/newsfirstlive-kannada/media/post_attachments/wp-content/uploads/2024/10/Bigg-Boss-Jagadeesh-5.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ಮನೆಯ ಸರಿ, ತಪ್ಪುಗಳ ಪಂಚಾಯ್ತಿ ಮಾಡಿದ್ದು, ಮನೆಯ ಪ್ರತಿಯೊಬ್ಬ ಸದಸ್ಯರಿಗೂ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಬ್ಬರನ್ನೂ ಬಿಡದೆ ಎಲ್ಲರಿಗೂ ಮಾತಿನಲ್ಲೇ ಚಾಟಿ ಬೀಸಿದ ಸುದೀಪ್ ಅವರು ಎಲ್ಲರೂ ಶಾಕ್ ಆಗುವಂತೆ ಮಾಡಿದ್ದಾರೆ.
ಕಳೆದ ವಾರದ ಘಟನೆಯನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿರುವ ಕಿಚ್ಚ ಸುದೀಪ್ ಅವರು ಮನೆಯವರ ಮೇಲೆ ಸಿಕ್ಕಾಪಟ್ಟೆ ಗರಂ ಆದರು. ಪ್ರತಿಯೊಂದು ಮಾತಿನಲ್ಲೂ ಬೆಂಕಿ ಬಾಣಗಳನ್ನೇ ಬಿಟ್ಟಿರುವ ಸುದೀಪ್ ಅವರ ಮಾತಿಗೆ ಬಿಗ್ ಬಾಸ್ ಮನೆಯೇ ಫುಲ್ ಶೇಕ್ ಆಗಿದೆ. ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ಆಡಿರುವ ಒಂದೊಂದು ಮಾತು ವೀಕ್ಷಕರಿಗೆ ಬಹಳಷ್ಟು ಇಷ್ಟವಾಗಿದೆ.
/newsfirstlive-kannada/media/post_attachments/wp-content/uploads/2024/10/Bigg-Boss-Jagadeesh-6.jpg)
ಪ್ರಮುಖವಾಗಿ ಬಿಗ್ ಬಾಸ್ ಮನೆಯಲ್ಲಿ ತಪ್ಪು ಮಾಡಿದವರು ಮನೆಯಿಂದ ಹೊರಗೆ ಹೋಗಿದ್ದಾರೆ. ಜಗದೀಶ್ ಅವರ ಎಲಿಮಿನೇಟ್ ಬಗ್ಗೆಯೇ ಸಾಕಷ್ಟು ಚರ್ಚೆಯಾಗಿದೆ. ಧನರಾಜ್ ಅವರ ಬಳಿ ಜಗದೀಶ್ ಅವರು ಐಶ್ವರ್ಯಾ ಬಗ್ಗೆ ಮಾತನಾಡಿದ್ದಾರೆ. ಐಶ್ವರ್ಯಾ ಅವರು ನನಗೆ ಮಗಳ ರೀತಿ ಕಾಣಿಸುತ್ತಾರೆ. ತಂದೆ-ತಾಯಿ ಇಲ್ಲದೆ ಬೆಳೆದಿರುವ ಮಗು ಅದು ಅವರ ಬಗ್ಗೆ ಮಾತನಾಡಿದ್ರೆ ನನ್ನ ಕಣ್ಣು ತುಂಬುತ್ತೆ ಕಾಣಪ್ಪ. ನನ್ನ ಮಗಳ ಹೆಸರು ಕೂಡ ಐಶ್ವರ್ಯಾ ಎಂದು ಹೇಳಿದ್ದರಂತೆ.
ಜಗದೀಶ್ ಅವರ ಬಗ್ಗೆ ಈ ರೀತಿ ಮಾತನಾಡುತ್ತಾ ಬಿಗ್ ಬಾಸ್ ವೇದಿಕೆಯಲ್ಲಿ ಜಗದೀಶ್ ಅವರ ವಿಡಿಯೋ ಪ್ಲೇ ಮಾಡಲಾಗಿದೆ. VT ಅಲ್ಲಿ ಜಗದೀಶ್ ಅವರು ಕೆಲವೊಂದು ಘಟನೆಗಳು ಆಗಬಾರದಿತ್ತು. ನನ್ನ ಕಡೆಯಿಂದ ತಪ್ಪಾಗಿ ಬಿಟ್ಟಿದೆ. ನನ್ನ ಹಂಸಾ, ಸಾರಿ ಹಂಸಾ. ನನ್ನದೊಂದು ರಿಕ್ವೆಸ್ಟ್ ಇದೆ ಸಾಧ್ಯವಾದ್ರೆ ನನ್ನ ವಾಪಸ್ ಕರೆಸಿಕೋ ಎಂದು ಜಗದೀಶ್ ಅವರು ಕೈ ಮುಗಿದು ಕೇಳಿಕೊಂಡಿದ್ದಾರೆ. ಜಗದೀಶ್ ಅವರ ಈ ಮಾತು ಬಿಗ್ ಬಾಸ್ ಮನೆಯ ಸದಸ್ಯರಿಗೆ ಹೊಸ ತಳಮಳ ತಂದಿದ್ರೆ ಕಿಚ್ಚ ಸುದೀಪ್ ಅವರು ಜಗದೀಶ್ ಅವರ ಕ್ಷಮೆಯಾಚನೆಗೆ ಕೈ ಮುಗಿದು ನಮಸ್ಕರಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/10/Bigg-Boss-Jagadeesh-7.jpg)
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಏನ್ ಬೇಕಾದ್ರೂ ಆಗಬಹುದು. ಮುಂದಿನ ವಾರ ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಬರಬಹುದು. ಆದರೆ ಜಗದೀಶ್ ಅವರು ಸದ್ಯ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದು, ಇದರ ಬಗ್ಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋದು ಬಹಳ ಪ್ರಮುಖವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us