ಸದ್ಯ ಅರ್ಧಂಬರ್ಧ ನಿರ್ಮಾಣಗೊಂಡು ಕೊಂಪೆಯಾಗಿರೋ ಕಟ್ಟಡ
ಇದೇ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಿ ಹೊಸ ಲ್ಯಾಬ್ ಸ್ಥಾಪನೆ
ಪಾಲಿಕೆ ಆವರಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಚಿಂತನೆ
ಬೆಂಗಳೂರು: ಅರ್ಧಂಬರ್ಧ ಕಟ್ಟಿ ಬಿಟ್ಟು ಹಾಳು ಕೊಂಪೆಯಂತಾಗಿರೋ ಈ ಕಟ್ಟಡ ನೋಡಿದ್ರೆ ಇದೇನಪ್ಪ ಹೀಗಿದೆ ಎಂದು ಮೂಗು ಮೂರಿಯೋರೆ ಜಾಸ್ತಿ. ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಹಾಗೇ ಬಿಬಿಎಂಪಿ ಲ್ಯಾಬ್‌ನಲ್ಲಿ ಅಗ್ನಿ ದುರಂತ ನಂತ್ರ ಪಾಲಿಕೆ ಎಚ್ಚೆತ್ತುಕೊಂಡಂತಿದೆ. ಇವಾಗ ನೀವು ನೋಡ್ತಿರೋ ಈ ಕಟ್ಟಡದಲ್ಲೇ ಹೊಸ ಲ್ಯಾಬ್ ನಿರ್ಮಾಣಕ್ಕೆ ಬಿಬಿಎಂಪಿ ನಿರ್ಧರಿಸಿದೆ.
ಬಿಬಿಎಂಪಿ ಗುಣನಿಯಂತ್ರಣ ಘಟಕಕ್ಕೆ ಬೆಂಕಿ ಬಿದ್ದು 9 ಜನ್ರಿಗೆ ಗಾಯವಾಗಿತ್ತು. ಅದ್ರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಇವೆಲ್ಲಾ ಅವಘಡ ನಂತ್ರ ಬಿಬಿಎಂಪಿಗೆ ಜ್ಞಾನೋದಯವಾಗಿದೆ. ಪಾಲಿಕೆ ಆವರಣದಲ್ಲೇ ಮತ್ತೊಂದು ಜಾಗಕ್ಕೆ ಲ್ಯಾಬ್ ಸ್ಥಳಾಂತರಕ್ಕೆ ಪಾಲಿಕೆ ನಿರ್ಧರಿಸಿದೆ. ಹೀಗಾಗಿ ಕೇಂದ್ರ ಕಚೇರಿಯ ಆವರಣದಲ್ಲೇ ಹೊಸ ಕಟ್ಟಡಕ್ಕೆ ಜಾಗವನ್ನು ಪಾಲಿಕೆ ಗುರುತು ಮಾಡಿದೆ.
ಹೊಸ ಲ್ಯಾಬ್ ನಿರ್ಮಾಣಕ್ಕೆ ನಿರ್ಧಾರ
ಪಾಲಿಕೆ ಆವರಣದಲ್ಲಿರೋ ರಾಜ್‌ಕುಮಾರ್ ಗಾಜಿನ ಮನೆ ಹಿಂಭಾಗದಲ್ಲಿರೋ ಜಾಗವನ್ನು ಪಾಲಿಕೆ ನಿಗದಿ ಮಾಡಿದೆ. ಕಡಿಮೆ ಜನ ಓಡಾಟ ಇರುವ ಜಾಗವನ್ನು ಪಾಲಿಕೆ ಆಯ್ದುಕೊಂಡಿದ್ದು, ಬಿಬಿಎಂಪಿ ಮಾಧ್ಯಮ ಕೇಂದ್ರಕ್ಕೆಂದು ಗುರುತಿಸಿದ್ದ ಜಾಗದಲ್ಲಿ ಲ್ಯಾಬ್ ನಿರ್ಮಾಣವಾಗಲಿದೆ. ಸದ್ಯ ಅರ್ಧಂಬರ್ಧ ನಿರ್ಮಾಣಗೊಂಡು ಕಟ್ಟಡ ಕೊಂಪೆಯಾಗಿದೆ. ಇದೇ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಿ ಹೊಸ ಲ್ಯಾಬ್ ಅನ್ನು ಪಾಲಿಕೆ ಸ್ಥಾಪಿಸಲಿದೆ. ಪಾಲಿಕೆ ಆವರಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಚಿಂತನೆ ನಡೆಸಲಾಗ್ತಿದ್ದು, ಅಗ್ನಿ ಅವಘಡದಲ್ಲಿ ಅರ್ಧಗಂಟೆ ಚಿಕಿತ್ಸೆ ಸಿಗದೇ ಗಾಯಾಳುಗಳು ನರಳಾಡಿದ್ದು, ಹೀಗಾಗಿ ಪಾಲಿಕೆ ಆವರಣದಲ್ಲೇ ಪ್ರಾಥಮಿಕ ಚಿಕಿತ್ಸಾ ಕೇಂದ್ರ ಓಪನ್ ಆಗಲಿದೆ. ಈ ಬಗ್ಗೆ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸ್ತಿದೆ.
ಇನ್ನು, ಬೆಂಕಿ ಅವಘಡದ ಬಗ್ಗೆ ಆಂತರಿಕ ತನಿಖೆ ಮಾಡ್ಬೇಕು. ಆದ್ರೆ ಪೊಲೀಸರು ಬೆಂಕಿ ಬಿದ್ದ ಲ್ಯಾಬ್ ಕೊಠಡಿಯ ಕೀ ಕೊಟ್ಟಿಲ್ಲ ಎಂದು ಬಿಬಿಎಂಪಿ ಚೀಫ್ ಇಂಜಿನಿಯರ್ ಪ್ರಹ್ಲಾದ್ ತಿಳಿಸಿದ್ರು.
ಒಟ್ನಲ್ಲಿ, ಬೆಂಕಿ ದುರಂತದ ನಂತರವಾದ್ರೂ ಎಚ್ಚೆತ್ತುಕೊಂಡಿರೋ ಬಿಬಿಎಂಪಿ ಹೊಸ ಲ್ಯಾಬ್ ನಿರ್ಮಾಣಕ್ಕಂತೂ ಚಿಂತನೆ ನಡೆಸಿದೆ. ಆದ್ರೆ ಅದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತೆ ಅನ್ನೋದು ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ