newsfirstkannada.com

ಬಿಬಿಎಂಪಿ ಕಚೇರಿಗೆ ಬೆಂಕಿ ಇಟ್ಟಿದ್ಯಾರು..? ಎಇಇ ಆಡಿಯೋದಲ್ಲಿ ಏನಿದೆ..? ಸ್ಟೋರಿ ಓದಿ!

Share :

12-08-2023

    ಬಿಬಿಎಂಪಿ ಕಚೇರಿಗೂ ಬೆಂಕಿಗೂ ಅನಾದಿಕಾಲದ ನಂಟು!

    ಬಿಂಕಿ ಇಟ್ಟಿದ್ಯಾರು? ಎಕ್ಸ್​ಕ್ಲೂಸಿವ್​​ ಆಡಿಯೋದಲ್ಲಿ ಏನಿದೆ?

    ದಿಢೀರ್​​ ಕಚೇರಿ ಹೊತ್ತಿ ಉರಿಯಲು ಇವರೇ ಕಾರಣವೇ!

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ. ಹೀಗೆ ದೊಡ್ಡ ಹೆಸರು ಗಳಿಸಿರೋ ಪಾಲಿಕೆ ಅಷ್ಟೇ ಯಡವಟ್ಟು ಮಾಡಿ ಕುಖ್ಯಾತಿ ಪಡೆದಿದೆ. ಅದರಲ್ಲೂ ಬಿಬಿಎಂಪಿಗೂ ಬೆಂಕಿಗೂ ದಶಕಗಳಿಂದ ಭಾರೀ ನಂಟು. ಆಗಾಗ ಪಾಲಿಕೆ ಕಚೇರಿಗಳು ಬೆಂಕಿಗೆ ಹೊತ್ತಿ ಉರಿಯೋದು ಕಾಮನ್ ಆಗ್ಬಿಟ್ಟಿದೆ. ಇದೀಗ ಊರಿಗೆಲ್ಲಾ ಬುದ್ಧಿ ಹೇಳೋ ಪಾಲಿಕೆಯಲ್ಲಿ ನಿರ್ಲಕ್ಷ್ಯದ ಕಿಚ್ಚು ಹೊತ್ತಿ ಉರಿದಿದೆ. ಇಲ್ಲಿ ಕಾರ್ಯನಿರ್ವಹಿಸೋ ನೌಕರರ ಜೀವಕ್ಕೆ ಕುತ್ತು ತಂದಿದೆ. ಅಗ್ನಿಯ ನರ್ತನದಲ್ಲಿ ಸಿಲುಕಿ ಅರೆಬೆಂದವರ ಪಾಡು ಹೇಳತೀರದಾಗಿದೆ.

ಅಗ್ನಿ ಕೆನ್ನಾಲಿಗೆಗೆ ಸಿಲುಕಿ ನಿನ್ನೆ ಬಿಬಿಎಂಪಿ ಕಚೇರಿ ಹೊತ್ತಿ ಉರಿದಿತ್ತು. ಕಾರ್ಪೊರೇಷನ್ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಸಿಬ್ಬಂದಿಗೂ ಬೆಂಕು ತಗುಲಿತ್ತು. ಎಲ್ಲೆಲ್ಲೂ ಚೀರಾಟ, ಕಿರುಚಾಟ, ಬೆಂಕಿಯ ಬಲೆಗೆ ಸಿಲುಕಿದವರ ನರಳಾಟ ಮುಗಿಲು ಮುಟ್ಟಿತ್ತು. ಹೀಗೆ ಪಾಲಿಕೆಯ ನಿರ್ಲಕ್ಷ್ಯದ ಬೆಂಕಿಯಲ್ಲಿ ಸಿಲುಕಿದ್ದ ಸಿಬ್ಬಂದಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದಾರೆ.

ಬಿಬಿಎಂಪಿಯಲ್ಲಿ ಅಗ್ನಿ ಅವಘಡ.. ಇಬ್ಬರ ಸ್ಥಿತಿ ಗಂಭೀರ

ನಿನ್ನೆ ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಅಗ್ನಿ ನರ್ತನಕ್ಕೆ ಸಿಲುಕಿ 9 ಮಂದಿ ಅರೆಬೆಂದು ಹೋಗಿದ್ರು. ಇದೀಗ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಗಾಯಗೊಂಡಿದ್ದವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಅಲ್ಲದೇ 9 ಮಂದಿ ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಎಲ್ಲಾ ಗಾಯಾಳುಗಳಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಗಾಯಾಳುಗಳ ಮಾಹಿತಿ

ಬೆಂಕಿಯಲ್ಲಿ ಸಿಲುಕಿ ಗಾಯಗೊಂಡಿದ್ದ ಬಿಬಿಎಂಪಿ ಸಿಬ್ಬಂದಿ 40 ವರ್ಷದ ಶಿವಕುಮಾರ್‌ಗೆ ಶೇಕಡ 25ರಷ್ಟು ಸುಟ್ಟಗಾಯಗಳಾಗಿದ್ದು, ಇವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಮತ್ತೊಬ್ಬ ಸಿಬ್ಬಂದಿ 21 ವರ್ಷ ಜ್ಯೋತಿಗೂ ಶೇಕಡ 28ರಷ್ಟು ಬರ್ನಿಂಗ್ ಆಗಿದ್ದು, ಇವರ ಆರೋಗ್ಯ ಸ್ಥಿತಿಯೂ ಗಂಭೀರವಾಗಿದೆ. ಇನ್ನೂ 35 ವರ್ಷದ ಕಿರಣ್‌ಗೆ 12 ಪರ್ಸೆಂಟ್ ಸುಟ್ಟಗಾಯಗಳಾಗಿದ್ದು, ಡಯಾಲಿಸಿಸ್ ಮಾಡಲಾಗಿದ್ದು, ಆರೋಗ್ಯ ಸ್ಥಿತಿ ಸ್ಬೇಬಲ್ ಆಗಿದೆ. ಇನ್ನೂ 32 ವರ್ಷದ ಮನೋಜ್‌ಗೆ ಶೇಕಡ 17ರಷ್ಟು ಸುಟ್ಟ ಗಾಯಗಳಾಗಿದ್ದು, ಇವರ ಸ್ಥಿತಿ ಸದ್ಯ ನಾರ್ಮಲ್ ಆಗಿದೆ. 37 ವರ್ಷದ ಶ್ರೀನಿವಾಸ್‌ಗೆ ಶೇಕಡ 27ರಷ್ಟು ದೇಹ ಬರ್ನಿಂಗ್ ಆಗಿದ್ದು, ಇವರ ಸ್ಥಿತಿ ಸದ್ಯ ನಾರ್ಮಲ್ ಆಗಿದೆ. 29 ವರ್ಷದ ಸಿರಾಜ್‌ಗೆ 28 ಪರ್ಸೆಂಟ್‌ ಸುಟ್ಟ ಗಾಯಗಳಾಗಿದ್ದು, ಇವರು ಆರೋಗ್ಯವಾಗಿದ್ದಾರೆ. 38 ವರ್ಷದ ಶ್ರೀಧರ್‌ಗೆ 18 ಪರ್ಸೆಂಟ್ ಗಾಯಗಳಾಗಿದ್ದು, ಅವರ ಸ್ಥಿತಿ ನಾರ್ಮಲ್ ಆಗಿದೆ. 47 ವರ್ಷದ ಸಂತೋಷ್ ಕುಮಾರ್‌ಗೆ 11 ಪರ್ಸೆಂಟ್‌ ಬರ್ನಿಂಗ್ ಆಗಿದ್ದು, ಇವರು ಸ್ಥಿತಿ ನಾರ್ಮಲ್ ಆಗಿದೆ. 27 ವರ್ಷದ ವಿಜಯಮಾಲಗೆ 25 ಪರ್ಸೆಂಟ್ ಸುಟ್ಟ ಗಾಯಗಳಾಗಿದ್ದು, ಇವರು ಸದ್ಯ ಆರೋಗ್ಯವಾಗಿದ್ದಾರೆ.
ಇನ್ನೂ ಎಲ್ಲಾ ಸ್ಪೆಷಲಿಸ್ಟ್ ವೈದ್ಯರಿಂದ ಗಾಯಾಳುಗಳಿಗೆ ಟ್ರೀಟ್‌ಮೆಂಟ್ ನಡೆಯುತ್ತಿದೆ. 48 ಗಂಟೆಗಳ ಕಾಲ ಎಲ್ಲರನ್ನೂ ಅಬ್ಸರ್ವೇಷನ್​ನಲ್ಲಿ ಇಟ್ಟಿದ್ದೇವೆ ಎಂದು ವಿಕ್ಟೋರಿಯಾ ಆಸ್ಪತ್ರೆ ನಿರ್ದೇಶಕ ರಮೇಶ್ ಕೃಷ್ಣ ಮಾಹಿತಿ ನೀಡಿದ್ದಾರೆ.

ಆಡಿಯೋದಲ್ಲಿ ಬಿಬಿಎಂಪಿ ಅಗ್ನಿ ದುರಂತದ ಕಥಾನಕ

ಬಿಬಿಎಂಪಿ ಅಗ್ನಿ ದುರಂತದ ಬಗ್ಗೆ ಆಡಿಯೋವೊಂದು ಹೊರಬಿದ್ದಿದೆ. ಈ ಆಡಿಯೋದಲ್ಲಿ ಬಿಬಿಎಂಪಿ ಎಇಇ ಆನಂದ್​ ಹಾಗೂ ನೌಕರರ ಸಂಘದ ಅಧ್ಯಕ್ಷ ಮಾತನಾಡಿದ್ದು, ಬೆಂಕಿ ಅವಘಡಕ್ಕೆ ಕಾರಣವೇನು ಎಂಬ ಮಾಹಿತಿಯನ್ನ ಎಇಇ ಬಾಯ್ಬಿಟ್ಟಿದ್ದಾರೆ.
ಇನ್ನೂ ಬಿಬಿಎಂಪಿ ಅಗ್ನಿ ಅವಘಡದ ಬಗ್ಗೆ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಆಂತರಿಕ ತನಿಖೆಗೆ ಸರ್ಕಾರ ಆದೇಶಿಸಿದೆ. ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಬ್ಬರು ಇಂಜಿನಿಯರ್, ಓರ್ವ ಗುಮಾಸ್ತನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಕಿ ಅವಘಡಕ್ಕೆ ಪಾಲಿಕೆ ಯಡವಟ್ಟುಗಳೇ ಕಾರಣಾನಾ?

ಬಿಬಿಎಂಪಿಯಲ್ಲಿ ಬೆಂಕಿ ಹೊತ್ತಿ ಉರಿಯಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಅಂತ ಗಾಯಾಳು ಸಂಬಂಧಿಕರೊಬ್ಬರು ಕಿಡಿಕಾರಿದ್ದಾರೆ. ಇಷ್ಟು ದೊಡ್ಡ ಪಾಲಿಕೆಗೆ ಪ್ರತ್ಯೇಕ ಲ್ಯಾಬ್‌ ಮಾಡೋಕಾಗಿಲ್ವಾ? ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಒಟ್ಟಾರೆ, ಊರಿಗೆಲ್ಲಾ‌ ರೂಲ್ಸ್ ಮಾಡೋ ಪಾಲಿಕೆಯಲ್ಲೇ ಸೇಫ್ಟಿ ಇಲ್ವಾ? ಊರಿಗೆ ಬುದ್ಧಿ ಹೇಳೋ ಬಿಬಿಎಂಪಿಯ ತಟ್ಟೆಯಲ್ಲೇ ಹೆಗ್ಗಣ‌ ಬಿದ್ದಿರೋದು ಕಾಣ್ತಿಲ್ವಾ? ಅಗ್ನಿ ಸುರಕ್ಷತಾ ನಿಯಮಗಳನ್ನೇ ಗಾಳಿಗೆ ತೂರಿದ್ಯಾ? ಹೀಗೆ ಸಾವಿರಾರು ಪ್ರಶ್ನೆಗಳು ಸಿಲಿಕಾನ್ ಸಿಟಿ ಜನರನ್ನ ಕಾಡ್ತಿರೋದಂತೂ ನಿಜ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಬಿಎಂಪಿ ಕಚೇರಿಗೆ ಬೆಂಕಿ ಇಟ್ಟಿದ್ಯಾರು..? ಎಇಇ ಆಡಿಯೋದಲ್ಲಿ ಏನಿದೆ..? ಸ್ಟೋರಿ ಓದಿ!

https://newsfirstlive.com/wp-content/uploads/2023/08/BBMP_Fire.jpg

Load More