೀಸನ್ 10 ಸ್ಪರ್ಧಿ ವರ್ತೂರು ಸಂತೋಷ್ ಅರೆಸ್ಟ್ ಆಗಿದ್ದಾರೆ. ಅರೆಸ್ಟ್ ಬೆನ್ನಲ್ಲೇ ಅವರ ತಾಯಿ ಮಂಜುಳಾ ನ್ಯೂಸ್ ಫಸ್ಟ್ ಜೊತೆ ಮಾತನಾಡಿದ್ದಾರೆ.
ಮಗ ಧರಿಸಿರುವ ಹುಲಿಯ ಉಗುರಿನ ಪೆಂಡೆಂಟ್ ಕುರಿತಾಗಿ ಮಾತನಾಡಿದ ವರ್ತೂರ್ ಸಂತೋಷ್ ತಾಯಿ ಮಂಜುಳಾ, ಅದು ಹುಲಿ ಉಗುರೋ ಅಥವಾ ಒರಿಜಿನಲ್ ಉಗುರೋ ಅಂತಾ ನನಗೆ ಗೊತ್ತಿಲ್ಲ. ಅಮ್ಮ ಇದನ್ನ ಸಿಟಿಯಲ್ಲಿ ಮಾಡಿಸಿಕೊಂಡು ಬಂದೆ ಅಂದ. ಇದಕ್ಕೆ ಚೈನ್ ಮಾಡಿಸು ಅಂದ ಮಾಡಿಸಿದೆ. ನಾನು ಅಷ್ಟೊಂದು ಡೀಪ್ ಆಗಿ ಹೋಗಿಲ್ಲ. ಒರಿಜಿನಲ್ಲೋ?, ಹುಲಿ ಉಗುರೋ? ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಬಳಿಕ ಮಾತು ಮುಂದುವರಿಸಿದ ಅವರು, 10 ವರ್ಷದ ಹಿಂದೆ ಇದನ್ನ ತೆಗೆದುಕೊಂಡಿದ್ದ. ನನಗೂ ಡೌಟ್ ಇದೆ ಅದು ಒರಿಜಿನಲ್ ಅಲ್ಲ ಅಂತಾ. 10 ವರ್ಷದಿಂದ ಯಾರು ಅದನ್ನ ಗಮನಿಸಿರಲಿಲ್ಲ. ಈಗ ಅದನ್ನ ಗಮನಿಸಿ ಅರೆಸ್ಟ್ ಮಾಡಿಸಿದ್ದಾರೆ ಅಂದರೆ ಜನ ತುಳಿಯುತ್ತಾ ಇದ್ದಾರೆ ತುಳಿಯೋದಕ್ಕೆ ಈ ರೀತಿ ಮಾಡಿದ್ದಾರೆ. ನಾವು ಕಾನೂನು ಹೋರಾಟಕ್ಕೆ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೆವೆ. ಇವನ ಹತ್ತಿರ ಇದೊಂದೆ ಡಾಲರ್ ಇರೋದು. ನನಗೆ ಗೊತ್ತಿದ್ರೆ ಅದನ್ನ ಹಾಕಿಕೊಳ್ಳುತ್ತಾ ಇರಲಿಲ್ಲ. ಯಾರೋ ಏನೋ ಬೇಕಂತಾನೇ ಮಾಡಿರೋದು. ಬೆಳೆಯುತ್ತಾ ಇದನಲ್ಲ. ಬೇಕಂತಾನೇ ತುಳಿಯೋಕೆ ಮಾಡಿದ್ದಾರೆ ಎಂದು ತಾಯಿ ಮಂಜುಳಾ ಪ್ರತಿಕ್ರಿಯಿಸಿದ್ದಾರೆ.
ಪೊಲೀಸರ ತನಿಖೆಗೆ ಸಂಪೂರ್ಣ ಬೆಂಬಲ ಇದೆ. ಬಿಗ್ ಬಾಸ್ ಹೋಗಿದ್ರು ಅಂತಾ ಖುಷಿ ಇತ್ತು ಈ ರೀತಿ ಆಗಿರೋದು ತುಂಬಾ ದುಃಖ ತಂದಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ