/newsfirstlive-kannada/media/post_attachments/wp-content/uploads/2024/10/Bigg-Boss-Jagadeesh-3.jpg)
ಬಿಗ್ ಬಾಸ್ ಸೀಸನ್ 11 ರೋಚಕ ಹಂತ ತಲುಪಿದ್ದು, ಮನೆಯಲ್ಲಿರುವ ಸದಸ್ಯರ ಜಗಳಗಳು ಅತಿರೇಕದ ಎಲ್ಲೆಯನ್ನು ಮೀರಿದೆ. ಟಾಸ್ಕ್‌ಗಳಿಗಿಂತ ಬಿಗ್ ಬಾಸ್ ಸದಸ್ಯರು ಆಡಿದ ಮಾತುಗಳು ಇಡೀ ಮನೆಯಲ್ಲಿ ಸಂಘರ್ಷದ ಕಿಚ್ಚನ್ನು ಹಚ್ಚಿದೆ. ಜಗದೀಶ್ ಅವರು ಇಡೀ ಮನೆಯ ಎಲ್ಲಾ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದು, ಪ್ರತಿಯೊಬ್ಬರು ಜಗದೀಶ್ ಅವರ ಮೇಲೆ ತಿರುಗಿಬಿದ್ದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ವಾಗ್ವಾದ, ವಾದ-ಪ್ರತಿವಾದಕ್ಕೆ ಜಾಗವಿದೆ. ಆದರೆ ದೈಹಿಕವಾಗಿ ಹಲ್ಲೆ ಮಾಡುವಂತಿಲ್ಲ. ಬಿಗ್ ಬಾಸ್ ಮನೆಯಲ್ಲಿ ಯಾರೇ ದೈಹಿಕವಾಗಿ ಹಲ್ಲೆ ಮಾಡಿದ್ರೆ ಅವರನ್ನು ಎಲಿಮಿನೇಟ್ ಮಾಡೋದು ಪಕ್ಕಾ. ಸದ್ಯ ಬಿಗ್ ಬಾಸ್ ಸೀಸನ್ 11ರಲ್ಲೂ ದೈಹಿಕವಾಗಿ ಹಲ್ಲೆ ಮಾಡುವ ಹಂತಕ್ಕೆ ಬಿಗ್ ಬಾಸ್ ಸ್ಪರ್ಧಿಗಳು ಹೋಗಿದ್ದಾರೆ.
/newsfirstlive-kannada/media/post_attachments/wp-content/uploads/2024/10/Bigg-Boss-Jagadeesh.jpg)
ಜಗದೀಶ್ ಅವರ ಮೇಲೆ ಬಿಗ್ ಬಾಸ್ ಮನೆಯ ಎಲ್ಲರೂ ತಿರುಗಿ ಬಿದ್ದಿದ್ರೆ, ಜಗದೀಶ್ ಅವರು ಒಂದು ಕಡೆ ಉಳಿದ ಎಲ್ಲಾ ಸದಸ್ಯರು ಮತ್ತೊಂದು ಕಡೆ ನಿಂತಿದ್ದಾರೆ. ಜಗದೀಶ್ ಅವರ ಮೇಲೆ ಹಂಸಾ, ಚೈತ್ರಾ, ಮಾನಸಾ, ಗೌತಮಿ, ಉಗ್ರಂ ಮಂಜು, ರಂಜಿತ್, ಶಿಶಿರ್, ಭವ್ಯಾ ಎಲ್ಲರೂ ಉರಿದುರಿದು ಬೀಳುತ್ತಿದ್ದಾರೆ. ಇವರೆಲ್ಲರ ಕೋಪಾತಾಪವನ್ನು ಜಗದೀಶ್ ಒಬ್ಬರೇ ನಿಂತು ಧೈರ್ಯವಾಗಿ ಎದುರಿಸುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/10/Bigg-Boss-Jagadeesh-2.jpg)
ಬಿಗ್ ಬಾಸ್ ಮನೆಯಲ್ಲಿ ತಂಡಗಳಾಗಿ ಡಿವೈಡ್ ಆಗೋದು ಹೊಸದೇನು ಅಲ್ಲ. ಆದರೆ ಈ ಬಾರಿ ಸಿನಿಮಾ, ಸೀರಿಯಲ್ ಹಿನ್ನೆಲೆಯಿಂದ ಬಂದ ಎಲ್ಲರೂ ಒಂದು ಗುಂಪು ಸೇರಿದ್ರೆ ಉಳಿದವರು ಮತ್ತೊಂದು. ಜಗದೀಶ್ ಅವರು ಮಾತ್ರ ಏಕಾಂಗಿಯಾಗಿದ್ದಾರೆ. ಇದರ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ವಾಗ್ವಾದ ತಾರಕಕ್ಕೇರಿದೆ.
/newsfirstlive-kannada/media/post_attachments/wp-content/uploads/2024/10/Bigg-boss-Season-11-manasa.jpg)
ಅಸಲಿಗೆ ಜಗದೀಶ್ ಅವರು ಬಿಗ್ ಬಾಸ್ ಮನೆಯ ಎಲ್ಲಾ ಸದಸ್ಯರ ಮೇಲೆ ಜಗಳ ಮಾಡುತ್ತಾ ಇರೋದು ಕಂಟೆಂಟ್‌ಗಾಗಿ ಅಂತ ಅವರೇ ಹೇಳುತ್ತಾರೆ. ಇದೀಗ ಜಗದೀಶ್ ಅವರ ಎಲ್ಲರ ಮೇಲೆ ತಿರುಗಿ ಬೀಳಲು ಕಾರಣವಾಗಿದ್ದು ಮಾನಸ ಅವರು ಬಳಸಿದ ಇದೊಂದು ಮಾತು. ನೀನು ಬಿಗ್ ಬಾಸ್ ಎಕ್ಕಡ ತಿಂದು ಅವರಿಗೆ ದ್ರೋಹ ಮಾಡ್ತಿಯಾ ಅಂತ ಮಾನಸ ಅವರು ಜಗದೀಶ್ ಮೇಲೆ ಆರೋಪಿಸಿದ್ದಾರೆ. ಮಾನಸಾ ಮಾತಿಗೆ ಕೆರಳಿದ ಜಗದೀಶ್ ಅವರ ಮೇಲೆ ಉಗ್ರಂ ಮಂಜು, ರಂಜಿತ್ ಮುಖಾಮುಖಿಯಾಗುತ್ತಾರೆ. ಎಕ್ಕಡ ತಿಂದು ಬಿಗ್ ಬಾಸ್‌ಗೆ ದ್ರೋಹ ಮಾಡಿದ್ದೀರಾ ಅನ್ನೋ ಮಾತು ಬಿಗ್ ಬಾಸ್ ಮನೆಯಲ್ಲಿ ಸದ್ಯ ಕೋಲಹಲಕ್ಕೆ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us