newsfirstkannada.com

ಬಿಬಿಎಂಪಿ ಎಲೆಕ್ಷನ್ ಇನ್ನೂ 3 ತಿಂಗಳು ಅನುಮಾನ; ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಕೊಟ್ಟ ಕಾರಣಗಳೇನು?

Share :

19-06-2023

    ಬಿಬಿಎಂಪಿ ವಾರ್ಡ್ ಪುನರ್ವಿಂಗಡಣೆಯಲ್ಲಿ ಬಹಳಷ್ಟು ಲೋಪಗಳಿವೆ

    ವಾರ್ಡ್ ಪುನರ್ವಿಂಗಡಿಸಲು 12 ವಾರ ಕಾಲಾವಕಾಶ ನೀಡಿದ ಹೈಕೋರ್ಟ್

    ಮತ್ತೆ ಬೃಹತ್ ಮಹಾನಗರ ಪಾಲಿಕೆಯ ಎಲೆಕ್ಷನ್ ಮುಂದೂಡಿಕೆ ಖಚಿತ

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಮುಹೂರ್ತವೇ ಕೂಡಿ ಬರ್ತಿಲ್ಲ. ಮತ್ತೊಮ್ಮೆ ಬೃಹತ್ ಮಹಾನಗರ ಪಾಲಿಕೆಯ ಎಲೆಕ್ಷನ್ ಮುಂದೂಡಿಕೆ ಆಗೋದು ಖಚಿತವಾಗಿದೆ. ಹೊಸದಾಗಿ ವಾರ್ಡ್ ಪುನರ್ವಿಂಗಡಣೆ ಅನಿವಾರ್ಯವೆಂದು ರಾಜ್ಯ ಸರ್ಕಾರ ಹೇಳಿದ್ದು, ಹೈಕೋರ್ಟ್ 12 ವಾರಗಳ ಕಾಲಾವಕಾಶ ನೀಡಿದೆ.

ಬಿಬಿಎಂಪಿ ವಾರ್ಡ್ ಪುನರ್ವಿಂಗಡಣೆಯಲ್ಲಿ ಲೋಪಗಳಿವೆ. ಈ ಲೋಪ ಸರಿಪಡಿಸಿ ಹೊಸದಾಗಿ ವಾರ್ಡ್ ಪುನರ್ವಿಂಗಡಣೆ ಮಾಡಬೇಕಿದೆ. ಹೀಗಂತಾ ಹೈಕೋರ್ಟ್‌ಗೆ ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ಅವರು ಇಂದು ಮನವಿ ಮಾಡಿದ್ರು. ಸಿಜೆ ಪ್ರಸನ್ನ ಬಿ ವರಾಳೆ, ನ್ಯಾ.ಎಂ.ಜಿ.ಎಸ್.ಕಮಲ್ ರಿದ್ದ ಪೀಠ ಹೊಸದಾಗಿ ವಾರ್ಡ್ ಪುನರ್ವಿಂಗಡಿಸಲು 12 ವಾರಗಳ ಕಾಲಾವಕಾಶ ನೀಡಿ ಆದೇಶ ನೀಡಿದೆ. ಈ ಆದೇಶದಿಂದಾಗಿ ಬಿಬಿಎಂಪಿ ಚುನಾವಣೆ ಇನ್ನೂ 3 ತಿಂಗಳ ಕಾಲ ನಡೆಯೋದು ಅನುಮಾನವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಬಿಬಿಎಂಪಿ ಎಲೆಕ್ಷನ್ ಇನ್ನೂ 3 ತಿಂಗಳು ಅನುಮಾನ; ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಕೊಟ್ಟ ಕಾರಣಗಳೇನು?

https://newsfirstlive.com/wp-content/uploads/2023/06/bbmp.jpg

Load More