newsfirstkannada.com

ಡಿಕೆ ಶಿವಕುಮಾರ್​​ ವಿರುದ್ಧದ ಕಮಿಷನ್​ ಆರೋಪಕ್ಕೆ ಬಿಗ್​ಟ್ವಿಸ್ಟ್;​ ಸಚಿವರಿಗೆ ಸವಾಲು ಹಾಕಿದ್ದ ಗುತ್ತಿಗೆದಾರರ ಪ್ಲೇಟ್​ಚೇಂಜ್​..!

Share :

15-08-2023

    ಬಿಜೆಪಿ ವಿರುದ್ಧ ಡಿ.ಕೆ.ಶಿವಕುಮಾರ್​ ಸೈಲೆಂಟ್​​ ಟಾಂಗ್..!

    ‘ನಾವೆಲ್ಲೂ 15 ಪರ್ಸೆಂಟ್ ಕಮಿಷನ್ ಕೇಳಿದ್ದಾಗಿ ಹೇಳಿಲ್ಲ’

    ಅಜ್ಜಯ್ಯನ ಮೇಲೆ ಆಣೆ ಹೇಳಿಕೆ ಹಿಂಪಡೆದ ಹೇಮಂತ್!

ಕಮಿಷನ್ ಆರೋಪ ಎಮೋಷನ್​​ನಿಂದ ಹುಟ್ಟಿದೆ. ಅದು ಕೂಡ ಮಧ್ಯವರ್ತಿಗಳಿಂದ ಹರಡಿದ ಸುದ್ದಿ. ಹೀಗೆ ಒಂದೇ ದಿನದಲ್ಲಿ ಬೃಹತ್​​​ ಗುತ್ತಿಗೆದಾರರ ಪ್ಲೇಟ್​ ಚೇಂಜ್​ ಆಗಿದೆ. ಅಜ್ಜಯ್ಯನ ಮೇಲೆ ಆಣೆ ಮಾಡಲಿ ಎಂಬ ಹೇಳಿಕೆ ವಾಪಸ್​​ ಪಡೆದಿದೆ. ಇತ್ತ, ತಮ್ಮ ವಿರುದ್ಧ ಟೀಕೆ ಟಿಪ್ಪಣಿಗೆ ಗುತ್ತಿಗೆ ಪಡೆದಿದ್ದ ಬಿಜೆಪಿ ವಿರುದ್ಧ ಡಿಕೆ ಸೈಲೆಂಟ್​​ ಶಾಕ್​​​ ನೀಡಿದ್ದಾರೆ. ಕಮಿಷನ್​​​ ಕೋಲಾಹಲ ದಿಢೀರ್​​ ಶಾಂತವಾಗಿದೆ. ಪರ್ಸೆಂಟೇಜ್​​​ ಆರೋಪಕ್ಕೆ ಬಗ್ಗದ ಸರ್ಕಾರ, ಎಸ್​ಐಟಿ ತನಿಖೆ ಬಳಿಕವೇ ಬಾಕಿ ಬಿಲ್​​ ಅಂತ ಷರಾ ಬರೆದಿತ್ತು. ಆದ್ರೆ, ನಿನ್ನೆವರೆಗೆ ಹಗ್ಗಜಗ್ಗಾಟ ನಡೆಸಿದ್ದ ಬಿಬಿಎಂಪಿ ಗುತ್ತಿಗೆದಾರರು ಏಕಾಏಕಿ ಯೂಟರ್ನ್​​ ಹೊಡೆದಿದ್ದಾರೆ. ಬಾಕಿ ಬಿಲ್​​​​ ಪಡೆಯಲು ಆರೋಪಗಳ ಮಳೆ ಸುರಿಸಿದ್ದ ಕಾಟ್ರಾಕ್ಟರ್ಸ್​​, ಆಣೆ ಪ್ರಮಾಣದ ಪಟ್ಟು ಬಿಟ್ಟು ಕುಸ್ತಿ ತ್ಯಜಿಸಿದ್ದಾರೆ.

ಬಿಬಿಎಂಪಿ ಗುತ್ತಿಗೆದಾರರು

ರಾತ್ರಿ ಕಳೆದು ಬೆಳಗಾಗುತ್ತಲೇ ಬಾಕಿ ಬಿಲ್​​ ಆರೋಪ ಬದಲು

ಕಾಮಗಾರಿಗಳ ಬಿಲ್​ ಬಾಕಿ ಕಾರಣಕ್ಕೆ ಕಿಡಿಕಿಡಿ ಆಗಿದ್ದ ಗುತ್ತಿಗೆದಾರರು, ಸರ್ಕಾರವನ್ನ ಮಣಿಸಲು ಕಮಿಷನ್​​ ಎಂಬ ಅಸ್ತ್ರ ಪ್ರಯೋಗಿಸಿದ್ದರು. ರಾಜ್ಯ ರಾಜಕೀಯದಲ್ಲಿ ಸಮರಕ್ಕೆ ಜಾಗಟೆ ಬಾರಿಸಿದ ಪರ್ಸೆಂಟೇಜ್​​​​​, ಸೋತ ಕಮಲಕ್ಕೆ ಹುಲ್ಲಿನ ಆಶ್ರಯ ಸಿಕ್ಕಿತ್ತು. ಕಾಂಟ್ರಾಕ್ಟರ್ಸ್​​ ಪರ ನಿಂತ ಕೇಸರಿ ಬ್ರಿಗೇಡ್​​​, ಸರ್ಕಾರವನ್ನ ಮಾತಿನಲ್ಲಿ ಕಟ್ಟಿಹಾಕುವ ಕೆಲಸಕ್ಕೆ ಕೈ ಹಾಕಿದ್ರು. ಆದರೆ ಗುತ್ತಿಗೆದಾರರು ತಾವು ಬಳಸಿದ ಅಸ್ತ್ರಕ್ಕೆ ನಿರೀಕ್ಷಿತ ಫಲ ಸಿಗದ ಕಾರಣ, ಕೈಸುಟ್ಟುಕೊಂಡಂತಾಗಿದೆ.

ಡಿಸಿಎಂ ಡಿ.ಕೆ ಶಿವಕುಮಾರ್​

ವರಸೆ ಬದಲಿಸಿದ್ಯಾಕೆ ಬಿಬಿಎಂಪಿ ಗುತ್ತಿಗೆದಾರರು?

ಇವತ್ತು ಸುದ್ದಿಗೋಷ್ಠಿ ನಡೆಸಿದ ಗುತ್ತಿಗೆದಾರರು, ನಮಗೆ ಯಾವುದೇ ರೀತಿ ಭಯ, ಒತ್ತಡ ಇಲ್ಲ.. ಕಮಿಷನ್ ಆರೋಪ ಮಾಡಿರೋದು ಮಧ್ಯವರ್ತಿಗಳು.. ನಾವು ಯಾವುದೇ ರೀತಿ ಆರೋಪ ಮಾಡಿಲ್ಲ ಅಂತ ಬಿಬಿಎಂಪಿ ಗುತ್ತಿಗೆದಾರ ಸಂಘದ ಅಧ್ಯಕ್ಷ ಮಂಜುನಾಥ್​ ಯೂಟರ್ನ್ ಹೊಡೆದಿದ್ದಾರೆ. ಇನ್ನು, ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಹೇಮಂತ್, ಡಿಸಿಎಂ ವಿರುದ್ಧ ಭಾವುಕನಾಗಿ ಹೇಳಿಕೆ ಕೊಟ್ಟೆ.. ಅಜ್ಜಯ್ಯನ ಮೇಲೆ ಆಣೆ ಮಾಡ್ಲಿ ಅನ್ನೋ ಹೇಳಿಕೆ ಹಿಂಪಡೆಯುತ್ತೇನೆ ಎಂದ್ರು..

ತನಿಖೆ ಬಳಿಕ ಬಿಲ್ ರಿಲೀಸ್​​ ಅನ್ನೋದು ಸರಿಯಲ್ಲ!

ಇತ್ತ, ಸರ್ಕಾರ ಆದೇಶಿಸಿದ ಎಸ್​ಐಟಿ ತನಿಖೆಗೆ BBMP ಗುತ್ತಿಗೆದಾರರ ಸಂಘ ಆಕ್ಷೇಪಿಸಿದೆ. ಸರ್ಕಾರದ ನಡೆಗೆ ನಮ್ಮ ಒಪ್ಪಿಗೆ ಇಲ್ಲ ಅಂತ ಹೇಳಿದೆ. ಇನ್ನು, ಡಿಸಿಎಂ ಭೇಟಿ ಬಳಿಕ ಬಾಕಿ ಬಿಲ್​​​ಗೆ ಡೆಡ್​​ಲೈನ್​​​ ನೀಡ್ತೀವಿ ಅಂತ ಹೇಳಿದ್ದಾರೆ. ಇನ್ನು, ಗುತ್ತಿಗೆದಾರರು ಯೂಟರ್ನ್ ಹೊಡೆದ ಬಗ್ಗೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು​ ನಾನು ಗುತ್ತಿಗೆದಾರರ ಬಗ್ಗೆ ಮಾತನಾಡುವುದಿಲ್ಲ. ಆದರೆ ಅವರನ್ನು ಬಳಸಿಕೊಂಡರಲ್ಲ ಅವರ ಬಗ್ಗೆ ಮಾತಾಡಬೇಕಿದೆ. ನಮ್ಮ ಅಜ್ಜಯ್ಯನ ಸಹವಾಸ ಇವರಿಗೆಲ್ಲ ಗೊತ್ತಿಲ್ಲ ಅಂತ ಹೇಳಿದರು.

ಡಿಸಿಎಂ ಕೂಡ ದಾಖಲೆ ಸಮೇತ ಸಮರಕ್ಕೆ ಸನ್ನದ್ದರಾಗಿ ಕೂತಿದ್ದಾರೆ. ಇತ್ತ ಡಿಕೆಶಿ ವಿರುದ್ಧ ಮುಗಿಬಿದ್ದ ಗುತ್ತಿಗೆದಾರರು, ಈಗ ಏಕಾಕಿ ಪಿನ್​ಡ್ರಾಪ್​ ಸೈಲೆಂಟ್​ ಆಗಿದ್ದಾರೆ. ಆದರೆ ಡಿಸಿಎಂ ಭೇಟಿ ಬಳಿಕ ಡೆಡ್​ಲೈನ್​ ನೀಡೋದಾಗಿ ಹೇಳಿದ್ದು, ಪಿಕ್ಚರ್​​ ಅಭೀ ಖತಂ ನಹಿ ಅಂತ ಸಾರಿದಂತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿಕೆ ಶಿವಕುಮಾರ್​​ ವಿರುದ್ಧದ ಕಮಿಷನ್​ ಆರೋಪಕ್ಕೆ ಬಿಗ್​ಟ್ವಿಸ್ಟ್;​ ಸಚಿವರಿಗೆ ಸವಾಲು ಹಾಕಿದ್ದ ಗುತ್ತಿಗೆದಾರರ ಪ್ಲೇಟ್​ಚೇಂಜ್​..!

https://newsfirstlive.com/wp-content/uploads/2023/07/DK-Shivakumar_2.jpg

Load More